ಸೋಮವಾರ, ಏಪ್ರಿಲ್ 28, 2025
HomeSportsIPL 2021: ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿಗೆ ಕಾರಣವಾಯ್ತು ರಿಷಬ್‌ ಪಂತ್‌ ಕೈಗೊಂಡ ಒಂದು ನಿರ್ಧಾರ

IPL 2021: ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿಗೆ ಕಾರಣವಾಯ್ತು ರಿಷಬ್‌ ಪಂತ್‌ ಕೈಗೊಂಡ ಒಂದು ನಿರ್ಧಾರ

- Advertisement -

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮುಗ್ಗರಿಸಿದೆ. ರಿಷಬ್‌ ಪಂತ್‌ ತನ್ನ ನಾಯಕತ್ವದಿಂದಲೇ ಗಮನ ಸೆಳೆದಿದ್ದರು. ಮಾತ್ರವಲ್ಲ ಡೆಲ್ಲಿ ಐಪಿಎಲ್‌ ಟ್ರೋಫಿಯನ್ನು ತನ್ನದಾಗಿಸಿ ಕೊಳ್ಳುತ್ತೆ ಅಂತಾನೇ ಎಲ್ಲರೂ ಭಾವಿಸಿಕೊಂಡಿದ್ದರು. ಆದರೆ ರಿಷಬ್‌ ಪಂತ್‌ ಕೈಗೊಂಡ ಒಂದು ನಿರ್ಧಾರ ಇದೀಗ ತಂಡದ ಸೋಲಿಗೆ ಕಾರಣವಾಗಿದೆ ಅನ್ನೋ ಚರ್ಚೆ ಶುರುವಾಗಿದೆ.

ಹೌದು, ಐಪಿಎಲ್ 2021ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ವಿರುದ್ದ ಸೋಲು ಕಂಡಿತ್ತು. ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ತಂಡದ ಅಭಿಮಾನಿಗಳಿಗೆ ನಿರಾಸೆಯನ್ನು ಮೂಡಿಸಿತ್ತು. ಐಪಿಎಲ್‌ನಲ್ಲಿ ಅದ್ಬುತ ನಾಯಕತ್ವ ನಿಭಾಯಿಸಿದ್ದ ರಿಷಬ್‌ ಪಂತ್‌ ಬಗ್ಗೆ ಹೊಗಳುತ್ತಿದ್ದ ಕ್ರಿಕೆಟ್‌ ಪಂಡಿತರು ಇದೀಗ ಪಂತ್‌ ನಿರ್ಧಾರದ ಬಗ್ಗೆಯೇ ಬೊಟ್ಟು ಮಾಡುತ್ತಿದ್ದಾರೆ.

ಶಾರ್ಜಾ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬೃಹತ್‌ ಮೊತ್ತವನ್ನು ಕಲೆ ಹಾಕುವ ಲೆಕ್ಕಾಚಾರವನ್ನು ಹಾಕಿಕೊಂಡಿತ್ತು. ಆದರೆ ಶಿಖರ್‌ ಧವನ್‌ ಹಾಗೂ ಪ್ರಥ್ವಿ ಶಾ ಉತ್ತಮ ಜೊತೆಯಾಟದ ಪ್ರದರ್ಶನವನ್ನು ನೀಡಿದ್ದಾರೆ. ವಿಕೆಟ್‌ ಉರುಳುತ್ತಲೇ ಪಂತ್‌ ಒಂದನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಆಟಗಾರ ಮಾರ್ಕಸ್‌ ಸ್ಟೊಯಿನಿಸ್‌ ಅವರನ್ನು ಕಣಕ್ಕೆ ಇಳಿಸಿದ್ದರು. ಆದರೆ ಶಾರ್ಜಾ ಪಿಚ್‌ ಅರ್ಥ ಮಾಡಿಕೊಳ್ಳುವಲ್ಲಿ ಸ್ಟೊಯಿನಿಸ್‌ ಎಡವಿದ್ದಾರೆ.

ಮಾರ್ಕಸ್ ಸ್ಟೊಯಿನಿಸ್ 78.26 ಸ್ಕ್ರೈಕ್‌ ರೇಟ್‌ನಲ್ಲಿ 23 ಎಸೆತಗಳನ್ನು ಎದುರಿಸಿ ಕೇವಲ 18 ರನ್ ಗಳಿಸಿದ್ದರು. ಕಳೆದ ಆರು ಪಂದ್ಯಗಳಿಂದ ಹೊರಗುಳಿದಿದ್ದ ಸ್ಟೊಯಿನಿಸ್‌ ಅವರನ್ನು ಒಂದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಿರೋದು ಇದೀಗ ಚರ್ಚೆಯನ್ನು ಹುಟ್ಟುಹಾಕಿದೆ. ಭರವಸೆಯ ಆಟಗಾರ ಶ್ರೇಯಸ್‌ ಅಯ್ಯರ್‌ ಹಾಗೂ ಸಿಮ್ರಾನ್‌ ಹೆಟ್ಮಯರ್‌ ಅದ್ಬುತ ಫಾರ್ಮ್‌ನಲ್ಲಿದ್ದಾರೆ. ಈ ಇಬ್ಬರು ಆಟಗಾರರಲ್ಲಿ ಓರ್ವರನ್ನು ಒಂದನೇ ಕ್ರಮಾಂಕದಲ್ಲಿ ಇಳಿಸುವ ಅನಿವಾರ್ಯತೆಯಿತ್ತು.

ಐಪಿಎಲ್‌ ಆರಂಭದಲ್ಲಿ ದೆಹಲಿ ತಂಡಕ್ಕೆ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಮೂಲಕ ನೆರವಾಗುತ್ತಿದ್ದರು. ಆದರೆ ದ್ವಿತಿಯಾರ್ಧದಲ್ಲಿ ಗಾಯಗೊಂಡ ಹಿನ್ನೆಲೆಯಲ್ಲಿ ಬೌಲಿಂಗ್‌ ಮಾಡುವುದು ಅಸಾಧ್ಯವಾಗಿತ್ತು. ಆದರೂ ಕೂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅವರ ಬ್ಯಾಟಿಂಗ್‌ ನೆಚ್ಚಿಕೊಂಡಿತ್ತು. ಆದರೆ ಎಲಿಮಿನೇಟರ್‌ ಪಂದ್ಯದಲ್ಲಿ ಸ್ಟೊಯಿನಿಸ್‌ ಕೈಕೊಟ್ಟಿದ್ದು, ದೆಹಲಿ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ.

ಆಟಗಾರ ಸ್ಟೀವ್‌ ಸ್ಮಿತ್‌ ಹಾಗೂ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಟಾಮ್‌ ಕುರ್ರನ್‌ ತಂಡದಲ್ಲಿ ಇದ್ದರೂ ಕೂಡ ಇಬ್ಬರಿಗೂ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿರಲಿಲ್ಲ. ಆಸ್ಟ್ರೇಲಿಯಾ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ ಅನುಭವಿ ಸ್ಟೀವ್‌ ಸ್ಮಿತ್‌ ಮಹತ್ವದ ಪಂದ್ಯದಲ್ಲಿ ಅದ್ಬುತ ಆಟದ ಪ್ರದರ್ಶನ ನೀಡಿದ್ದಾರೆ. ಇನ್ನೊಂದೆಡೆಯಲ್ಲಿ ಟಾಮ್‌ ಕುರ್ರನ್‌ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿಯೂ ಮಿಂಚುವ ತಾಕತ್ತು ಹೊಂದಿದ್ದಾರೆ. ಆದರೆ ಇಬ್ಬರೂ ಆಟಗಾರರನ್ನು ಪಂತ್‌ ಕಡೆಗಣಿಸಿದ್ದರು. ಸ್ಟೊಯಿನಿಸ್‌ ಬದಲು ಇಬ್ಬರಲ್ಲಿ ಓರ್ವರಿಗೆ ಅವಕಾಶ ನೀಡಿದ್ರೂ ಪಂದ್ಯದ ಗತಿಯೇ ಬದಲಾಗುವ ಸಾಧ್ಯತೆಯಿತ್ತು ಎನ್ನಲಾಗುತ್ತಿದೆ.

ರಿಷಬ್‌ ಪಂತ್‌ ಇದೇ ಮೊದಲ ಬಾರಿಗೆ ನಾಯಕನಾಗಿ ತಂಡವನ್ನು ಮುನ್ನೆಡೆಸಿದ್ದರು. ಆದರೆ ಲೀಗ್‌ ಹಂತದಲ್ಲಿ ಅದ್ಬುತ್‌ ಪ್ರದರ್ಶನ ನೀಡಿದ್ದರೂ ಕೂಡ ಕ್ವಾಲಿಫೈಯರ್‌ ಹಾಗೂ ಎಲಿಮಿನೇಟರ್‌ ಪಂದ್ಯದಲ್ಲಿ ಅವರು ಎಡವಿದ್ದು ಎದ್ದು ಕಾಣಿಸುತ್ತಿತ್ತು. ಪಂತ್‌ ಮಾಡಿದ ಆ ಎಡವಟ್ಟು ಇಂದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ತಂಡಕ್ಕೆ ಸೋಲಿನ ಅನುಭವ ನೀಡಿದೆ.

( IPL 2021 : Rishabh Pant’s one big mistake made Delhi Capitals out of qualifier )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular