ಮಂಗಳವಾರ, ಏಪ್ರಿಲ್ 29, 2025
HomeSportsಅದ್ದೂರಿ ಸೀರೆ ಒಡವೆ ಜೊತೆ ಕ್ರೀಡಾಂಗಣಕ್ಕಿಳಿದ ಕ್ರಿಕೆಟರ್…! ಇದು ನೀವೆಂದೂ ನೋಡಿರದ ಪೋಟೋಶೂಟ್…!!

ಅದ್ದೂರಿ ಸೀರೆ ಒಡವೆ ಜೊತೆ ಕ್ರೀಡಾಂಗಣಕ್ಕಿಳಿದ ಕ್ರಿಕೆಟರ್…! ಇದು ನೀವೆಂದೂ ನೋಡಿರದ ಪೋಟೋಶೂಟ್…!!

- Advertisement -

ಬಾಂಗ್ಲಾದೇಶ : ಇತ್ತೀಚಿನ ದಿನಗಳಲ್ಲಿ ಮದುವೆ ಪೋಟೋ ಶೂಟ್ ಗಳು ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗ್ತಿವೆ. ಕೇರಳದ ಜೋಡಿ ಅರೆಬೆತ್ತಲೆಯಾಗಿ ಹಸಿಬಿಸಿ ಪೋಟೋ ಶೂಟ್ ಮಾಡಿಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾತ್ತು.

ಆದ್ರೆ ಬಾಂಗ್ಲಾದೇಶದ ಈ ಮಹಿಳಾ ಕ್ರಿಕೇಟರ್ ಮಾತ್ರ ವಿಭಿನ್ನ ಪೋಟೋ ಶೂಟ್ ನಿಂದ ಜನ ಮೆಚ್ಚುಗೆ ಗಳಿಸಿದ್ದಾರೆ.

ಬಾಂಗ್ಲಾ ದೇಶದ ಮಹಿಳಾ ಕ್ರಿಕೇಟರ್ ಸಂಜಿದಾ ಇಸ್ಲಾಂ ಬೌಂಡರಿಯಾಚೆಗಿನ ಪೋಟೋ ಶೂಟ್ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಭರ್ಜರಿ ಒಡವೆ, ಕಲರ್ ಫುಲ್ ಸೀರೆಯಲ್ಲ ನವವಧುವಾಗಿ ಸಿದ್ಧಗೊಂಡ ಸಂಜಿದಾ ಇಸ್ಲಾಂ ಬ್ಯಾಟ್ ಹಿಡಿದು ಗ್ರೌಂಡ್ ಗಿಳಿದು ಅಲ್ಲೇ ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ಕ್ರಿಕೇಟ್ ಪ್ರೇಮ ಮೆರೆದಿದ್ದಾರೆ.

24 ವರ್ಷದ ಸಂಜಿದಾ ಬಾಂಗ್ಲಾದೇಶದ ರಾಷ್ಟ್ರೀಯ ಕ್ರಿಕೆಟ್ ತಂಡದ ಭರವಸೆಯ ಆಟಗಾರ್ತಿಯಾಗಿದ್ದು, ರಂಗಪುರ್ ನ ಕ್ರಿಕೆಟರ್ ಮಿಮ್ ಮೊಸಾದಿಕ್ ಅವರೊಂದಿಗೆ ಹೊಸಬದುಕಿಗೆ ಕಾಲಿಟ್ಟಿದ್ದಾರೆ.

ವಧುವಿನ ಶೃಂಗಾರದಲ್ಲಿ ಕೇವಲ ಬ್ಯಾಟ್ ಹಿಡಿದು ಪೋಸ್ ನೀಡಿದ್ದು ಮಾತ್ರವಲ್ಲ, ಭರ್ಜರಿ ಕವರ್ ಡ್ರೈವ್, ಫುಲ್ ಶಾಟ್ ಹೊಡೆಯುವ ಮೂಲಕ ಮದುವೆ ನಡುವೆಯೂ ತಮ್ಮ ಕ್ರಿಕೆಟ್ ಪ್ರತಿಭೆ ಮೆರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಪೋಟೋ ಶೂಟ್ ಸಖತ್ ವೈರಲ್ ಆಗಿದ್ದು, ಜನರು ಸಂಜಿದ ಇಸ್ಲಾಂ ಕ್ರಿಕೆಟ್ ಪ್ರೇಮಕ್ಕೆ ಸಲಾಂ ಅಂತಿದ್ದಾರೆ.

ಇನ್ನು ಈ ಕ್ರಿಕೆಟ್ ಪ್ರೀತಿಯನ್ನು ಐಸಿಸಿ ಕೂಡಾ ಶ್ಲಾಘಿಸಿದ್ದು, ಉಡುಗೆ,ಒಡವೆ,ಕ್ರಿಕೆಟ್ ಬ್ಯಾಟ್. ಕ್ರಿಕೆಟರ್ ಗಳ ಫ್ರೀ ವೆಡ್ಡಿಂಗ್ ಶೂಟ್ ಹೀಗಿರುತ್ತೆ ಎಂಬರ್ಥದಲ್ಲಿ ಪೋಟೋ ಹಂಚಿಕೊಂಡಿದೆ.

RELATED ARTICLES

Most Popular