MS Dhoni : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ ಈ ಬಾರಿಯೂ ತಂಡವನ್ನು ಐಪಿಎಲ್ ಚಾಂಪಿಯನ್ ಆಗಿ ಪರಿವರ್ತಿಸಿದ್ದರು. ಸ್ಟಂಪ್ ಹಿಂದೆ ನಿಂತು ಧೋನಿ ಮಾಡುವ ಮೋಡಿಯಿಂದಾಗಿಯೇ ವಿಶ್ವದಾದ್ಯಂತ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇದೀಗ ಅಭಿಮಾನಿಯೋರ್ವ ಮಹೇಂದ್ರ ಸಿಂಗ್ ಧೋನಿ ಅವರ ಪೋಟೋವನ್ನು ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಪ್ರಕಟಿಸುವ ಮೂಲಕ ಸುದ್ದಿಯಾಗಿದ್ದಾನೆ. ಸದ್ಯ ಈ ಅಮಂತ್ರಣ ಪತ್ರಿಕೆಯ ಪೋಟೋ ವೈರಲ್ ಆಗಿದೆ.
ಛತ್ತೀಸ್‌ಗಢದ ಅಭಿಮಾನಿಯೋರ್ವ ಮದುವೆ ಕಾರ್ಡ್‌ನಲ್ಲಿ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಫೋಟೋ ಮತ್ತು ಐಕಾನಿಕ್ ಜೆರ್ಸಿ ಸಂಖ್ಯೆ 7 ಅನ್ನು ಮುದ್ರಿಸುವ ಮೂಲಕ ಎಂಎಸ್ ಧೋನಿ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಮದುವೆ ಕಾಗದದ ಎರಡೂ ಬದಿಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಹೆಸರನ್ನು ಥಾಲಾ ಎಂಬ ಪದದೊಂದಿಗೆ ಮುದ್ರಿಸಿದ್ದಾರೆ. ಅಲ್ಲದೇ ಮದುವೆಯ ಕಾರ್ಡ್‌ನ್ನು ಮಹೇಂದ್ರ ಸಿಂಗ್ ಧೋನಿ ಅವರಿಗೆ ಕಳುಹಿಸುವ ಮೂಲಕ ಮದುವೆಗೆ ಆಹ್ವಾನವನ್ನು ಕೊಟ್ಟಿದ್ದಾರೆ.
CSK #yellove 💛 fever isn't over yet⁉️
— Shivsights (@itsshivvv12) June 3, 2023
A fan boy of @msdhoni from #chhattisgarh printed Dhoni face, #Jersey no 7 on his wedding card and invite to the #ChennaiSuperKings captain❤🔥
#MSDhoni𓃵 #thala #Dhoni pic.twitter.com/dZmAqFvI14
ಐಪಿಎಲ್ ಆರಂಭಿದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ ಅವರು ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು.ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆಲ್ಲುವಂತೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ಬಾರಿಯ ಐಪಿಎಲ್‌ನಲ್ಲಿ ತಂಡ ಹೀನಾಯವಾಗಿ ಸೋಲನ್ನು ಕಂಡಿದ್ದರೂ ಕೂಡ ಈ ಬಾರಿ ತಂಡವನ್ನು ಮತ್ತೆ ಫೈನಲ್ ಪ್ರವೇಶಿಸುವಂತೆ ಮಾಡಿದ್ದಾರೆ. ಸದ್ಯ ಮಹೇಂದ್ರ ಸಿಂಗ್ ಧೋನಿ ಅವರು ಎಡಮೊಣಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಮುಂಬೈನ ಆಸ್ಪತ್ರೆಯಲ್ಲಿದ್ದಾರೆ. ಮುಂದಿನ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
MS Dhoni : ಧೋನಿಗೆ ಮುಂಬೈನಲ್ಲಿ ಶಸ್ತ್ರ ಚಿಕಿತ್ಸೆ
ಧೋನಿ ಅವರು ಹೆಸರಾಂತ ಕ್ರೀಡಾ ಮೂಳೆ ಶಸ್ತ್ರಚಿಕಿತ್ಸಕ ಡಾ. ದಿನ್ಶಾ ಪರ್ದಿವಾಲಾ ಅವರನ್ನು ಸಮಾಲೋಚಿಸಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಡಾ.ದಿನಾ ಅವರು ಬಿಸಿಸಿಐ ವೈದ್ಯಕೀಯ ಸಮಿತಿಯಲ್ಲಿದ್ದಾರೆ. ಅಲ್ಲದೇ ಹಲವು ಕ್ರಿಕೆಟಿಗರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಿದ್ದಾರೆ. ಇನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಧೋನಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆದಿದೆ ಎಂದು ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಖಚಿತ ಪಡಿಸಿದ್ದಾರೆ. ಎಂದು ಪಿಟಿಐ ವರದಿ ಮಾಡಿದೆ.
ಇನ್ನು ಐಪಿಎಲ್ ನಿವೃತ್ತಿಯ ಕುರಿತು ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿ (MS Dhoni) ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದ ವೇಳೆಯಲ್ಲಿಯೇ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಐಪಿಎಲ್ ಫೈನಲ್ ಪಂದ್ಯದ ಸಮಾರಂಭದಲ್ಲಿ ಮಾತನಾಡಿ ದವಾಉರ ನಾನು ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ನಿವೃತ್ತಿಯಾಗುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಮೂಲಕ ಧೋನಿ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.
ಇದನ್ನೂ ಓದಿ : CSK vs GT IPL 2023 : ರವೀಂದ್ರ ಜಡೇಜಾ- ಡೆವೋನ್ ಕಾನ್ವೇ ಆಟ, ಚೆನ್ನೈ ತಂಡಕ್ಕೆ 5 ನೇ ಬಾರಿಗೆ IPL ಪ್ರಶಸ್ತಿ
ಇದನ್ನೂ ಓದಿ : ICC WTC Final 2023 : ಟೀಂ ಇಂಡಿಯಕ್ಕೆ ಕೆಎಸ್ ಭರತ್ ಅಥವಾ ಇಶಾನ್ ಕಿಶನ್ ವಿಕೆಟ್ ಕೀಪರ್ ?
Chhattisgarh Man Prints MS Dhoni Photo On His Wedding Card