ದುಬೈ : ಐಪಿಎಲ್ ಆರಂಭದಲ್ಲೇ ಕೊರೊನಾ ಶಾಕ್ ಕೊಟ್ಟಿದೆ. ಸನ್ ರೈಸಸ್ ಹೈದ್ರಾಬಾದ್ ತಂಡದ ಬೌಲರ್ ಟಿ.ನಟರಾಜನ್ (T Natarajan) ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಅಲ್ಲದೇ ಇಂದು ನಡೆಯಲಿರುವ ದೆಹಲಿ – ಹೈದ್ರಾಬಾದ್ ಪಂದ್ಯದ ಮೇಲೂ ಪರಿಣಾಮ ಬೀರಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಇದೀಗ ದುಬೈನಲ್ಲಿ ದ್ವಿತೀಯಾರ್ಧದ ಪಂದ್ಯಾವಳಿ ಆರಂಭಗೊಂಡಿದೆ. ಈ ನಡುವಲ್ಲೇ ಹೈದ್ರಾಬಾದ್ ತಂಡದ ಮೇಲೆ ಕೊರೊನಾ ಕರಿನೆರಳು ಬೀರಿದೆ. ನಟರಾಜನ್‌ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲೀಗ ಉಳಿದ ಆಟಗಾರರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಸನ್ ರೈಸಸ್ ಹೈದ್ರಾಬಾದ್ ತಂಡ ಹೇಳಿಕೊಂಡಿದೆ.
ನಟರಾಜನ್ ಜೊತೆಗೆ ಸಂಪರ್ಕದಲ್ಲಿದ್ದ ಆರು ಮಂದಿ ಆಟಗಾರರನ್ನು ಈಗಾಗಲೇ ಐಸೋಲೇಷನ್‌ಗೆ ಒಳಪಡಿಸಲಾಗಿದೆ. ಐಪಿಎಲ್ ಅಂಗಳದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಬಿಸಿಸಿಐ ತಲೆನೋವಿಗೆ ಕಾರಣವಾಗಿದೆ. ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ನಟರಾಜನ್ ಈ ಬಾರಿಯ ಐಪಿಎಲ್ ಪಂದ್ಯಾವಳಿ ಮಿಸ್ ಮಾಡಿಕೊಳ್ಳುವುದು ಖಚಿತ.
ಇಂದಿನ SRH VS DC ಪಂದ್ಯ ನಡೆಯುತ್ತಾ ?
ಸನ್‌ರೈಸಸ್ ಹೈದ್ರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಇಂದು ಸಂಜೆ ಪಂದ್ಯ ನಡೆಯಲಿದೆ. ಆದರೆ ಹೈದ್ರಾಬಾದ್ ತಂಡದ ಆಟಗಾರನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಪಂದ್ಯಾವಳಿ ನಡೆಯೋದು ಅನುಮಾನ. ಎರಡೂ ತಂಡಗಳ ಆಟಗಾರರ ಕೊರೊನಾ ತಪಾಸಣಾ ವರದಿ ಕೈ ಸೇರಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 20,000 ರನ್ : ಹೊಸ ದಾಖಲೆ ಬರೆದ ಮಿಥಾಲಿ ರಾಜ್
ಇದನ್ನೂ ಓದಿ : ರಾಜಸ್ತಾನ್ ರಾಯಲ್ಸ್ ಎದುರು ಮುಗ್ಗರಿಸಿದ ಪಂಜಾಬ್ ಕಿಂಗ್ಸ್
(IPL 2021 SRH vs DC : SRH Player T Natarajan test COVID -19 Positive )