blouse less saree : ಟ್ಯಾಟೂನೇ ಬ್ಲೌಸ್ : ಸೀರೆ ಸೆರಗು ಜಾರಿದ್ರೇ ಗತಿ ಏನು ಅಂದ್ರು ನೆಟ್ಟಿಗರು

ಸೀರೆಗೆ ತರ ತರದ ಡಿಸೈನ್ ಬ್ಲೌಸ್ ಹಾಕೋದು, ಬ್ಲೌಸ್ ಗೆ ವಿವಿಧ ಅಲಂಕಾರ ಮಾಡಿಸೋದು ಹೆಂಗಳೆಯರ ಮೆಚ್ಚಿನ ಹವ್ಯಾಸ. ಆದರೆ ಇಲ್ಲೊಬ್ಬ ಸುಂದರಿ ಮಾತ್ರ ಸೀರೆ ಬ್ಲೌಸ್ (blouse less saree) ಹಾಕೋದನ್ನೇ ಮರೆತು ಬಿಟ್ಟಿದ್ದಾಳೆ. ಆದರೆ (Viral Video) ನೋಡುಗರ ಮಾತ್ರ‌ ಮೈಮುಚ್ಚಿದ ಟ್ಯಾಟೂ ನೋಡಿ ಕನ್ ಪ್ಯೂಸ್ ಆಗಿದ್ದಾರೆ.

ಹೌದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವೀಡಿಯೋ ವೊಂದು ಪಡ್ಡೆಗಳ ನಿದ್ದೆಗೆಡಿಸಿದೆ. ಅಷ್ಟೇ ಅಲ್ಲ ಅಯ್ಯಪ್ಪಾ .. ಫ್ಯಾಶನ್ ಅಂದ್ರೇ ಹಿಂಗೂ ಇರುತ್ತಾ ಅಂತ ನೋಡುಗರು,ಹೆಣ್ಮಕ್ಕಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಥಾನ್ಸ್ ಜೆಟ್ ಎಂಬುವವರು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಲಕ್ಷಾಂತರ ಜನರು ಈ ವಿಡಿಯೋ ನೋಡಿ ಎಂಜಾಯ್ ಮಾಡ್ತಿದ್ದಾರೆ.

ಮೈತುಂಬ ಸೀರೆ ಉಟ್ಟ ಚೆಲುವೆ ಸುಂದರ ಡಿಸೈನ್ ಇರೋ ಬ್ಲೌಸ್ ತೊಟ್ಟಂತೆ ಮೇಲ್ನೋಟಕ್ಕೆ ಕಾಣಿಸುತ್ತೆ. ಆದರೆ ಹತ್ತಿರಕ್ಕೆ ಹೋದಾಗಲೇ ಗೊತ್ತಾಗೋದು ಸುಂದರಿ ಕೈ ಬೆನ್ನು ಸೇರಿದಂತೆ ಬ್ಲೌಸ್ ಬರೋ ಜಾಗಕ್ಕೆಲ್ಲ ಹಾಕಿಕೊಂಡಿರೋದು ಮೆಹೆಂದಿ ಅಥವಾ ಟ್ಯಾಟೂ ಅಂತ. ಆಕೆ‌ ಚಿಕಂಕಾರಿ ಸೀರೆ ಧರಿಸಿದ್ದು ಅದಕ್ಕೆ ಸುಂದರವಾದ ಡಿಸೈನ್ ಬ್ಲೌಸ್ ಸಿದ್ಧಪಡಿಸೋ ಬದಲು ಮೆಹೆಂದಿ ಡಿಸೈನ್ ನಲ್ಲೇ ರವಿಕೆ ಬಿಡಿಸಿಕೊಂಡು ಕ್ರಿಯಾತ್ಮಕವಾಗಿ ಎಕ್ಸಪೋಸ್ ಮಾಡಿದ್ದಾರೆ.

ಇನ್ನು ಈ ವಿಡಿಯೋವನ್ನು ಹತ್ತಿರದಿಂದ ನೋಡಿದಾಗ ಮಾತ್ರ ಆಕೆ ಬ್ಲೌಸ್ ಹಾಕಿಲ್ಲ ಅನ್ನೋದು ಗೊತ್ತಾಗುತ್ತಿದ್ದು ಮೇಲ್ನೋಟಕ್ಕೆ ಆಕೆ ಡಿಸೈನರ್ ರವಿಕೆ ಧರಿಸಿದ್ದಾಳೆ ಎನ್ನುವಷ್ಟು ನ್ಯಾಚುರಲ್ ಆಗಿ ವಿಡಿಯೋ ಚಿತ್ರಿಸಲಾಗಿದೆ.

ಇನ್ನು ಈ ವಿಡಿಯೋ ಸಕತ್ ಕಮೆಂಟ್ ಗಳು ಹರಿದು ಬಂದಿದ್ದು ಕೆಲವರು ನಾನು ಮೆಹೆಂದಿ ಹಾಕೋದನ್ನು ಕಲಿಬೇಕು ಅಂದ್ರೇ ಇನ್ನು ಕೆಲವರು ಅಯ್ಯೋ ಈ ಮೆಹೆಂದಿ ಕಲಾವಿದನ ಅದೃಷ್ಟವಪ್ಪಾ ಎಂದು ಅಲವತ್ತುಕೊಂಡಿದ್ದಾರೆ. ಇನ್ನು ಕೆಲವರು ವಾವ್ ಎಂತ ಕ್ರಿಯೇಟಿವ್ ಐಡಿಯಾ ಎಂದು ಕೊಂಡಾಡಿದ್ದಾರೆ. ಆದರೆ ಈ ವೀಡಿಯೋ ವೈರಲ್ ಆಗಿದ್ದರೂ ರೂಪದರ್ಶಿ ಯಾರು, ವಿಡಿಯೋ ಶೂಟ್ ಆಗಿದ್ದೆಲ್ಲಿ ಎಂಬ ಅಂಶ ಬಯಲಾಗಿಲ್ಲ.

ಇದನ್ನೂ ಓದಿ : ಫ್ಯಾಷನ್‌ಗೆ ವಯಸ್ಸು ಮುಖ್ಯವಲ್ಲ ಅಂದ್ರು ಪ್ರಿಯಾಂಕ : ಪೋಟೋ ನೋಡಿ Beautiful ಅಂದ್ರು ಅಭಿಮಾನಿಗಳು

ಇದನ್ನೂ ಓದಿ : ಸಮುದ್ರದಾಳದಲ್ಲಿ ಪತ್ತೆಯಾಯ್ತು ಅಪರೂಪದ ಮೀನು: ಬರ್ಗರ್​ ಮಾದರಿಯ ಜಲಚರ ಕಂಡ ನೆಟ್ಟಿಗರು ಶಾಕ್​​

( Viral Video : A woman in a saree wearing a mehndi instead of a blouse less saree )

Comments are closed.