BCCI bans Indian journalist : ಟೀಂ ಇಂಡಿಯಾದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾರಿಗೆ ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿರುವ ಪತ್ರಕರ್ತ ಬೋರಿಯಾ ಮಜುಂದಾರ್ಗೆ ಬಿಸಿಸಿಐ ಎರಡು ವರ್ಷಗಳ ನಿಷೇಧವನ್ನು ಹೇರಿದೆ. ಈ ವಿಚಾರವಾಗಿ ವಿಚಾರಣೆ ನಡೆಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ತ್ರಿಸದಸ್ಯ ಪೀಠದಲ್ಲಿದ್ದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣ್ ಸಿಂಗ್ ಧುಮಾಲ್ ಹಾಗೂ ಅಪೆಕ್ಸ್ ಸದಸ್ಯ ಪ್ರಭತೇಜ್ ಸಿಂಗ್ ಭಾಟಿಯಾ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಬೋರಿಯಾ ಮಜುಂದಾರ್ರನ್ನು ಸ್ಟೇಡಿಯಂನ ಒಳಗೆ ಬಿಡದಂತೆ ನಾವು ಭಾರತೀಯ ಕ್ರಿಕೆಟ್ ಮಂಡಳಿಯ ಎಲ್ಲಾ ರಾಜ್ಯ ಘಟಕಗಳಿಗೆ ತಿಳಿಸುತ್ತೇವೆ. ತವರಿನ ಪಂದ್ಯಗಳಿಗೆ ಅವರಿಗೆ ಮಾಧ್ಯಮದ ಮಾನ್ಯತೆ ನೀಡಲಾಗುವುದಿಲ್ಲ. ಅಲ್ಲದೇ ಇವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ನಾವು ಬಿಸಿಸಿಐಗೆ ಪತ್ರ ಬರೆಯಲಿದ್ದೇವೆ. ಅಲ್ಲದೇ ಈ ಬೋರಿಯಾ ಮಜುಂದಾರ್ ಟೀಂ ಇಂಡಿಯಾದ ಯಾವುದೇ ಸದಸ್ಯರ ಸಂದರ್ಶನ ಮಾಡುವಂತಿಲ್ಲ ಎಂದು ಬಿಸಿಸಿಐನ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
ಫೆಬ್ರವರಿಯಲ್ಲಿ ತಿಂಗಳಲ್ಲಿ ಶ್ರೀಲಂಕಾ ವಿರುದ್ಧದ ತವರಿನ ಸರಣಿಯಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದಿಂದ ಕೈ ಬಿಟ್ಟ ಬಳಿಕ ವೃದ್ಧಿಮಾನ್ ಸಾಹಾ ವಾಟ್ಸಾಪ್ನಲ್ಲಿ ಪತ್ರಕರ್ತನಿಂದ ಸಂದೇಶವನ್ನು ಸ್ವೀಕರಿಸಿದ್ದರು. ಸಂದರ್ಶನಕ್ಕೆ ಹಾಜರಾಗುವಂತೆ ಪತ್ರಕರ್ತ ವಿನಂತಿಸಿದ್ದರು. ಆದರೆ ಈ ವಾಟ್ಸಾಪ್ ಮೆಸೇಜ್ಗೆ ಸಾಹಾ ಪ್ರತಿಕ್ರಿಯೆ ನೀಡಿರಲಿಲ್ಲ. ಇದರ ಸ್ಕ್ರೀನ್ ಶಾಟ್ನ್ನು ಸಾಹಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದರು.
ನೀವು ನನಗೆ ಕರೆ ಮಾಡಿಲ್ಲ. ಇನ್ನು ಮುಂದೆ ನಿಮ್ಮ ಸಂದರ್ಶನವನ್ನು ನಾನು ಮಾಡುವುದಿಲ್ಲ. ನಾನು ಅವಮಾನಗಳನ್ನು ಕರುಣೆಯ ದೃಷ್ಟಿಯಿಂದ ನೋಡುವುದಿಲ್ಲ. ಇದನ್ನು ನಾನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ನೀವು ಈ ರೀತಿ ಮಾಡಬಾರದಿತ್ತು ಎಂದು ಪತ್ರಕರ್ತ ಸಂದೇಶ ಕಳುಹಿಸಿದ್ದರು. ಈ ಸಂದೇಶದ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದ ಸಾಹಾ ಭಾರತೀಯ ಕ್ರಿಕೆಟ್ಗೆ ನಾನು ಎಲ್ಲಾ ರೀತಿಯ ಕೊಡುಗೆಗಳನ್ನು ನೀಡಿದ ಬಳಿಕವೂ ಗೌರವಾನ್ವಿತ ಸ್ಥಾನದಲ್ಲಿರುವ ಪತ್ರಕರ್ತರೊಬ್ಬರು ನನ್ನನ್ನು ಎದುರಿಸುವುದು ಈ ರೀತಿಯಲ್ಲೇ..? ಪತ್ರಿಕೋದ್ಯಮ ಎಲ್ಲಿ ಹೋಗಿದೆ..? ಎಂದು ಬೇಸರ ಹೊರ ಹಾಕಿದ್ದರು.
ಈ ಘಟನೆ ಬಳಿಕ ಬಿಸಿಸಿಐ ವೃದ್ಧಿಮಾನ್ ಸಾಹಾರನ್ನು ಸಂಪರ್ಕಿಸಿ ಪತ್ರಕರ್ತನ ಹೆಸರನ್ನು ಬಾಯ್ಬಿಡುವಂತೆ ಹೇಳಿತ್ತು. ಸಾಹಾ ಮೊಜುಂದಾರ್ ಹೆಸರು ಬಾಯ್ಬಿಟ್ಟ ಬಳಿಕ ತ್ರಿ ಸದಸ್ಯ ಪೀಠವನ್ನು ರಚಿಸಿ ಈ ಸಂಬಂಧ ಸೂಕ್ತ ವಿಚಾರಣೆ ಕೈಗೊಂಡ ಬಿಸಿಸಿಐ ಇದೀಗ ಪತ್ರಕರ್ತ ಮೊಜುಂದರ್ಗೆ 2 ವರ್ಷಗಳ ನಿಷೇಧ ಹೇರಿ ಆದೇಶ ಪ್ರಕಟಿಸಿದೆ.
ಇದನ್ನು ಓದಿ : Asha Bhat : ನಾಯಕಿಯಿಂದ ಗಾಯಕಿ ಪಟ್ಟಕ್ಕೆ: ಇದು ರಾಬರ್ಟ್ ಬೆಡಗಿಯ ಹೊಸ ಕಹಾನಿ
ಇದನ್ನೂ ಓದಿ : Vivek Agnihotri : ದಿ ಕಾಶ್ಮೀರಿ ಫೈಲ್ಸ್ ಬಗ್ಗೆ ಅಪಪ್ರಚಾರ : ವೀಕಿಪಿಡಿಯಾ ವಿರುದ್ಧ ವಿವೇಕ್ ಅಗ್ನಿಹೋತ್ರಿ ಗರಂ
BCCI bans Indian journalist Boria Majumdar for two years over Wriddhiman Saha threat episode