Major League Cricket 2024 : ಬೆಂಗಳೂರು: ಐಪಿಎಲ್’ನಲ್ಲಿ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಮುಂಬೈ ಇಂಡಿಯನ್ಸ್ ತಂಡ ಟಿ20 ಲೀಗ್ ಕ್ರಿಕೆಟ್ ಜಗತ್ತಿನ ದೈತ್ಯ ತಂಡಗಳಲ್ಲಿ ಒಂದು. ಮುಕೇಶ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಪ್ರತಿನಿಧಿಸುವುದು ಕ್ರಿಕೆಟಿಗರಿಗೆ ಪ್ರತಿಷ್ಠೆಯ ವಿಚಾರ. ಆ ಅವಕಾಶ ನಮ್ಮ ಚಿಕ್ಕಮಗಳೂರಿನ ಕ್ರಿಕೆಟ್ ಪ್ರತಿಭೆಗೆ ಒಲಿದು ಬಂದಿದೆ. ಅವರ ಹೆಸರು ನೋಸ್ತುಶ್ ಕೆಂಜಿಗೆ (Nostush Kenjige).

ಹಾಗಂತ ಈ ಚಿಕ್ಕಮಗಳೂರಿನ ಕ್ರಿಕೆಟಿಗ ನೋಸ್ತುಶ್, ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿಲ್ಲ. ಅಮೆರಿಕದ ಟಿ20 ಟೂರ್ನಿಯಾಗಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎಂಐ ನ್ಯೂಯಾರ್ಕ್ (MI New York) ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಎಂಐ ನ್ಯೂಯಾರ್ಕ್ ತಂಡವನ್ನು ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್, ಕೆರಿಬಿಯನ್ ಕ್ರಿಕೆಟಿಗ ಕೀರನ್ ಪೊಲ್ಲಾರ್ಡ್ ಮುನ್ನಡೆಸುತ್ತಿದ್ದಾರೆ.
ಇದೇ ಮೊದಲ ಬಾರಿ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ನೋಸ್ತುಶ್ ಕೆಂಜಿಗೆ, ಈ ಬಾರಿ ಆಡಿರುವ 5 ಲೀಗ್ ಪಂದ್ಯಗಳಲ್ಲಿ 6.70 ಎಕಾನಮಿಯಲ್ಲಿ 5 ವಿಕೆಟ್’ಗಳನ್ನು ಪಡೆದಿದ್ದಾರೆ. ಚಿಕ್ಕಮಗಳೂರಿನ ಕಡೂರಿನವರಾದ 33 ವರ್ಷದ ನೋಸ್ತುಶ್ ಪ್ರದೀಪ್ ಕೆಂಜಿಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ಪರ ಆಡಿದ್ದರು. ಎಲ್’ಟಿ20 ಟೂರ್ನಿಗಳಲ್ಲಿ ನೋಸ್ತುಶ್ ಕೆಂಜಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮತ್ತೊಂದು ತಂಡವಾಗಿರುವ ಎಂಐ ಎಮಿರೇಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಇದನ್ನೂ ಓದಿ : KL Rahul & Athiya Shetty: ಕೊರಗಜ್ಜನ ದರ್ಶನದ ಬೆನ್ನಲ್ಲೇ ₹20 ಕೋಟಿ ಮನೆ ಖರೀದಿಸಿದ ರಾಹುಲ್-ಆತಿಯಾ!
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಲೀಗ್ ಟೂರ್ನಿಗಳಲ್ಲಿ ಆಡಿರುವ ನೋಸ್ತುಶ್ ಕೆಂಜಿಗೆ ಕ್ರಿಕೆಟ್’ನಲ್ಲಿ ಅಷ್ಟಾಗಿ ಯಶಸ್ಸು ಸಿಗದ ಕಾರಣ ಉದ್ಯೋಗದ ಕಾರಣಕ್ಕಾಗಿ ಅಮೆರಿಕಕ್ಕೆ ಹೋಗಿದ್ದರು. ಅಲ್ಲೇ ಕ್ರಿಕೆಟ್ ಆಡುತ್ತಾ ಅಮೆರಿಕ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಆಡಿದ್ದರು. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನೋಸ್ತುಶ್, ಬೆಂಗಳೂರಿನ ಹಲಸೂರಿನಲ್ಲಿರುವ ಕರ್ನಾಟಕ ಇನ್ಸ್’ಟಿಟ್ಯೂಟ್ ಆಫ್ ಕ್ರಿಕೆಟ್ (KIOC) ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿದ್ದರು.
ಇದನ್ನೂ ಓದಿ : Rahul Dravid IPL 2025: ಐಪಿಎಲ್ 2025 ಕ್ಕೆ ತಮ್ಮ ಹಳೇ ತಂಡದ ಕೋಚ್ ಆಗಲಿದ್ದಾರಂತೆ ರಾಹುಲ್ ದ್ರಾವಿಡ್
ನೋಸ್ತುಶ್ ಕೆಂಜಿಗೆ ಇದುವರೆಗೆ ಒಟ್ಟು 10 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 7 ವಿಕೆಟ್ ಪಡೆದಿದ್ದಾರೆ. ಅಲ್ಲದೆ 40 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಚಿಕ್ಕಮಗಳೂರಿನ ಯುವಕ 38 ವಿಕೆಟ್’ಗಳನ್ನು ಕಬಳಿಸಿದ್ದಾರೆ. ಮೇಜರ್ ಲೀಗ್ ಕ್ರಿಕೆಟ್ 2024 ಟೂರ್ನಿಯಲ್ಲಿ ಕೀರನ್ ಪೊಲ್ಲಾರ್ಡ್ ನಾಯಕತ್ವದ ಎಂಐ ನ್ಯೂಯಾರ್ಕ್ ತಂಡ ಆಡಿರುವ 7 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋಲು ಕಂಡು 5 ಪಾಯಿಂಟ್’ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಇದನ್ನೂ ಓದಿ : Kohli & Rohit: ಕೊಹ್ಲಿ-ರೋಹಿತ್ ನಿವೃತ್ತಿಯ ರಹಸ್ಯ ಬಯಲು ಮಾಡಿದ ಕೋಚ್ ಗಂಭೀರ್
Chikmagalur Based player Nostush Kenjige plays for Mumbai Indians New York in major league cricket 2024