ನವದೆಹಲಿ : ಜಮ್ಮು ಕಾಶ್ಮೀರ ಯುವ ಆಟಗಾರ ಇದೀಗ ಐಪಿಎಲ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿದ್ದಾನೆ. ತರಕಾರಿ ವ್ಯಾಪಾರಿಯ ಮಗನ ವೇಗದ ಎಸೆತಕ್ಕೆ ಭಾರತೀಯರು ಫೀದಾ ಆಗಿದ್ದಾರೆ. ತನ್ನ ಪದಾರ್ಪಣೆಯ ಪಂದ್ಯದಲ್ಲೇ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ತವರೂರಾಗಿರುವ ಜಮ್ಮುವಿನಲ್ಲಿ ರಾತ್ರೋರಾತ್ರಿ ಸೆನ್ಸೇಷನ್ ಹುಟ್ಟುಹಾಕಿದ್ದಾನೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಸನ್‌ರೈಸಸ್ ಹೈದ್ರಾಬಾದ್ ತಂಡ ಈಗಾಗಲೇ ಪ್ಲೇಆಫ್ ನಿಂದ ಹೊರಬಿದ್ದಿದೆ. ಆದ್ರೆ ಐಪಿಎಲ್ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡ ಬೆನ್ನಲ್ಲೇ ಹೈದ್ರಾಬಾದ್ ತಂಡ ಭರ್ಜರಿ ಆಟ ಪ್ರದರ್ಶನವನ್ನು ನೀಡಿದೆ. ಅದ್ರಲ್ಲೂ ಸನ್‌ರೈಸಸ್ ಹೈದ್ರಾಬಾದ್ ಪರವಾಗಿ ಗಮನ ಸೆಳೆದಿರೋದು ಜಮ್ಮುಕಾಶ್ಮೀರ ಮೂಲದ ಯುವ ಆಟಗಾರ ಉಮ್ರಾನ್ ಮಲ್ಲಿಕ್.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಟಿ. ನಟರಾಜ ಐಪಿಎಲ್ ನಿಂದ ಹೊರಬಿದ್ದಿದ್ದರು. ಆದ್ರೆ ನಟರಾಜನ್ ಪರ ಹೈದ್ರಾಬಾದ್ ತಂಡ ಸೇರಿಕೊಂಡಿದ್ದ 21 ವರ್ಷದ ಉಮ್ರಾನ್ ಮಲ್ಲಿಕ್ ಇದೀಗ ಅತೀ ವೇಗದ ಎಸೆತವನ್ನು ಎಸೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಉಮ್ರಾನ್ ಮಲ್ಲಿಕ್ ಗಂಟೆಗೆ 151.03 ಕಿಮಿ ವೇಗದಲ್ಲಿ ಎಸೆತವನ್ನು ಎಸೆದಿದ್ದಾರೆ. ಇದು ಐಪಿಎಲ್ ಋತುವಿನಲ್ಲಿ ಭಾರತೀಯ ಬೌಲರ್ ಓರ್ವ ಎಸೆದಿರುವ ವೇಗದ ಎಸೆತವಾಗಿದೆ.
ಇದನ್ನೂ ಓದಿ : ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ! ಚೆನ್ನೈನಲ್ಲೇ ವಿದಾಯ ಪಂದ್ಯವೆಂದ ಸಿಎಸ್‌ಕೆ ನಾಯಕ
ಸನ್‌ರೈಸಸ್ ಹೈದ್ರಾಬಾದ್ ತಂಡ ಈಗಾಗಲೇ ಐಪಿಎಲ್‌ನಿಂದ ಹೊರಬಿದ್ದಿದೆ. ಆದ್ರೆ ಯುವ ಆಟಗಾರನಿಗೆ ಹೆಚ್ಚಿನ ಅವಕಾಶವನ್ನು ಮಾಡಿಕೊಡುವ ಕಾರ್ಯವನ್ನು ಮಾಡುತ್ತಿದೆ. ಇನ್ನು ಉಮ್ರಾನ್ ಮಲ್ಲಿಕ್ ಐಪಿಎಲ್‌ನಲ್ಲಿ ಕಾಣಿಸಿಕೊಂಡು ಹೊಸ ದಾಖಲೆಯನ್ನು ಬರೆಯುತ್ತಿದ್ದಂತೆಯೇ ಅತ್ತ ತಂದೆ ತಾಯಿ ಮಗನ ಸಾಧನೆಯನ್ನು ಕಂಡು ಸಂಭ್ರಮಿಸಿದ್ದಾರೆ. ಉಮ್ರಾನ್ ಮಲ್ಲಿಕ್ ತಂದೆ ಅಬ್ದುಲ್ ಮಲ್ಲಿಕ್ ತರಕಾರಿ ವ್ಯಾಪಾರಿ. ಬಡತನದ ನಡುವಲ್ಲೇ ಉಮ್ರಾನ್ ಮಲ್ಲಿಕ್ ಕ್ರಿಕೆಟ್ ಲೋಕದಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದ. ಇದೀಗ ಐಪಿಎಲ್ ಮೂಲಕ ಕನಸು ನನಸಾಗುತ್ತಿದೆ ಎಂದು ತಂದೆ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ : 1 ಗಂಟೆಯಲ್ಲಿ ಸೋಲ್ಡೌಟ್ ಆಯ್ತು ಭಾರತ – ಪಾಕ್ ಪಂದ್ಯದ ಟಿಕೆಟ್
ನನ್ನ ಮಗ ನನಗೆ ಹೆಮ್ಮೆ ತಂದಿದ್ದಾನೆ. ನಮ್ಮ ಸಂತೋಷಕ್ಕೆ ಮಿತಿಯಿಲ್ಲ. ಲೆಫ್ಟಿನೆಂಟ್ ಗವರ್ನರ್ ಸಾಹಿಬ್ ಕೂಡ ನಮ್ಮನ್ನು ಅಭಿನಂದಿಸಿದ್ದಾರೆ. ನನ್ನ ಮಗ ತನ್ನ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ನಾನು ಸರ್ವಶಕ್ತನನ್ನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.. ಜೆ & ಕೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಟ್ವಿಟ್ಟರ್ ನಲ್ಲಿ ಜಮ್ಮುವಿನ ಯುವ ಕ್ರಿಕೆಟಿಗನನ್ನು ಅಭಿನಂದಿಸಿದ್ದಾರೆ.
( IPL 2021: Vegetable seller’s son become India’s fastest bowler, Big achievement of Umran Malik in SRH )