Pat Cummins hattrick : ಆ್ಯಂಟಿಗುವಾ: ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup 2024) ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ (Pat Cummins hattrick). ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೂಪರ್-8 ಪಂದ್ಯದಲ್ಲಿ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ (Pat Cummins ) ಹ್ಯಾಟ್ರಿಕ್ ವಿಕೆಟ್’ಗಳ ಸಾಧನೆ ಮಾಡಿದರು.

18ನೇ ಓವರ್’ನಲ್ಲಿ ಕೊನೆಯ ಎರಡು ಎಸೆತಗಳಲ್ಲಿ ಮಹ್ಮದುಲ್ಲಾ ಮತ್ತು ಮೆಹದಿ ಹಸನ್ ವಿಕೆಟ್ ಪಡೆದ ಕಮಿನ್ಸ್, 20ನೇ ಓವರ್’ನ ಮೊದಲ ಎಸೆತದಲ್ಲಿ ತೌಹಿದ್ ರಿದಯ್ ವಿಕೆಟ್ ಉರುಳಿಸಿ ಹ್ಯಾಟ್ರಿಕ್ ವೀರನಾಗಿ ಮೂಡಿ ಬಂದರು. ಕುತೂಹಲದ ಸಂಗತಿ ಏನಂದರೆ ದಕ್ಷಿಣ ಆಫ್ರಿಕಾದಲ್ಲಿ ನಡೆದ 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ವೇಗದ ಬೌಲರ್ ಬ್ರೆಟ್ ಲೀ (Brett Lee) ಬಾಂಗ್ಲಾದೇಶ ವಿರುದ್ಧವೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು.
https://x.com/KKRWeRule/status/1804007786151563315
ಬ್ರೆಟ್ ಲೀ ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದ 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿತ್ತು. ಆ ನಂತರ ಭಾರತ ಮತ್ತೆ ಟಿ20 ವಿಶ್ವಕಪ್ ಗೆದ್ದಿಲ್ಲ.
https://x.com/CricketopiaCom/status/1803977108877906221
ಇದೀಗ 17 ವರ್ಷಗಳ ನಂತರ ಆಸ್ಟ್ರೇಲಿಯಾ ಮತ್ತೊಬ್ಬ ವೇಗದ ಬೌಲರ್ ಬಾಂಗ್ಲಾದೇಶ ವಿರುದ್ಧವೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ. 17 ವರ್ಷಗಳ ಹಿಂದೆ ಬ್ರೆಟ್ ಲೀ ಹ್ಯಾಟ್ರಿಕ್ ಸಾಧನೆ ಮಾಡಿದಾಗ ಭಾರತ ಟಿ20 ವಿಶ್ವಕಪ್ ಗೆದ್ದಿತ್ತು. ಈಗ ಪ್ಯಾಟ್ ಕಮಿನ್ಸ್ ಬಾಂಗ್ಲಾ ವಿರುದ್ಧವೇ ಹ್ಯಾಟ್ರಿಕ್ ವಿಕೆಟ್ ಪಡೆದಿರುವುದು ಭಾರತ ಈ ಬಾರಿಯ ಟಿ2 ವಿಶ್ವಕಪ್ ಗೆಲ್ಲುವುದರ ಸೂಚನೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿವೆ.
ಇದನ್ನೂ ಓದಿ : ಮುಂದಿನ ತಿಂಗಳು ಟೀಮ್ ಇಂಡಿಯಾಗೆ ಹೊಸ ಕೋಚ್ : ಗೌತಮ್ ಗಂಭೀರ್ ಅಲ್ಲ, ವಿವಿಎಸ್ ಲಕ್ಷ್ಮಣ್

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೂಪರ್-8 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 47 ರನ್’ಗಳ ಭರ್ಜರಿ ಗೆಲುವು ದಾಖಲಿಸಿರುವ ಭಾರತ, ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ತನ್ನ 2ನೇ ಸೂಪರ್-8 ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : Exclusive: ಕರ್ನಾಟಕ ಕ್ರಿಕೆಟ್ ಪ್ರಿಯರಿಗೆ ಕಹಿ ಸುದ್ದಿ, ರಾಜ್ಯ ತಂಡ ತೊರೆದ ಮತ್ತೊಬ್ಬ ಕ್ರಿಕೆಟಿಗ
ಜೂನ್ 24ರಂದು ನಡೆಯುವ ಅಂತಿಮ ಸೂಪರ್-8 ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದ್ದು, ಈ ಹೈವೋಲ್ಟೇಜ್ ಪಂದ್ಯ ಸೇಂಟ್ ಲೂಸಿಯಾದ ಡ್ಯಾರೆನ್ ಸಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಸೂಪರ್-8 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 28 ರನ್’ಗಳ ಜಯಭೇರಿ ಬಾರಿಸಿದೆ.
Brett Lee then Pat Cummins hat-trick today is this a sign that India will win the T20 World Cup 2024
ಇದನ್ನೂ ಓದಿ : Virat Kohli Vs Smriti Mandhana : ವೈರಲ್ ಆಗುತ್ತಿದೆ ವಿರಾಟ್ ಕೊಹ್ಲಿ Vs ಸ್ಮೃತಿ ಮಂಧನ ಬೌಲಿಂಗ್ ಆ್ಯಕ್ಷನ್