Mukund Gowda : ರಾಯ್ಪುರ: ಚೊಚ್ಚಲ ಆವೃತ್ತಿಯ ಛತ್ತೀಸ್’ಗಢ ಕ್ರಿಕೆಟ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (Chhattisgarh Cricket Premier League – CCPL) ಕನ್ನಡಿಗ ಮುಕುಂದ್ ಗೌಡ (Mukund Gowda) ಮಾರ್ಗದರ್ಶನದ, ರಾಯ್ಪುರ ರೈನೋಸ್ (Raipur Rhinos) ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಅಕಾಡೆಮಿಯಲ್ಲಿ ಕೋಚ್ ಆಗಿದ್ದ ಮುಕುಂದ್ ಗೌಡ ಅವರನ್ನು ರಾಯ್ಪುರ ರೈನೋಸ್ ಫ್ರಾಂಚೈಸಿ, ಛತ್ತೀಸ್’ಗಢ ಕ್ರಿಕೆಟ್ ಪ್ರೀಮಿಯರ್ ಲೀಗ್ ಟೂರ್ನಿಗೆ ತನ್ನ ತಂಡಕ್ಕೆ ಹೆಡ್ ಕೋಚ್ ಆಗಿ ನೇಮಕ ಮಾಡಿತ್ತು. ಮೊದಲ ಟೂರ್ನಿಯಲ್ಲೇ ಮುಕುಂದ್ ಮೋಡಿ ಮಾಡಿದ್ದು, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.

https://x.com/cricketcscs/status/1802454066645422343?s=46
ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ರಾಯ್ಪುರ ರೈನೋಸ್ ತಂಡ ಬಿಲಾಸ್ಪುರ್ ಬುಲ್ಸ್ ತಂಡವನ್ನು 8 ವಿಕೆಟ್’ಗಳಿಂದ ಬಗ್ಗು ಬಡಿದು ಚಾಂಪಿಯನ್ ಪಟ್ಟಕ್ಕೇರಿತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಿಲಾಸ್ಪುರ್ ಬುಲ್ಸ್ ತಂಡ ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 156 ರನ್ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ರಾಯ್ಪುರ ರೈನೋಸ್ ತಂಡ 16.1 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. 42 ಎಸೆತಗಳಲ್ಲಿ ಅಜೇಯ 65 ರನ್ ಗಳಿಸಿದ ಅನುಜ್ ತಿವಾರಿ ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು.
ಇದನ್ನೂ ಓದಿ : USA Cricket Team : ಟಿ20 ವಿಶ್ವಕಪ್’ನಿಂದ ಪಾಕ್ ಔಟ್, ಸೂಪರ್-8 ತಲುಪಿ ಇತಿಹಾಸ ನಿರ್ಮಿಸಿದ ಅಮೆರಿಕ

https://x.com/cricketcscs/status/1802436971677245693?s=46
ರಾಜ್ಯ ಕ್ರಿಕೆಟ್ ಸಂಸ್ಥೆಯ ಕಿರಿಯರ ತಂಡಗಳಿಗೆ ಮುಕುಂದ್ ಗೌಡ ತರಬೇತುದಾರನಾಗಿ ಜವಾಬ್ದಾರಿ ನಿಭಾಯಿಸಿದ ಅನುಭವ ಹೊಂದಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, 2011ರ ವಿಶ್ವಕಪ್ ಹೀರೊ ಸುರೇಶ್ ರೈನಾ, ಮೊದಲ ಆವೃತ್ತಿಯ ಛತ್ತೀಸ್’ಗಢ ಕ್ರಿಕೆಟ್ ಪ್ರೀಮಿಯರ್ ಲೀಗ್ ಟೂರ್ನಿಯ ರಾಯಭಾರಿ ಆಗಿದ್ದರು. ಭಾರತ ಪರ ಅಂಡರ್-19 ಕ್ರಿಕೆಟ್ ಆಡಿದ್ದ ಪಂಜಾಬ್ ಆಟಗಾರ ಅಮನ್ದೀಪ್ ಖರೆ ರಾಯ್ಪುರ ರೈನೋಸ್ ತಂಡದ ಸಾರಥ್ಯ ವಹಿಸಿದ್ದರು.
https://x.com/cricketcscs/status/1802431126625210846?s=46
ಇದನ್ನೂ ಓದಿ : Smriti Mandhana : ಚಿನ್ನಸ್ವಾಮಿಯಲ್ಲಿ ಭರ್ಜರಿ ಶತಕ ಬಾರಿಸಿದ ಬೆಂಗಳೂರು ಮನೆ ಮಗಳು ಸ್ಮೃತಿ ಮಂಧನ !
ಛತ್ತೀಸ್’ಗಢ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾರವಹಿಸಿದ್ದ ತಂಡಗಳು: (Chhattisgarh Cricket Premier League – CCPL)
1. ರಾಯ್ಪುರ ರೈನೋಸ್ (Raipur Rhinos)
2. ಬಿಲಾಸ್ಪುರ್ ಬುಲ್ಸ್ (Bilaspur Bulls)
3. ಬಸ್ತಾರ್ ಬಯೋನ್ಸ್ (Bastar Byons)
4. ರಾಜ್’ನಂದ್’ಗಾಂವ್ ಪ್ಯಾಂಥರ್ಸ್ (Rajnandgaon Panthers)
5. ರಾಯಗಢ ಲಯನ್ಸ್ (Raigarh Lions)
6. ಸುರ್ಗುಜ ಟೈಗರ್ಸ್ (Surguja Tigers)
CCPL 2024 Kannadiga Mukund Gowdas Debut-Champion der Raipur Rhinos