Rohit Sharma World record : ಕೆರಿಬಿಯನ್ ನಾಡಿನಲ್ಲಿ ವಿಶ್ವದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್ ಶರ್ಮಾ

ಟ್ರಿನಿಡಾಡ್: (Rohit Sharma World record) ವೈಟ್ ಬಾಲ್ ಕ್ರಿಕೆಟ್”ನ ಆಧುನಿಕ ಗ್ರೇಟ್’ಗಳಲ್ಲಿ ಒಬ್ಬರಾಗಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೆರಿಬಿಯನ್ ನಾಡಿನಲ್ಲಿ ವಿಶ್ವದಾಖಲೆಯೊಂದನ್ನು ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಟ್ರಿನಿಡಾಡ್”ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಪ್ರಥಮ ಟಿ20 ಪಂದ್ಯದಲ್ಲಿ ( India Vs West Indies T20 Series) ಅಮೋಘ 64 ರನ್ ಬಾರಿಸಿದ ರೋಹಿತ್ ಶರ್ಮಾ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿದ ವಿಶ್ವದಾಖಲೆ ನಿರ್ಮಿಸಿದ್ದಾರೆ (Most runs in T20I Cricket).

ಇದುವರೆಗೆ ಈ ವರ್ಲ್ಡ್ ರೆಕಾರ್ಡ್ ನ್ಯೂಜಿಲೆಂಡ್ ಓಪನರ್ ಮಾರ್ಟಿನ್ ಗಪ್ಟಿಲ್ ಅವರ ಹೆಸರಲ್ಲಿತ್ತು. ವಿಂಡೀಸ್ ವಿರುದ್ಧ 21 ರನ್ ಗಳಿಸಿದ್ದಾಗ 21 ರನ್ ಗಳಿಸಿದಾಗ ಮಾರ್ಟಿನ್ ಗಪ್ಟಿಲ್ (Martin Guptil) ಹೆಸರಲ್ಲಿದ್ದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ್ರು. ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯ ಆರಂಭಕ್ಕೂ ಮುನ್ನ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ರೋಹಿತ್ ಶರ್ಮಾ 3379 ರನ್ ಗಳಿಸಿದ್ದರು. ಕಿವೀಸ್ ಓಪನರ್ ಮಾರ್ಟಿನ್ ಗಪ್ಟಿಲ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ಒಟ್ಟು 3,399 ರನ್ ಗಳಿಸಿದ್ರೆ, ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 3,308 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಟಿ20 ಅಂತಾರಾಷ್ಟ್ರೀ ಕ್ರಿಕೆಟ್”ನಲ್ಲಿ ಅತೀ ಹೆಚ್ಚು ರನ್: ಟಾಪ್-3
ರೋಹಿತ್ ಶರ್ಮಾ: ಇನ್ನಿಂಗ್ಸ್: 121, ರನ್: 3443, ಗರಿಷ್ಠ: 118, ಸರಾಸರಿ: 32.48, ಸ್ಟ್ರೈಕ್”ರೇಟ್: 139.73, ಶತಕ: 04, ಅರ್ಧಶತಕ: 27
ಮಾರ್ಟಿನ್ ಗಪ್ಟಿಲ್: ಇನ್ನಿಂಗ್ಸ್: 112, ರನ್: 3399, ಗರಿಷ್ಠ: 105, ಸರಾಸರಿ: 32.37, ಸ್ಟ್ರೈಕ್”ರೇಟ್: 136.39, ಶತಕ: 02, ಅರ್ಧಶತಕ: 20
ವಿರಾಟ್ ಕೊಹ್ಲಿ: ಇನ್ನಿಂಗ್ಸ್: 91, ರನ್: 3308, ಗರಿಷ್ಠ: 94*, ಸರಾಸರಿ: 50.12, ಸ್ಟ್ರೈಕ್”ರೇಟ್: 137.66, ಶತಕ: 00, ಅರ್ಧಶತಕ: 30

ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 68 ರನ್”ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನಾಯಕ ರೋಹಿತ್ ಶರ್ಮಾ 44 ಎಸೆತಗಳಲ್ಲಿ 64 ರನ್ ಸಿಡಿಸುವ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 27ನೇ ಅರ್ಧಶತಕ ಬಾರಿಸಿದ್ರು. ಟೀಮ್ ಇಂಡಿಯಾ ಇನ್ನಿಂಗ್ಸ್’ನ ಕೊನೆಯಲ್ಲಿ ಅಬ್ಬರಿಸಿದ “ಫಿನಿಷರ್” ದಿನೇಶ್ ಕಾರ್ತಿಕ್ ಕೇವಲ 19 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಒಳಗೊಂಡ ಅಜೇಯ 41 ರನ್ ಸಿಡಿಸಿ ಭಾರತದ ಗೆಲುವಿಗೆ ಕಾರಣರಾದ್ರು.

ಗೆಲ್ಲಲು ಭಾರತ ಒಡ್ಡಿದ 191 ರನ್”ಗಳ ಕಠಿಣ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 120 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಸರಣಿಯ 2ನೇ ಟಿ20 ಪಂದ್ಯ ಸೋಮವಾರ ಸೇಂಟ್ ಕಿಟ್ಸ್ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ : Mayank Agarwal shares Childhood Photo: ಬಾಲ್ಯದ ಮುದ್ದಾದ ಫೋಟೋ ಹಂಚಿಕೊಂಡ ಕರ್ನಾಟಕ ಕ್ರಿಕೆಟರ್ ಮಯಾಂಕ್ ಅಗರ್ವಾಲ್

ಇದನ್ನೂ ಓದಿ : IND vs WI T20 : ಮೊದಲ ಟಿ20ಯಲ್ಲಿ ಫಿನಿಷರ್ ಡಿಕೆ ಅಬ್ಬರ ; ಕೆರಿಬಿಯನ್ನರನ್ನು ಹೊಸಕಿ ಹಾಕಿದ ಟೀಮ್ ಇಂಡಿಯಾ

Rohit Sharma World record Most runs in T20I Cricket India Vs West Indies T20 Series

Comments are closed.