Rainbow 1 Cricket Club : ಹರಾರೆ: ಕ್ರಿಕೆಟ್ ಮೈದಾನದಲ್ಲಿ ಅಂಪೈರ್’ಗಳಿಗೆ ಸುರಕ್ಷತೆಯೇ ದೊಡ್ಡ ಸವಾಲು. ಬ್ಯಾಟ್ಸ್’ಮನ್’ಗಳು ಬಾರಿಸುವ ಚೆಂಡು ಬಡಿದು ಅಂಪೈರ್’ಗಳಿಗೆ ಗಾಯವಾಗಿರುವ ಸಾಕಷ್ಟು ಉದಾಹರಣೆಗಳಿವೆ. ಫೀಲ್ಡರ್’ಗಳು ಎಸೆದ ಚೆಂಡು ಬಡಿದು ಅಂಪೈರ್’ಗಳು ಗಾಯಗೊಂಡದ್ದೂ ಇದೆ. ಹೀಗಾಗಿ ಫೀಲ್ಡ್ ಅಂಪೈರ್’ಗಳು ತಲೆಗೆ ಹೆಲ್ಮೆಟ್ ಧರಿಸಿ ಅಂಪೈರಿಂಗ್ ಮಾಡುವ ಟ್ರೆಂಡ್ ಆರಂಭವಾಗಿದೆ. ಆದರೆ ಇಲ್ಲೊಬ್ಬ ಅಂಪೈರ್ ಕಾಲಿಗೆ ಗಾಯವಾಗಿರುವ ರೀತಿಯನ್ನು ನೋಡಿದರೆ ನೀವು ನಿಜಕ್ಕೂ ಅಚ್ಚರಿ ಪಡ್ತೀರಿ.
ಇಲ್ಲಿ ಬ್ಯಾಟ್ಸ್’ಮನ್ ಬಾರಿಸಿದ ಚೆಂಡು ಅಂಪೈರ್ ಕಾಲಿಗೆ ಬಡಿದಿಲ್ಲ. ಫೀಲ್ಡರ್ ಎಸೆದ ಚೆಂಡೂ ಅಂಪರೈ ಕಾಲಿಗೆ ತಾಗಿಲ್ಲ. ಆದರೂ ಅಂಪರ್ ಮೈದಾನ ದಲ್ಲೇ ಗಾಯಗೊಳ್ಳುತ್ತಾರೆ. ಹೇಗೆ ಗೊತ್ತಾ ? ಇದನ್ನುಕೇಳಿದ್ರೆ ನಿಮಗೆ ಅಚ್ಚರಿಯ ಜೊತೆ ನಗುವೂ ಬರಬಹುದು. ಇದು ನಡೆದಿರುವುದು ಜಿಂಬಾಬ್ವೆಯಲ್ಲಿ.

ಅಷ್ಟಕ್ಕೂ ಅಲ್ಲಿ ಆಗಿದ್ದೇನಂದ್ರೆ, ಜಿಂಬಾಬ್ವೆಯಲ್ಲಿ ಓಲ್ಡ್ ಹರಾರೆಯನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ (Old Hararians Sports Club) ಈ ವರ್ಷದ ನ್ಯಾಷನಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ (2024 National Premier League) ನಡೆಯುತ್ತಿದೆ. ಸೋಗೋ ರೇಂಜರ್ಸ್ (SOGO Rangers) ಮತ್ತು ರೈನ್’ಬೊ 1 ಕ್ರಿಕೆಟ್ ಕ್ಲಬ್ (Rainbow 1 Cricket Club) ತಂಡಗಳ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ.
ಇದನ್ನೂ ಓದಿ : MS Dhoni IPL 2025 : ಐಪಿಎಲ್-2025ರಲ್ಲಿ ಆಡಲಿದ್ದಾರೆ ‘ತಲಾ’ ಧೋನಿ, ಆದರೆ ಕಂಡಿಷನ್ ಅಪ್ಲೈ
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೋಗೋ ರೇಂಜರ್ಸ್ ತಂಡ 44.1 ಓವರ್’ಗಳಲ್ಲಿ 229 ರನ್ನಿಗೆ ಆಲೌಟಾಗಿತ್ತು. ಗುರಿ ಬೆನ್ನಟ್ಟಿದ ರೈನ್’ಬೊ 2 ಕ್ರಿಕೆಟ್ ಕ್ಲಬ್ 45 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿ ಗೆಲುವು ಸಾಧಿಸಿತು. ರೈನ್’ಬೋ 1 ಕ್ರಿಕೆಟ್ ಕ್ಲಬ್ ತಂಡದ ಗೆಲುವಿಗೆ ಕೊನೆಯ ಎಸೆತದಲ್ಲಿ 4 ರನ್’ಗಳ ಅವಶ್ಯಕತೆಯಿತ್ತು.
ಇದನ್ನೂ ಓದಿ : Rahul Dravid Best Coach: ಭಾರತ ಕಂಡ ಕೋಚ್‌ಗಳಲ್ಲಿ ಮಹಾಗುರು ದ್ರಾವಿಡ್ ಅವರೇ ಬೆಸ್ಟ್
ಈ ವೇಳೆ ತಂಡದ ಆಟಗಾರ ಫ್ರಾನ್ಸಿಸ್ ಸ್ಯಾಂಡೆ (Francis Sande), ಜಿಂಬಾಬ್ವೆ ರಾಷ್ಟ್ರೀಯ ತಂಡದ ಆಟಗಾರ, ಸೋಗೋ ರೇಂಜರ್ಸ್ ತಂಡದ ನಾಯಕ ರಯಾನ್ ಬುರ್ಲ್ (Ryan Burl ) ಎಸೆದ ಕೊನೆಯ ಎಸೆತವನ್ನು ಸಿಕ್ಸರ್’ಗಟ್ಟಿ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಗೆದ್ದ ಸಂಭ್ರಮದಲ್ಲಿ ಬ್ಯಾಟನ್ನು ಎತ್ತಿ ಎಸೆದಾಗ ಬ್ಯಾಟ್ ಅಂಪೈರ್ ಕಾಲಿಗೆ ಬಂದು ಬಡಿದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://x.com/mufaddal_vohra/status/1818558302344954025
Bat hits Umpire Cricketers strange celebration, the bat hit the umpire’s leg Rainbow 1 Cricket Club