ಕ್ರಿಸ್ ಗೇಲ್ ಕ್ರಿಕೆಟ್ ಜಗತ್ತಿನಲ್ಲೇ ದೈತ್ಯ ಪ್ರತಿಭೆ. ಗೇಲ್ ಬ್ಯಾಟಿಂಗ್ ಗೆ ಇಳಿದ್ರೆ ಸಾಕು ಪ್ರತಿಯೊಬ್ಬ ಕ್ರಿಕೆಟ್ ಅಭಿಯಾನಿಯೂ ಕುತೂಹಲದಿಂದ ನೋಡ್ತಾರೆ. ಇಂತಹ ಕ್ರಿಸ್ ಗೇಲ್ ಇದೀಗ ಕ್ರಿಕೆಟ್ ನಲ್ಲಿ ಯಾರೂ ಮಾಡಿರದ ವಿಶಿಷ್ಟ ಐತಿಹಾಸಿಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ದ ಮೂರನೇ ಟಿ – 20 ಕ್ರಿಕೆಟ್ ನಲ್ಲಿ ಸ್ಪೋಟಕ ಆಟಗಾರ ವಿನೂತನ ದಾಖಲೆ ನಿರ್ಮಿಸಿದ್ದಾರೆ. ಮೂರನೇ ಪದ್ಯದಲ್ಲಿ67 ರನ್ ಗಳಿಸುವ ಮೂಲಕ ಟಿ-20 ಇತಿಹಾಸದಲ್ಲಿ ಒಟ್ಟು 14,000 ರನ್ ಪೂರೈಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಕ್ರಿಸ್ ಗೇಲ್ ಈಗಾಗಲೇ ಟಿ – 20 ಕ್ರಿಕೆಟ್ ನಲ್ಲಿ ಸ್ಪೋಟಕ ಆಟಗಾರ ಅನ್ನೋ ಖ್ಯಾತಿಗೆ ಪಾತ್ರರಾಗಿರೋ ಕ್ರಿಸ್ ಗೇಲ್ ಇತ್ತೀಚಿನ ದಿನಗಳಲ್ಲಿ ಅದ್ಬುತ ಫಾರ್ಮ್‌ನಲ್ಲಿದ್ದಾರೆ. ಐತಿಹಾಸಿಕ ದಾಖಲೆಯ ಬಗ್ಗೆ ಮಾತನಾಡಿರೊ ಕ್ರಿಸ್‌ಗೇಲ್ ನಿಮಗೆಲ್ಲ ತಿಳಿದಿರುವಾಗೆ ನಾನು ಬ್ಯಾಟಿಂಗ್ನಲ್ಲಿ ಸ್ಟ್ರಗಲ್ ಮಾಡುತ್ತಿದ್ದೆ. ರನ್ ಗಳಿಸಲು ಕಷ್ಟ ಪಡುತ್ತಿದ್ದೆ. ಇದೊಂದು ಅದ್ಭುತ ಜರ್ನಿ, ಸರಣಿ ಜಯ ಸಾಧಿಸಿದ್ದು ತುಂಬಾನೆ ಸಂತಸ ನೀಡಿದೆ ಎಂದಿದ್ದಾರೆ.

ಆಸ್ಟ್ರೇಲಿಯಾ ವಿರುದ್ದ ಮೂರನೇ ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸ್ ಸಿಡಿಸಿ 67 ರನ್ ಸಿಡಿಸಿದ್ದಾರೆ . ಈ ಮೂಲಕ ಆಸ್ಟ್ರೇಲಿಯಾ ವಿರುದ್ದ ಮೂರನೇ ಗೆಲವು ದಾಖಲಿಸುವಲ್ಲಿ ಸಫಲರಾಗಿ ದ್ದಾರೆ. ಈಗಾಗಲೇ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ವೆಸ್ಟ್ ಇಂಡೀಸ್ 3-0 ಮುನ್ನಡೆ ಸಾಧಿಸಿದೆ. ನಾಲ್ಕನೇ ಪಂದ್ಯ ಜುಲೈ 14 ರಂದು ನಡೆಯಲಿದೆ.