ಭಾನುವಾರ, ಏಪ್ರಿಲ್ 27, 2025
HomeSportsCricketKarishma Kotak : ಕ್ರಿಕೆಟ್ ಆ್ಯಂಕರಿಂಗ್‌ನ ಶಾಕಿಂಗ್ ಸತ್ಯ ಬಿಚ್ಚಿಟ್ಟ ಬಾಲಿವುಡ್ ನಟಿ ಕರಿಷ್ಮಾ ಕೋಟಕ್...

Karishma Kotak : ಕ್ರಿಕೆಟ್ ಆ್ಯಂಕರಿಂಗ್‌ನ ಶಾಕಿಂಗ್ ಸತ್ಯ ಬಿಚ್ಚಿಟ್ಟ ಬಾಲಿವುಡ್ ನಟಿ ಕರಿಷ್ಮಾ ಕೋಟಕ್ !

- Advertisement -

ಮುಂಬೈ: ಕ್ರಿಕೆಟ್ ಲೋಕದಲ್ಲಿ ಒಂದಷ್ಟು ಮಂದಿ ಮೋಹಕ ಮಹಿಳಾ ಆ್ಯಂಕರ್’ಗಳಿದ್ದಾರೆ. ಕ್ರೀಡಾ ಭಾಷೆಯಲ್ಲಿ ಇವರನ್ನು ಸ್ಪೋರ್ಟ್ಸ್ ಹೋಸ್ಟರ್ಸ್ (Sports Hosters) ಅಥವಾ ಸ್ಪೋರ್ಟ್ಸ್ ಪ್ರೆಸೆಂಟರ್ (Sports Presenters) ಅಂತ ಕರೀತಾರೆ. ಭಾರತದಲ್ಲಿ ಮೊದಲು ಕ್ರಿಕೆಟ್”ನಲ್ಲಿ ಮಹಿಳಾ ಆ್ಯಂಕರ್ ಆಗಿ ದೊಡ್ಡ ಹೆಸರು ಮಾಡಿದವರು ನಟಿ ಮಂದಿರಾ ಬೇಡಿ (Mandira Bedi). ನಂತರ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿಯವರ ಪತ್ನಿ ಮಯಾಂತಿ ಲ್ಯಾಂಗರ್ (Mayanti Langer). ಇವರಿಬ್ಬರ ಮಧ್ಯೆ ಒಂದಷ್ಟು ಮಂದಿ ನಟಿಯರು ಕ್ರಿಕೆಟ್ ಆ್ಯಂಕರಿಂಗ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ನಟಿ ಕಂ ಮಾಡೆಲ್ ಕರಿಷ್ಮಾ ಕೋಟಕ್ (Karishma Kotak) .

ಲಂಡನ್ ಮೂಲದವರಾದ 40 ವರ್ಷದ ಕರಿಷ್ಮಾ ಕೋಟಕ್ 2013ರ ಐಪಿಎಲ್ ಮತ್ತು 2019ರ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಆ್ಯಂಕರ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕ ಪ್ರೀಮಿಯರ್ ಲೀಗ್”ನಲ್ಲೂ ಕಾಣಿಸಿಕೊಂಡಿದ್ದರು. ಕ್ರಿಕೆಟ್ ಆ್ಯಂಕರಿಂಗ್’ಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ಎದುರಿಸಿದ್ದ ಸವಾಲುಗಳ ಬಗ್ಗೆ ಕರಿಷ್ಮಾ ಕೋಟಕ್ ಈಗ ಮಾತನಾಡಿದ್ದಾರೆ. ಆಗೆಲ್ಲಾ ನಾವೆಲ್ಲಾ ಕ್ರಿಕೆಟಿಗರಿಗೆ ಏನು ಪ್ರಶ್ನೆ ಕೇಳುತ್ತೇವೆ ಎಂಬುದಕ್ಕಿಂತಲೂ ಯಾವ ರೀತಿ ಕಾಣಿಸಿಕೊಳ್ಳುತ್ತೇವೆ ಎಂಬುದೇ ಮುಖ್ಯವಾಗಿತ್ತು ಎಂದಿದ್ದಾರೆ.

“ಈಗ ಕ್ರಿಕೆಟ್ ಆ್ಯಂಕರಿಂಗ್’ನಲ್ಲಿ ತುಂಬಾ ಬದಲಾವಣೆಗಳಾಗಿವೆ. 2011-12ರಲ್ಲಿ ನಾನು ಕ್ರಿಕೆಟ್ ಆ್ಯಂಕರಿಂಗ್’ಗೆ ಕಾಲಿಟ್ಟಾಗ ಪರಿಸ್ಥಿತಿ ತುಂಬಾನೇ ಭಿನ್ನವಾಗಿತ್ತು. ಆಗ ಗ್ಲಾಮರಸ್ ಆಗಿ ಕಾಣುವುದೇ ಮುಖ್ಯವಾಗಿತ್ತು. ಏನು ಪ್ರಶ್ನೆ ಕೇಳುತ್ತೇವೆ ಅನ್ನೋದ್ಕಿಂತ ಗ್ಲಾಮರಸ್ ಆಗಿ ಯಾವ ರೀತಿ ಕಾಣುತ್ತೇವೆ ಅನ್ನೋದೇ ಆ ದಿನಗಳಲ್ಲಿ ಮುಖ್ಯವಾಗಿತ್ತು. ನಾವು ಕೆಲಸ ಮಾಡುತ್ತಿದ್ದ ಕ್ರೀಡಾ ಚಾನೆಲ್’ಗಳು ಗ್ಲಾಮರ್”ಗೇ ಪ್ರಾಮುಖ್ಯತೆ ನೀಡುತ್ತಿದ್ದವು. ಈಗ ಪರಿಸ್ಥಿತಿ ಸುಧಾರಿಸಿದೆ”.

  • ಕರಿಷ್ಮಾ ಕೋಟಕ್; ಕ್ರಿಕೆಟ್ ಆ್ಯಂಕರ್, ನಟಿ ಮತ್ತು ಮಾಡೆಲ್.

ಲಂಡನ್ ಮೂಲದ ನಟಿ ಕರಿಷ್ಮಾ ಕೋಟಕ್ 2013ರ ಐಪಿಎಲ್ (Indian Premier League), 2016ರ ಕರ್ನಾಟಕ ಪ್ರೀಮಿಯರ್ ಲೀಗ್ (Karnataka Premier League), 2016ರ ಏಷ್ಯನ್ ಪ್ರೀಮಿಯರ್ ಲೀಗ್ (Asian Premier League), 2019ರ ಐಸಿಸಿ ಕ್ರಿಕೆಟ್ ವಿಶ್ವಕಪ್ (2019 Cricket World Cup), 2019ರಲ್ಲಿ ತಮಿಳುನಾಡು ಪ್ರೀಮಿಯರ್ ಲೀಗ್ (Tamil Nadu Premier League), 2017ರಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (Karnataka Premier League), 2018-19ರಲ್ಲಿ ಮುಂಬೈ ಪ್ರೀಮಿಯರ್ ಲೀಗ್ (Mumbai Premier League), 2018-19ರಲ್ಲಿ ಬಾಂಗ್ಲಾದೇಶ ಫುಟ್ಬಾಲ್ ಪ್ರೀಮಿಯರ್ ಲೀಗ್ (Bangladesh Football Premier League), 2020ರಲ್ಲಿ ಬಗಬಂಧು ಕಪ್ (2020 Bangabandhu Cup) ಮತ್ತು 2020ರಲ್ಲಿ ಅಬುಧಾಬಿ ಟಿ20 ಲೀಗ್ (2020 T10 League) ಗಳಲ್ಲಿ ಸ್ಪೋರ್ಟ್ಸ್ ಪ್ರೆಸೆಂಟರ್ ಆಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ : IND vs WI T20 : ಮೊದಲ ಟಿ20ಯಲ್ಲಿ ಫಿನಿಷರ್ ಡಿಕೆ ಅಬ್ಬರ ; ಕೆರಿಬಿಯನ್ನರನ್ನು ಹೊಸಕಿ ಹಾಕಿದ ಟೀಮ್ ಇಂಡಿಯಾ

ಇದನ್ನೂ ಓದಿ : Rohit Sharma World record : ಕೆರಿಬಿಯನ್ ನಾಡಿನಲ್ಲಿ ವಿಶ್ವದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್ ಶರ್ಮಾ

Bollywood actress Karishma Kotak revealed the truth of cricket anchoring

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular