BCCI paid income tax: 2021-22ಸಾಲಿನ ಆದಾಯ ತೆರಿಗೆ ಮೊತ್ತ 1,159 ಕೋಟಿ ರೂ. ಪಾವತಿಸಿದ ಬಿಸಿಸಿಐ, ಡೀಟೇಲ್ಸ್ ಇಲ್ಲಿದೆ

ಮುಂಬೈ : BCCI paid income tax : ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದೇ ಕರೆಸಿಕೊಳ್ಳುವ ಬಿಸಿಸಿಐ (Board of Control for Cricket in India – BCCI) 2021-22ನೇ ಸಾಲಿನ ಆದಾಯ ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡಿದೆ.

2021-22ನೇ ಸಾಲಿನಲ್ಲಿ ಬಿಸಿಸಿಐ ಪಾವತಿಸಿರುವ ತೆರಿಗೆ ಮೊತ್ತ ಬರೋಬ್ಬರಿ 1,159 ಕೋಟಿ ರೂಪಾಯಿ (BCCI paid eye-watering Rs 1,159 crore income tax) . ಇದು ಈ ಹಿಂದಿನ ವರ್ಷ ಬಿಸಿಸಿಐ ಪಾವತಿಸಿದ ಆದಾಯ ತೆರಿಗೆಗಿಂತ 37% ಹೆಚ್ಚು. . 2020-21ನೇ ಸಾಲಿನಲ್ಲಿ ಬಿಸಿಸಿಐ 844.92 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿತ್ತು. ಕಳೆದ 5 ವರ್ಷಗಳಲ್ಲಿ ಬಿಸಿಸಿಐ ಪಾವತಿಸಿರುವ ಆದಾಯ ತೆರಿಗೆ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಗೆ ನೀಡಿದ್ದಾರೆ.

2021-22ನೇ ಸಾಲಿನಲ್ಲಿ ಬಿಸಿಸಿಐ 7,606 ಕೋಟಿ ರೂಪಾಯಿ ಆದಾಯವನ್ನು ತೋರಿಸಿದೆ. ಇದೇ ವೇಳೆ 2021-22ನೇ ಸಾಲಿನಲ್ಲಿ ಬಿಸಿಸಿಐ 3,064 ಕೋಟಿ ರೂಪಾಯಿ ವೆಚ್ಚವನ್ನೂ ತೋರಿಸಿದೆ. 2020-21ನೇ ಸಾಲಿನಲ್ಲಿ ಬಿಸಿಸಿಐ 4,735 ಕೋಟಿ ರೂಪಾಯಿ ಆದಾಯ ಮತ್ತು 3,080 ಕೋಟಿ ರೂಪಾಯಿ ವೆಚ್ಚವನ್ನು ತೋರಿಸಿತ್ತು. 2020-21ನೇ ಸಾಲಿಗೆ ಹೋಲಿಸಿದರೆ ಬಿಸಿಸಿಐ ಆದಾಯದಲ್ಲಿ 2,871 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಇದನ್ನೂ ಓದಿ : Asia Cup 2023: ಸ್ಟಾರ್ ಸ್ಪೋರ್ಟ್ಸ್ ಪ್ರೋಮೋದಲ್ಲಿ ಕೊಹ್ಲಿಯೇ ಕಿಂಗ್, ಕ್ಯಾಪ್ಟನ್ ರೋಹಿತ್ ಶರ್ಮಾ ಎಲ್ಲಿ?

5 ವರ್ಷಗಳಲ್ಲಿ ಬಿಸಿಸಿಐ ಪಾವತಿಸಿರುವ ಆದಾಯ ತೆರಿಗೆ ಮೊತ್ತ:

  • 2021-22ನೇ ಹಣಕಾಸು ವರ್ಷ: 1,159 ಕೋಟಿ ರೂ.
  • 2020-21ನೇ ಹಣಕಾಸು ವರ್ಷ: 844.92 ಕೋಟಿ ರೂ.
  • 2019-20 ನೇ ಹಣಕಾಸು ವರ್ಷ: 882.29 ಕೋಟಿ ರೂ.
  • 2018-19 ನೇ ಹಣಕಾಸು ವರ್ಷ: 815.08 ಕೋಟಿ ರೂ.
  • 2017-18 ನೇ ಹಣಕಾಸು ವರ್ಷ: 596.63 ಕೋಟಿ ರೂ.

2023ನೇ ಸಾಲಿನ ಐಸಿಸಿ ವಿಶ್ವಕಪ್ ಟೂರ್ನಿಗೆ ಭಾರತವೇ ಆತಿಥ್ಯ ವಹಿಸಿದ್ದು, ಸರ್ಕಾರಕ್ಕೆ ಐಸಿಸಿ 963 ಕೋಟಿ ರೂಪಾಯಿ ತೆರಿಗೆ ಪಾವತಿಸಬೇಕಿದೆ. ಐಸಿಸಿ ಪರವಾಗಿ ಈ ಮೊತ್ತವನ್ನು ಬಿಸಿಸಿಐ ಪಾವತಿ ಮಾಡಲಿದೆ.

BCCI paid income tax: The income tax amount for 2021-22 is Rs 1,159 crore. Paid BCCI, details are here

Comments are closed.