ಮುಂಬೈ : ನ್ಯೂಜಿಲೆಂಡ್ ವಿರುದ್ದದ ಟಿ 20 ಸರಣಿಗೆ (IND Vs NZ T20) ಬಿಸಿಸಿಐ ತಂಡವನ್ನ ಪ್ರಕಟಿಸಿದೆ. ವಿರಾಟ್ ಕೊಯ್ಲಿ ಟಿ20 ಸರಣಿ ನಾಯಕತ್ವದಿಂದ ಕೆಳಗೆ ಇಳಿಯುತ್ತಿದ್ದಂತೆಯೇ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನ್ನಾಗಿ ನೇಮಿಸಲಾಗಿದ್ದು, ಕನ್ನಡಿಗ ಕೆ.ಎಲ್.ರಾಹುಲ್ ಅವರಿಗೆ ಉಪನಾಯಕನ ಹೊಣೆಯನ್ನು ವಹಿಸಲಾಗಿದೆ. ಉಳಿದಂತೆ ಹೊಸ ಮುಖಗಳಿಗೆ ತಂಡದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.
ನ್ಯೂಜಿಲೆಂಡ್ ವಿರುದ್ದದ ಟಿ೨೦ ಸರಣಿಯಲ್ಲಿ ಒಟ್ಟು ಮೂರು ಪಂದ್ಯಗಳನ್ನು ಆಡಲಿದೆ. ನವೆಂಬರ್ 17, ನವೆಂಬರ್ 19 ಹಾಗೂ ನವೆಂಬರ್ 21ರಂದು ಟಿ20 ಸರಣಿ ನಡೆಯಲಿದೆ. ಕನ್ನಡಿಗ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇದೀಗ ಟೀಂ ಇಂಡಿಯಾದ ನಾಯಕ ಹಾಗೂ ಉಪ ನಾಯಕನ ಹುದ್ದೆಯೂ ಬದಲಾಗಿದೆ. ಹೊಸ ಹುರುಪಿನೊಂದಿಗೆ ಭಾರತ ತಂಡ ಕಣಕ್ಕೆ ಇಳಿಯಲು ಸಿದ್ದತೆಯನ್ನು ಮಾಡಿಕೊಂಡಿದೆ.
ಭಾರತದ T20I ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್.ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ಆರ್ ಯುಜ್ವೇಂದ್ರ ಚಾಹಲ್ ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
ಇದೇ ವೇಳೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗೆ ಭಾರತ ಎ ತಂಡವನ್ನು ಆಯ್ಕೆ ಮಾಡಲಾಗಿದೆ. ಪ್ರಿಯಾಂಕ ಪಂಚಾಲ್ ನಾಯಕನಾಗಿ ಆಯ್ಕೆಯಾಗಿದ್ದರೆ, ಕನ್ನಡಿಗ ದೇವದತ್ತ ಪಡಿಕ್ಕಲ್, ಕೆ. ಗೌತಮ್ ಸ್ಥಾನ ಪಡೆದಿದ್ದಾರೆ. ಇನ್ನು ಭಾರತದ ವೇಗದ ಎಸೆತಗಾರ ಉಮ್ರಾನ್ ಮಲ್ಲಿಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ‘ಎ’ ತಂಡ: ಪ್ರಿಯಾಂಕ್ ಪಾಂಚಾಲ್ (ನಾಯಕ), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್, ಸರ್ಫರಾಜ್ ಖಾನ್, ಬಾಬಾ ಅಪರಾಜಿತ್, ಉಪೇಂದ್ರ ಯಾದವ್ (ವಿಕೆಟ್-ಕೀಪರ್), ಕೆ ಗೌತಮ್, ರಾಹುಲ್ ಚಾಹರ್, ಸೌರಭ್ ಕುಮಾರ್, ನವದೀಪ್ ಸೈನಿ , ಉಮ್ರಾನ್ ಮಲಿಕ್, ಇಶಾನ್ ಪೊರೆಲ್, ಅರ್ಜಾನ್ ನಾಗ್ವಾಸ್ವಾಲ್ಲಾ
ಇದನ್ನೂ ಓದಿ : ಕೋಚ್ ರವಿಶಾಸ್ತ್ರಿ ಯುಗಾಂತ್ಯ : ಐಪಿಎಲ್‌ನಲ್ಲಿ ಈ ತಂಡ ಕೋಚ್ ಆಗ್ತಾರಂತೆ
ಇದನ್ನೂ ಓದಿ : ರಾಹುಲ್ ಅಬ್ಬರದ ಅರ್ಧ ಶತಕ : ವಿಶ್ವಕಪ್‌ನಲ್ಲಿ ವಿಶಿಷ್ಟ ದಾಖಲೆ ಬರೆದ ಕನ್ನಡಿಗ
(IND Vs NZ T20 : India’s squad for T20Is against New Zealand)