Mobile Care Tips : ಐಫೋನ್‌ ಅಥವಾ ಎಂಡ್ರಾಯ್ಡ್‌ ಫೋನ್‌ ಅನ್ನು ವೈರಸ್‌ನಿಂದ ರಕ್ಷಿಸುವುದು ಹೇಗೆ?

ಸ್ಮಾರ್ಟ್‌ಫೋನ್‌ಗಳ ಜನಪ್ರಿಯತೆ ಮತ್ತು ಅವುಗಳ ನಮ್ಮ ಅವಲಂಬನೆಯು ಸೈಬರ್‌ ಕ್ರೈಮ್‌ಗಳು ಹೆಚ್ಚಾಗುವುದಕ್ಕೆ ಕಾರಣವಾಗಿದೆ (Mobile Care Tips). ನಿಮಗೆ ತಿಳಿಯದೇ ಮಾಲ್‌ವೇರ್‌ಗಳು ನಿಮ್ಮ ಐಫೋನ್‌ ಮತ್ತು ಎಂಡ್ರಾಯ್ಡ್‌ ಫೋನ್‌ಗಳಿಗೆ ಲಿಂಕ್‌ ಅಥವಾ ಆಪ್‌ಗಳ ಮೂಲಕ ಬರಬಹುದು. ಮೊಬೈಲ್‌ ಡಿವೈಸ್‌ಗಳಲ್ಲಿ ಈ ವೈರಸ್‌ಗಳು ನಿಮ್ಮ ಆಪರೇಟಿಂಗ್‌ ಸಿಸ್ಟಂನಲ್ಲಿನ ದುರ್ಬಲ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಡೇಟಾಗಳನ್ನು ಕದಿಯುವುದು, ಹಣಕಾಸಿನ ಲಾಭ ಅಥವಾ ನೆಟ್‌ವರ್ಕ್‌ ಭ್ರಷ್ಟಾಚಾರ ಮುಂತಾದವುಗಳಿಗೆ ಕಾರಣವಾಗುತ್ತದೆ.

ಸಾಮನ್ಯವಾಗಿ ಡೇಟಾ ಹಂಚಿಕೆಯ ಸಾಮರ್ಥ್ಯವನ್ನು ಅಪ್ಲಿಕೇಶನ್‌ಗಳ ನಡುವೆ ನಿರ್ಬಂಧಿಸಲಾಗುತ್ತದೆ, ಆದರೆ ಕೆಲವು ಅಪ್ಲಿಕೇಶನ್‌ಗಳು ಡೇಟಾವನ್ನು ದುರುಪಯೋಗಗೊಳಿಸಿಕೊಳ್ಳುತ್ತವೆ ಎಂದು ಶಂಕಿಸಲಾಗಿದೆ. ಇದರಿಂದಾಗಿ ಆ ಅಪ್ಲಿಕೇಶನ್‌ಗಳ ಬಳಕೆದಾರರು ಸೈಬರ್‌ ಅಪರಾಧಗಳಿಗೆ ಹೆಚ್ಚು ಗುರಿಯಾಗುತ್ತಾರೆ. ಈ ಪ್ರಕರಣಗಳು ಐಫೋನ್‌ಗಳು ಮತ್ತು ಎಂಡ್ರಾಯ್ಡ್‌ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಕೆಟ್ಟ ಅಪ್ಲಿಕೇಶನ್‌ಗಳು ಇನ್ಫೆಕ್ಟೆಡ್‌ ಫೈಲ್‌ ಅಟ್ಯಾಚ್‌ಮೆಂಟ್‌ಗಳು, ಮತ್ತು ಸಂಶಯಾಸ್ಪದ ವೆಬ್‌ಸೈಟ್‌ಗಳ ಮೂಲಕ ಸಂಭವಿಸುತ್ತವೆ. ಹಾಗಾಗಿ ಇಂಟರ್‌ನೆಟ್‌ನಲ್ಲಿ ಬ್ರೌಸ್‌ ಮಾಡುವಾಗ ಅಥವಾ ಆಪ್‌ಗಳನ್ನು ಡೌನ್‌ಲೋಡ್‌ ಮಾಡುವಾಗ ಎಚ್ಚರವಾಗಿರುವುದು ಬಹಳ ಮುಖ್ಯ. ಸ್ವಲ್ಪ ಎಚ್ಚರ ತಪ್ಪಿದರೂ ನೀವು ಸೈಬರ್‌ ದಾಳಿಗೆ ಬಲಿಯಾಗಬಹುದು.

ನಿಮ್ಮ ಫೋನ್‌ ಅನ್ನು ವೈರಸ್‌ನಿಂದ ರಕ್ಷಿಸುವುದು ಹೇಗೆ?

  • ನಿಮ್ಮ ಮೊಬೈಲ್‌ ಅನ್ನು ಭವಿಷ್ಯದ ವೈರಸ್‌ಗಳ ವಿರುದ್ಧ ರಕ್ಷಿಸುವುದು ಬಹಳ ಅವಶ್ಯಕ. ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
  • ಸಾಮಾನ್ಯವಲ್ಲದ ಪಾಪ್‌–ಅಪ್‌ಗಳು ಅಥವಾ ಪಠ್ಯ ಸಂದೇಶಗಳು, ಸಾಮಾಜಿಕ ಮಾಧ್ಯಮ ಫೋಸ್ಟ್‌ಗಳು ಅಥವಾ ಇಮೇಲ್‌ಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ. ಏಕೆಂದರೆ ಅವರ ಬಲೆಗೆ ಬೀಳುವ ಸಾಧ್ಯತೆ ಇರುತ್ತದೆ.
  • ಗೂಗಲ್‌ ಆಪ್‌ ಅಥವಾ ಆಪಲ್‌ನ ಆಪ್‌ ಸ್ಟೋರ್‌ನಂತಹ ಅಧಿಕೃತ ಅಪ್ಲಿಕೇಶನ್‌ ಸ್ಟೋರ್‌ಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ಅಲ್ಲದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡುವ ಮೊದಲು ಅದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ. ಇಲ್ಲಿಯೂ ಸಹ ಮಾಲ್‌ವೇರ್‌ ಹೊಂದಿರುವ ಕೆಲವು ಅಪ್ಲಿಕೇಶನ್‌ಗಳು ಇರುತ್ತವೆ.
  • ಮೊಬೈಲ್‌ಗಳನ್ನು ಪದೇ ಪದೇ ಮೊಡಿಫೈ ಮಾಡುವುದನ್ನು ತಪ್ಪಿಸಿ.
  • ಆಪ್‌ಗಳನ್ನು ಸ್ಥಾಪಿಸುವ ಮೊದಲು ಅಪ್ಲಿಕೇಶನ್‌ಗಳ ಅನುಮತಿಗಳನ್ನು ಪರಿಶೀಲಿಸಿ. ಅದನ್ನು ಕುರುಡರಾಗಿ ನಂಬುವುದರ ಬದಲು ಅಪ್ಲಿಕೇಶನ್‌ ಏನೇನ್ನು ಎಕ್ಸ್‌ಸ್‌ ಮಾಡಿಕೊಳ್ಳುತ್ತದೆ ಎಂಬುದನ್ನು ತಿಳಿಯಿರಿ.
  • ನಿಮ್ಮ ಡೇಟಾಗಳನ್ನು ನಿಯಮಿತವಾಗಿ ಬ್ಯಾಕಪ್‌ ಮಾಡಿ ಮತ್ತು ನಿಮ್ಮ ಫೋನ್‌ ಸಾಫ್ಟವೇರ್‌ ಅನ್ನು ಇತ್ತಿಚಿನ ಆವೃತ್ತಿಗೆ ನವೀಕರಿಸಿ(ಅದು ಇತ್ತೀಚಿನ ಭದ್ರತಾ ಪ್ಯಾಕ್‌ಗಳನ್ನು ಹೊಂದಿರುತ್ತದೆ).
  • ಅನುಮಾನಾಸ್ಪದ ಚಟುವಟಿಕೆಗಳಿಗಾಗಿ ನಿಮ್ಮ ಫೋನ್‌ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ. ಅಂದರೆ ಆಗಾಗ ಚೆಕ್ ಮಾಡುತ್ತಿರಿ.
  • ಸ್ಪೀಡ್‌ ಕ್ಲೀನ್‌, ಸೂಪರ್‌ ಕ್ಲೀನ್‌ ಮತ್ತು ರಾಕೆಟ್‌ ಕ್ಲೀನರ್‌ನಂತಹ ಆಪ್ಟಿಮೈಜ್‌ ಮತ್ತು ಕ್ಲೀನಿಂಗ್‌ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡುವುದನ್ನು ತಪ್ಪಿಸಿ. ಫೆಬ್ರವರಿ 2020 ರಲ್ಲಿ, ಹಲವಾರು ದುರುದ್ದೇಶಪೂರಿತ ಎಂಡ್ರಾಯ್ಡ್‌ ಆಪ್ಲಿಕೇಶನ್‌ಗಳು ಕ್ಲೀನರ್‌ಗಳು ಮತ್ತು ಆಪ್ಟಿಮೈಜರ್‌ಗಳು ಮಾರುವೇಷದಲ್ಲಿ ಕಂಡುಬಂದಿದ್ದವು.

ಇದನ್ನೂ ಓದಿ : Google Warns for inappropriate content viewers: ವೆಬ್‌ ಬ್ರೌಸರ್ ನಲ್ಲಿ, ನಿಮ್ಮ ಮೊಬೈಲಲ್ಲಿ ಗೂಗಲ್ ಈ ವಾರ್ನಿಂಗ್ ತೋರಿಸಿದ್ರೆ ಅವಾಯ್ಡ್ ಮಾಡ್ಬೇಡಿ!!! ಹುಷಾರ್….

ಇದನ್ನೂ ಓದಿ : Government Mobile Apps:: ಯಾರ ಕಿರಿಕಿರಿಯಿಲ್ಲದೇ ಪ್ರಯಾಣ ಮಾಡಲು ಸರ್ಕಾರದ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ!

(Mobile care tips How to protect your iphone and android from virus)

Comments are closed.