ಮಂಗಳವಾರ, ಏಪ್ರಿಲ್ 29, 2025
HomeSportsRCB New Captain : ಕೆ.ಎಲ್.ರಾಹುಲ್‌, ಪಡಿಕ್ಕಲ್‌ ಅಲ್ಲ : ಆರ್‌ಸಿಬಿ ನಾಯಕನಾಗ್ತಾನೆ ಈ ಕನ್ನಡಿಗ

RCB New Captain : ಕೆ.ಎಲ್.ರಾಹುಲ್‌, ಪಡಿಕ್ಕಲ್‌ ಅಲ್ಲ : ಆರ್‌ಸಿಬಿ ನಾಯಕನಾಗ್ತಾನೆ ಈ ಕನ್ನಡಿಗ

- Advertisement -

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB ) ಮುಂದಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಈಗಾಗಲೇ ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ಮೆಗಾ ಹರಾಜು ಮೂಲಕ ಹೊಸ ಆಟಗಾರರನ್ನು ಖರೀದಿಸಲು ಸಜ್ಜಾಗುತ್ತಿದೆ. ನಾಯಕ ವಿರಾಟ್‌ ಕೊಯ್ಲಿ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಆರ್‌ಸಿಬಿಯ ಮುಂದಿನ ನಾಯಕ ಯಾರು (RCB New Captain) ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ಕೆ.ಎಲ್.ರಾಹುಲ್‌ (KL RAHUL), ದೇವದತ್‌ ಪಡಿಕ್ಕಲ್‌ (Devdutt Padikkal ), ಶ್ರೇಯಸ್‌ ಅಯ್ಯರ್‌ ಹೆಸರು ಬಲವಾಗಿ ಕೇಳಿಬರುತ್ತಿದೆ. ಆದರೆ ರಾಹುಲ್‌, ಪಡಿಕ್ಕಲ್‌ ಬದಲು ಈ ಕನ್ನಡಿಗ ಆರ್‌ಸಿಬಿ ನಾಯಕನಾಗೋದು ಪಕ್ಕಾ.

ಹಲವು ವರ್ಷಗಳ ಕಾಲ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ ವಿರಾಟ್‌ ಕೊಯ್ಲಿ ನಾಯಕತ್ವದ ಭಾರವನ್ನು ಕಳೆಗಿಳಿಸಿದ್ದಾರೆ. ಹೀಗಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹೊಸ ಆಟಗಾರನ ಹುಡುಕಾಟದಲ್ಲಿದೆ. ಸ್ಪೋಟಕ ಆಟಗಾರ ಎಬಿ ಡಿವಿಲಿಯರ್ಸ್‌ ಈಗಾಗಲೇ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಆರ್‌ಸಿಬಿ ವಿರಾಟ್‌ ಕೊಯ್ಲಿ, ಮೊಹಮ್ಮದ್‌ ಸಿರಾಜ್‌, ಮ್ಯಾಕ್ಸ್‌ವೆಲ್‌ ರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಈ ಮೂವರು ಕೂಡ ನಾಯಕರಾಗಿ ಆರ್‌ಸಿಬಿ ತಂಡವನ್ನು ಮುನ್ನಡೆಸುವುದು ಅನುಮಾನ. ಅದ್ರಲ್ಲೂ ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ ಹೊರತು ಪಡಿಸಿ ಉಳಿದಂತೆ ಬೆಂಗಳೂರು ತಂಡವನ್ನು ಕನ್ನಡಿಗರು ಬೆಂಗಳೂರ ತಂಡವನ್ನು ಮುನ್ನಡೆಸಿಲ್ಲ.

ಐಪಿಎಲ್‌ 22 ರಲ್ಲಿ ಕನ್ನಡಿಗನೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಕೆ.ಎಲ್.ರಾಹುಲ್‌ ಪಂಜಾಬ್‌ ತಂಡವನ್ನು ತೊರೆದು ಬೆಂಗಳೂರು ಸೇರುತ್ತಾರೆ ಅನ್ನೋ ಮಾತು ಕೇಳಿಬಂದಿತ್ತು. ಆದರೆ ರಾಹುಲ್‌ ಪಂಜಾಬ್‌ ತಂಡದಿಂದ ದೂರವಾಗಿದ್ದರೂ ಕೂಡ, ಅವರು ಬೆಂಗಳೂರು ಬದಲು ಲಕ್ನೋ ತಂಡವನ್ನು ಮುನ್ನಡೆಸಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಇನ್ನೊಂದೆಡೆಯಲ್ಲಿ ಪಡಿಕ್ಕಲ್‌ ಬೆಂಗಳೂರು ತಂಡವನ್ನು ಮುನ್ನಡೆಸುತ್ತಾರೆ ಎನ್ನಲಾಗುತ್ತಿದ್ದರೂ ಕೂಡ ಅನುಭವದ ಕೊರತೆಯ ಹಿನ್ನೆಲೆಯಲ್ಲಿ ನಾಯಕನ ಜವಾಬ್ದಾರಿ ವಹಿಸೋದು ಅನುಮಾನ. ಇದೇ ಕಾರಣದಿಂದಲೇ ಬೆಂಗಳೂರು ತಂಡ ಕನ್ನಡಿಗ ಮನೀಶ್‌ ಪಾಂಡೆ ಅವರನ್ನು ನಾಯಕನನ್ನಾಗಿ ನೇಮಕವಾಗೋದು ಖಚಿತ.

ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಮತ್ತು ಮೊದಲ ಭಾರತೀಯ ಐಪಿಎಲ್ ಶತಕದ ಕಿಂಗ್ ಕನ್ನಡಿಗ ಮನೀಶ್ ಪಾಂಡೆ IPL 2022 ಗಾಗಿ RCB ಅನ್ನು ಮುನ್ನಡೆಸಲಿ ದ್ದಾರೆ. ವರದಿಯ ಪ್ರಕಾರ Royal Challengers Bangalore IPL 2022 mega Auction ನಲ್ಲಿ ಮನೀಶ್ ಪಾಂಡೆಯನ್ನು ಬಿಡ್ ಮಾಡಲು ಯೋಜಿಸುತ್ತಿದೆ. ಕರ್ನಾಟಕದ ಆಟಗಾರನನ್ನು 2018 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬರೋಬ್ಬರಿ 11 ಕೋಟಿ ಕೊಟ್ಟು ಖರೀದಿಸಿತು. ಆದರೆ ಅದ್ಬುತ ಫಾರ್ಮ್‌ನಲ್ಲಿದ್ದಾಗಲೇ ಮನೀಶ್‌ ಪಾಂಡೆ ಅವರನ್ನು ಆಡುವ ಬಳಗದಿಂದ ಕೈ ಬಿಡಲಾಗಿತ್ತು. ಅಲ್ಲದೇ ಈ ಬಾರಿ ಹೈದ್ರಾಬಾದ್‌ ತಂಡ ಮನೀಶ್‌ ಪಾಂಡೆ ಅವರನ್ನು ತಂಡದಲ್ಲಿ ಉಳಿಸಿಕೊಂಡಿಲ್ಲ.

Karnataka wins Syed Mushtaq Ali Trophy Against Tamil Nadu
IMAGE CREDIT : Manish Pandey /twitter

ಮನೀಶ್‌ ಪಾಂಡೆ ರಾಷ್ಟ್ರೀಯ ಟೂರ್ನಿಗಳಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮುಸ್ತಾಕ್‌ ಆಲಿ ಟ್ರೋಫಿಯಲ್ಲಿ ಅದ್ಬುತ ಆಟದ ಮೂಲಕ ತಂಡವನ್ನು ಫೈನಲ್‌ಗೆ ಎಂಟ್ರಿ ಕೊಡಿಸಿದ್ದರು. ಅಲ್ಲದೇ ಸದ್ಯ ಅದ್ಬುತ ಲಯದಲ್ಲಿರುವ ಮನೀಶ್‌ ಪಾಂಡೆ ಟಿ20 ಸ್ಪೆಷಲಿಸ್ಟ್‌ ಆಟಗಾರ ಅನ್ನೋ ಖ್ಯಾತಿಯನ್ನೂ ಪಡೆದುಕೊಂಡಿದ್ದಾರೆ. ಈಗಾಗಲೇ ಹಲವು ವರ್ಷಗಳಿಂದಲೂ ಕರ್ನಾಟಕ ತಂಡವನ್ನು ನಾಯಕನಾಗಿ ಮುನ್ನಡೆಸಿದ ಅನುಭವದ ಹಿನ್ನೆಲೆಯಲ್ಲಿ ಆರ್‌ಸಿಬಿ ಮನೀಶ್‌ ಪಾಂಡೆಯನ್ನು ನಾಯಕನ ಸ್ಥಾನದಲ್ಲಿ ಕೂರಿಸುವುದು ಖಚಿತ ಎನ್ನುತ್ತಿದ್ದಾರೆ ಕ್ರಿಕೆಟ್‌ ಪಂಡಿತರು.

ಇದನ್ನೂ ಓದಿ : KL RAHUL : ಪಂಜಾಬ್ ಕಿಂಗ್ಸ್‌ನಿಂದ ಹೊರಬಂದ ಕೆ.ಎಲ್.ರಾಹುಲ್‌ : ಕೊನೆಗೂ ಮೌನ ಮುರಿದ ಕನ್ನಡಿಗ

ಇದನ್ನೂ ಓದಿ : IPL 2022 Retained Players : ಯಾರು ಇನ್‌, ಯಾರು ಔಟ್‌ : ಇಲ್ಲಿದೇ ರಿಟೈನ್ಡ್‌ ಆಟಗಾರರ ಕಂಪ್ಲೀಟ್‌ ಡಿಟೈಲ್ಸ್‌

ಇದನ್ನೂ ಓದಿ : IPL Retention : ಕೆಎಲ್ ರಾಹುಲ್ ನಿರ್ಗಮನ : ಮಯಾಂಕ್ ಅಗರ್ವಾಲ್ ಪಂಜಾಬ್‌ ಕಿಂಗ್ಸ್‌ ನಾಯಕ

(RCB new captain name out, Kannadiga will lead team. But not KL Rahul, Devdutt Padikkal )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular