ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತೀಯ ಕ್ರಿಕೆಟ್ ಆಟಗಾರರ ಒಪ್ಪಂದವನ್ನು (BCCI Central Contract List 2022) ನವೀಕರಣ ಮಾಡಿದೆ. ಎ ಗ್ರೇಡ್‌ನಲ್ಲಿದ್ದ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಅವರಿಗೆ ಹಿಂಬಡ್ತಿ ನೀಡಲಾಗಿದ್ದು, ಸೂರ್ಯಕುಮಾರ್ ಯಾದವ್, ಮಯಾಂಕ್ ಅಗರ್‌ವಾಲ್ ಅವರು ಗುತ್ತಿಗೆಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಕುಲದೀಪ್ ಯಾದವ್, ನವದೀಪ್ ಸೈನಿ ಅವರಿಗೆ ಕೋಕ್ ನೀಡಲಾಗಿದೆ.
ರಾಷ್ಟ್ರೀಯ ಕ್ರಿಕೆಟಿಗರಿಗೆ ಕೇಂದ್ರ ಗುತ್ತಿಗೆ ಪಟ್ಟಿಗಳ ಅಡಿಯಲ್ಲಿ (BCCI Central Contract List 2022) ನಾಲ್ಕು ದರ್ಜೆಯ ಸಂಭಾವನೆಯನ್ನು ನೀಡುತ್ತಿದೆ. ಗ್ರೇಡ್ A+ ಅಡಿಯಲ್ಲಿ ಆಟಗಾರರಿಗೆ ವಾರ್ಷಿಕ 7 ಕೋಟಿ ವೇತನ ವನ್ನು ನೀಡಲಾಗುತ್ತದೆ. ಅಂತೆಯೇ ಗ್ರೇಡ್ A ಆಟಗಾರರಿಗೆ 5 ಕೋಟಿ, B ಗ್ರೇಡ್ ಮತ್ತು ಗ್ರೇಡ್ C ಆಟಗಾರರಿಗೆ ಕ್ರಮವಾಗಿ 3 ಕೋಟಿ ಮತ್ತು 1 ಕೋಟಿಯನ್ನು ಬಿಸಿಸಿಐ ನೀಡುತ್ತಿದೆ. 2021ರಲ್ಲಿ ಎ ಗ್ರೇಡ್‌ನಲ್ಲಿದ್ದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರು ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿಅವರಿಗೆ ಹಿಂಭಡ್ತಿ ನೀಡಲಾಗಿದೆ. ಅಲ್ಲದೇ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಎ ಗ್ರೇಡ್ ನಿಂದ ಗ್ರೇಡ್ ಸಿ ಗುತ್ತಿಗೆ ಪಟ್ಟಿಗೆ ಇಳಿಸಲಾಗಿದೆ. 2021 ರಲ್ಲಿ 28 ರಂತೆ ಒಟ್ಟು 27 ಭಾರತೀಯ ಕ್ರಿಕೆಟಿಗರನ್ನು 2022 ರಲ್ಲಿ ಕೇಂದ್ರ ಒಪ್ಪಂದದ ಪಟ್ಟಿಯಲ್ಲಿ ಹೆಸರಿಸಲಾಗಿದೆ.

BCCI Central Contract List 2022 ಗುತ್ತಿಗೆ ಶ್ರೇಣಿಗಳ ವಾರ್ಷಿಕ ವೇತನ :
ಗ್ರೇಡ್ A+ INR 7 ಕೋಟಿ
ಗ್ರೇಡ್ A INR 5 ಕೋಟಿ
ಗ್ರೇಡ್ ಬಿ INR 3 ಕೋಟಿಗಳು
ಗ್ರೇಡ್ C INR 1 ಕೋಟಿ
2022 ರಲ್ಲಿ BCCI ಯಿಂದ ವಾರ್ಷಿಕ ಒಪ್ಪಂದದ ವೇತನವನ್ನು ಹೊಂದಿರುವ ಆಟಗಾರರ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
BCCI Central Contract List 2022 : ಆಟಗಾರರ ಸಂಪೂರ್ಣ ಪಟ್ಟಿ ಮತ್ತು ಅವರ ಸಂಬಳ:
ಗ್ರೇಡ್ ಎ+: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ
ಗ್ರೇಡ್ ಎ: ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ರಿಷಬ್ ಪಂತ್, ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಶಮಿ.
ಗ್ರೇಡ್ ಬಿ: ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾ.
ಗ್ರೇಡ್ ಸಿ: ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಹನುಮ ವಿಹಾರಿ, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ಶುಭಮನ್ ಗಿಲ್, ಶಿಖರ್ ಧವನ್, ಯುಜ್ವೇಂದ್ರ ಚಾಹಲ್, ವೃದ್ಧಿಮಾನ್ ಸಹಾ, ಮಯಾಂಕ್ ಅಗರ್ವಾಲ್.
ಇದನ್ನೂ ಓದಿ : ಕಿರಿಯ ವಯಸ್ಸಿನಲ್ಲೇ ಹಿರಿಯರ ರಾಷ್ಟ್ರೀಯ ಚೆಸ್ ಚಾಂಪಿಯನ್ ಆದ ಯುವ ಆಟಗಾರ್ತಿ ದಿವ್ಯಾ ದೇಶಮುಖ್
ಇದನ್ನೂ ಓದಿ : ದೀಪಕ್ ಚಹರ್ ಬದಲು ಚೆನ್ನೈ ತಂಡ ಸೇರ್ತಾರಾ ಇಶಾಂತ್ ಶರ್ಮಾ, ಸಂದೀಪ್ ವಾರಿಯರ್
( BCCI Central Contract List 2022 : pujara, rahane, pandya demote, Full List of Players and their Salary)