Aryan Khan : ಆರ್ಯನ್‌ ಖಾನ್‌ಗೆ ಇಲ್ಲ ಬಿಡುಗಡೆ ಭಾಗ್ಯ : ಅ.9 ರ ವರೆಗೆ ಎನ್‌ಸಿಬಿ ಕಸ್ಟಡಿ

ಮುಂಬೈ : ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ. ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತನಾಗಿರುವ ಆರ್ಯನ್‌ ಖಾನ್‌ಗೆ ಕಿಲ್ಲಾ ನ್ಯಾಯಾಲಯ ಅಕ್ಟೋಬರ್‌ 9 ರ ವರೆಗೆ ಎನ್‌ಸಿಬಿ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದೆ.

ಅರಬ್ಬಿ ಸಮುದ್ರದ ಮಧ್ಯದಲ್ಲಿ ಹಡಗಿನಲ್ಲಿ ನಡೆದಿದ್ದ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರೂಖ್‌ ಖಾನ್‌ ಪುತ್ರ ಸೇರಿ ೧೬ ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಆರ್ಯನ್‌ ಖಾನ್‌ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದ ಎನ್‌ಸಿಬಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿಂದು ಕಿಲ್ಲಾ ನ್ಯಾಯಾಲಯಕ್ಕೆ ಆರೋಪಿಗಳನ್ನು ಕರೆತರಲಾಗಿತ್ತು. ಆರ್ಯನ್‌ ಪರ ವಕೀಲರು ಆರ್ಯನ್‌ಗೆ ಜಾಮೀನು ನೀಡುವಂತೆ ಮನವಿಯನ್ನು ಮಾಡಿದ್ದಾರೆ.

ಆರ್ಯನ್‌ ಪರ ವಕೀಲರು ಜಾಮೀನಿಗಾಗಿ ಮನವಿ ಮಾಡುತ್ತಿದ್ದಂತೆಯೇ ಎನ್‌ಸಿಬಿ ಇನ್ನೂ ಹಲವು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರ ಮುಂದೆ ಮನವಿಯನ್ನು ಮಾಡಿಕೊಂಡಿದ್ದಾರೆ. ಕನಿಷ್ಠ ಅಕ್ಟೋಬರ್‌ 11 ರ ವರೆಗೆ ಕಸ್ಟಡಿಗೆ ನೀಡುವಂತೆ ಕೇಳಿಕೊಂಡಿದ್ದು, ಅಂತಿಮವಾಗಿ ಕಿಲ್ಲಾ ನ್ಯಾಯಾಲಯ ಅಕ್ಟೋಬರ್‌ 9ರ ವರೆಗೆ ಆರ್ಯನ್‌ ಖಾನ್‌ ಸೇರಿದಂತೆ ಮೂವರು ಆರೋಪಿಗಳನ್ನು ಎನ್‌ಸಿಬಿ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದೆ.

ಇನ್ನು ಆರ್ಯನ್‌ ಖಾನ್‌ಗೆ ಅಂಚಿತ್‌ ಜೊತೆ ಡ್ರಗ್ಸ್‌ ಲಿಂಕ್‌ ಇರುವುದು ದೃಢಪಟ್ಟಿದೆ ಎನ್ನಲಾಗುತ್ತಿದೆ. ತಾಂತ್ರಿಕ ಸಾಕ್ಷ್ಯಗಳನ್ನು ಇಟ್ಟುಕೊಂಡು ವಿಚಾರಣೆಯನ್ನು ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿಗಳು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಇಂದಾದ್ರೂ ಜಾಮೀನು ಸಿಗುತ್ತೆ ಅಂತಾ ನಿರೀಕ್ಷೆಯಲ್ಲಿದ್ದ ಶಾರೂಖ್‌ ಖಾನ್‌ ದಂಪತಿಗಳಿಗೆ ನಿರಾಸೆಯಾಗಿದೆ.

ಇದನ್ನೂ ಓದಿ : ಕ್ರೂಸ್‌ನಲ್ಲಿ ಡ್ರಗ್ಸ್‌ ಪಾರ್ಟಿ : ನಟ ಶಾರೂಖ್‌ ಪುತ್ರ ಆರ್ಯನ್‌ ವಿಚಾರಣೆ, 16 ಮಂದಿ ಅರೆಸ್ಟ್‌

ಇದನ್ನೂ ಓದಿ : ಮುಂಬೈ ಕ್ರೂಸ್‌ ಡ್ರಗ್ಸ್‌ ಪಾರ್ಟಿಗೆ ಬೆಂಗಳೂರಿನ ಲಿಂಕ್‌ ?

( Mumbai Drugs case, Shah Rukh Khan son Aryan Khan gets bail, NCB custody till 9th October )

Comments are closed.