ಸದನದಲ್ಲಿ ಬಿಚ್ಚಿತು ಸಿದ್ದರಾಮಯ್ಯ ಪಂಚೆ : ಗಂಭೀರ ಚರ್ಚೆಯ ನಡುವೆ ನಡೆಯಿತು ಹಾಸ್ಯ ಪ್ರಸಂಗ !

ಬೆಂಗಳೂರು : ವಿಧಾನಸಭೆಯ ಅಧಿವೇಶನದಲ್ಲಿಂದು ಮೈಸೂರು ರೇಪ್ ಪ್ರಕರಣ ಕುರಿತಂತೆ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಚರ್ಚೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸದನದಲ್ಲೇ ಸಿದ್ದರಾಮಯ್ಯ ಪಂಚೆ ಜಾರಿದೆ. ಇದನ್ನುಯಾರೂ ಗಮನಿಸದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಸರಿ ಪಡಿಸಿಕೊಳ್ಳುವಂತೆ ಹೇಳಿದ್ದಾರೆ.

ಶಿವಕುಮಾರ್ ಹೇಳಿದ್ದನ್ನು ಕಂಡು ಕೆಳಗೆ ನೋಡಿಕೊಂಡ ಸಿದ್ಧರಾಮಯ್ಯ ಪಂಚೆ ಸರಿ ಮಾಡಿಕೊಂಡರು. ಅಲ್ಲದೇ.. ಈಶ್ವರಪ್ಪನವರೇ.. ಪಂಚೆ ಜಾರಿದೆ.. ಸರಿ ಮಾಡಿಕೊಳ್ಳುವೆ ಅಂದ್ರು.. ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್, ನಮ್ಮ ಅಧ್ಯಕ್ಷಕರು ನಾಯಕರಿಗೆ ಕಿವಿಯಲ್ಲಿ ಹೇಳಿ ಮಾನ ಉಳಿಸಿದ್ರೇ, ಇಲ್ಲಿ ಪಂಚೆ ಜಾರಿದೋನ್ನು ಜಗಜ್ಜಾಹಿರು ಮಾಡಿದ್ರು ಅಂದ್ರು.

ಇದನ್ನೂ ಓದಿ: Siddaramaiah: ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಸೇರ್ಪಡೆ !

ಮತ್ತೆ ಮಾತು ಮುಂದುವರೆಸಿದಂತ ಸಿದ್ದರಾಮಯ್ಯ ಇತ್ತೀಚೆಗೆ ಹೊಟ್ಟೆ ಸ್ವಲ್ಪ ದಪ್ಪ ಆಗಿದೆ, ಕಳಚಿಕೊಳ್ಳುತ್ತದೆ. ಮೊದಲು ಪಂಚೆ ಕಟ್ಟಿದರೆ ಬಿಚ್ಚಿಕೊಳ್ಳುತ್ತಿರಲಿಲ್ಲ,‌ ಈಗ ಕೊರೋನಾ‌ ಬಂದ ಬಳಿಕ ನಾಲ್ಕೈದು ಕೆಜಿ ಹೆಚ್ಚು ತೂಕ ಬಂದಿದೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ನಡೆದಿತ್ತಾ ಎಣ್ಣೆಪಾರ್ಟಿ ? ಪತ್ತೆಯಾಯ್ತು ಬಿಯರ್‌ ಬಾಟಲ್‌

ಹಾಗಾಗಿ ಪಂಚೆ ಬಿಚ್ಚಿಕೊಳ್ಳುತ್ತದೆ, ಅದಕ್ಕೆ ಯಾವಾಗಲೂ ಜುಬ್ಬಾ ಹಾಕಿಕೊಳ್ಳೋದು. ಬಹಳಷ್ಟು ಮಂದಿ ಲುಂಗಿನೂ ಹಾಕಲ್ಲ, ಧೋತಿನೂ ಉಟ್ಟುಕೊಳ್ಳುವುದಿಲ್ಲ, ಪ್ಯಾಂಟೂ ಹಾಕೊಳ್ಳುವುದಿಲ್ಲ, ನಿಲುವಂಗಿ ಹಾಕಿಕೊಳ್ಳುತ್ತಾರೆ ಎಂದು ಪಂಚೆ ಬಿಚ್ಚಿಕೊಂಡಿದ್ದಕ್ಕೆ ನಗುತ್ತಾ ಸಿದ್ದರಾಮಯ್ಯ ಉತ್ತರಿಸಿದರು.

(Siddaramaiah during Assembly session: Amidst serious debate comedy!)

Comments are closed.