ಮುಂಬೈ: ಮಹಿಳಾ T20 ಚಾಲೆಂಜ್ 2022 (Womens T20 Challenge 2022) ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡವನ್ನು ಆಯ್ಕೆ ಮಾಡಿದೆ. ಈ ಪೈಕಿ ಖ್ಯಾತ ಆಟಗಾರರಾದ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ದೀಪ್ತಿ ಶರ್ಮಾ ಅವರನ್ನು ಸೂಪರ್‌ನೋವಾಸ್, ಟ್ರೇಲ್‌ಬ್ಲೇಜರ್ಸ್ ಮತ್ತು ವೆಲಾಸಿಟಿ ತಂಡದ ನಾಯಕರನ್ನಾಗಿ ಘೋಷಿಸಿದೆ.
ಮೇ 23 ರಿಂದ ಮೇ 28 ರವರೆಗೆ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬರುವ ಮಹಿಳಾ ಟಿ20 ಚಾಲೆಂಜ್‌ನಲ್ಲಿ ಮೂರು ತಂಡಗಳು ಸ್ಪರ್ಧಿಸಲಿವೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರರ ಜೊತೆಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ತಂಡಗಳ ಮಹಿಳಾ ಆಟಗಾರರು ಸರಣಿಯಲ್ಲಿ ಭಾಗವಹಿಸಲಿ ದ್ದಾರೆ. ಈ ವರ್ಷದ ಮಹಿಳಾ ಟಿ20 ಚಾಲೆಂಜ್‌ನಲ್ಲಿ ಒಟ್ಟು ಹನ್ನೆರಡು ಅಂತಾರಾಷ್ಟ್ರೀಯ ಆಟಗಾರರು ಸ್ಪರ್ಧಿಸಲಿದ್ದಾರೆ. ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿಯು ಒಟ್ಟು 16 ಸದಸ್ಯರನ್ನು ಒಳಗೊಂಡ ಮೂರು ತಂಡಗಳನ್ನು ಆಯ್ಕೆ ಮಾಡಿದೆ.
ಸೂಪರ್‌ನೋವಾಸ್ ತಂಡ :
ಹರ್ಮನ್‌ಪ್ರೀತ್ ಕೌರ್ (ನಾಯಕ), ತಾನಿಯಾ ಭಾಟಿಯಾ (ಉಪನಾಯಕ ), ಅಲಾನಾ ಕಿಂಗ್, ಆಯುಷ್ ಸೋನಿ, ಚಂದು ವಿ, ಡಿಯಾಂಡ್ರಾ ಡಾಟಿನ್, ಹರ್ಲೀನ್ ಡಿಯೋಲ್, ಮೇಘನಾ ಸಿಂಗ್, ಮೋನಿಕಾ ಪಟೇಲ್, ಮುಸ್ಕಾನ್ ಮಲಿಕ್, ಪೂಜಾ ವಸ್ತ್ರಾಕರ್, ಪ್ರಿಯಾ ಪುನಿಯಾ, ರಾಶಿ ಕನೋಜಿಯಾ, ಸೋಫಿ ಎಕ್ಲೆಸ್ಟೋನ್, ಸುನೆ ಲೂಸ್ , ಮಾನ್ಸಿ ಜೋಶಿ
ಸಾಗರೋತ್ತರ ಆಟಗಾರ್ತಿ: ಅಲಾನಾ ಕಿಂಗ್, ಡಿಯಾಂಡ್ರಾ ಡಾಟಿನ್, ಸೋಫಿ ಎಕ್ಲೆಸ್ಟೋನ್, ಸುನೆ ಲೂಸ್
ಟ್ರಯಲ್ಬ್ಲೇಜರ್ಸ್ ತಂಡ :
ಸ್ಮೃತಿ ಮಂಧಾನ (ನಾಯಕ), ಪೂನಂ ಯಾದವ್ (ಉಪನಾಯಕ), ಅರುಂಧತಿ ರೆಡ್ಡಿ, ಹೇಲಿ ಮ್ಯಾಥ್ಯೂಸ್, ಜೆಮಿಮಾ ರಾಡ್ರಿಗಸ್, ಪ್ರಿಯಾಂಕಾ ಪ್ರಿಯದರ್ಶಿನಿ, ರಾಜೇಶ್ವರಿ ಗಾಯಕ್‌ವಾಡ್, ರೇಣುಕಾ ಸಿಂಗ್, ರಿಚಾ ಘೋಷ್, ಎಸ್. ಮೇಘನಾ, ಸೈಕಾ ಇಶಾಕ್, ಸಲ್ಮಾ ಖಾತುನ್, ಶರ್ಮಿನ್ ಅಕ್ಟರ್, ಸೋಜತಾ ಬ್ರೌನ್ ಮಲ್ಲಿಕ್, ಎಸ್.ಬಿ.ಪೋಖರ್ಕರ್
ಸಾಗರೋತ್ತರ ಆಟಗಾರ್ತಿ: ಹೇಲಿ ಮ್ಯಾಥ್ಯೂಸ್, ಸಲ್ಮಾ ಖತುನ್, ಶರ್ಮಿನ್ ಆಕ್ಟರ್, ಸೋಫಿಯಾ ಬ್ರೌನ್
ವೆಲಾಸಿಟಿ ತಂಡ :
ದೀಪ್ತಿ ಶರ್ಮಾ (ನಾಯಕ), ಸ್ನೇಹ ರಾಣಾ (ಉಪನಾಯಕ), ಶಫಾಲಿ ವರ್ಮಾ, ಅಯಾಬೊಂಗಾ ಖಾಕಾ, ಕೆಪಿ ನವಗಿರೆ, ಕ್ಯಾಥರಿನ್ ಕ್ರಾಸ್, ಕೀರ್ತಿ ಜೇಮ್ಸ್, ಲಾರಾ ವೊಲ್ವಾರ್ಡ್ಟ್, ಮಾಯಾ ಸೋನಾವಾನೆ, ನತ್ತಕನ್ ಚಂತಮ್, ರಾಧಾ ಯಾದವ್, ಆರತಿ ಕೇದಾರ್, ಶಿವಾಲಿ ಬಹಾ ಶಿಂಧೆ, ಸಿಮ್ರಾನ್ ಬಹಾ ಶಿಂಧೆ , ಪ್ರಣವಿ ಚಂದ್ರ
ಸಾಗರೋತ್ತರ ಆಟಗಾರರು: ಅಯಾಬೊಂಗಾ ಖಾಕಾ, ಕ್ಯಾಥರಿನ್ ಕ್ರಾಸ್, ಲಾರಾ ವೊಲ್ವಾರ್ಡ್ಟ್, ನತ್ತಕನ್ ಚಂತಮ್
🚨 NEWS 🚨: BCCI awards title sponsorship rights of Women’s T20 Challenge 2022 to My11Circle.
— IndianPremierLeague (@IPL) May 15, 2022
Details 🔽https://t.co/ubKNI4gKy7
Womens T20 Challenge 2022 ವೇಳಾಪಟ್ಟಿ:
ಮೇ 23 – 7:30 PM : ಟ್ರೈಲ್‌ಬ್ಲೇಜರ್ಸ್ vs ಸೂಪರ್ನೋವಾಸ್
ಮೇ-24 – 3:30 PM : ಸೂಪರ್ನೋವಾಸ್ vs ವೆಲಾಸಿಟಿ
ಮೇ-26 – 7:30 PM : ವೆಲಾಸಿಟಿ ವಿರುದ್ಧ ಟ್ರಯಲ್‌ಬ್ಲೇಜರ್ಸ್
ಮೇ-28 – 7:30 PM : ಫೈನಲ್ ಪಂದ್ಯ
ಇದನ್ನೂ ಓದಿ : ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ
ಇದನ್ನೂ ಓದಿ : ಕೆಎಲ್ ರಾಹುಲ್, ರೋಹಿತ್ ಶರ್ಮಾ ವಿಶ್ರಾಂತಿ; ದಕ್ಷಿಣ ಆಫ್ರಿಕಾ ಟಿ20ಗೆ ಟೀಂ ಇಂಡಿಯಕ್ಕೆ ನೂತನ ನಾಯಕ
BCCI Announced Womens T20 Challenge 2022 Squads