ಐರ್ಲೆಂಡ್ : ಕ್ರಿಕೆಟ್ ಪಂದ್ಯದ ವೇಳೆಯಲ್ಲಿ ಸಾಕು ಪ್ರಾಣಿ, ಪಕ್ಷಿಗಳು ಮೈದಾನಕ್ಕೆ ಇಳಿಯುವುದು ಹೊಸತೇನಲ್ಲಾ. ಆದ್ರೆ ಐರ್ಲೆಂಡ್‌ನಲ್ಲಿ ನಡೆದಿರುವ ಘಟನೆ ಮಾತ್ರ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸಿತ್ತು. ದೇಶೀಯ ಕ್ರಿಕೆಟ್ ಟೂರ್ನಿಯ ವೇಳೆಯಲ್ಲಿ ನಾಯಿಯೊಂದು ಕ್ರಿಕೆಟ್ ಅಂಗಳಕ್ಕೆ ಇಳಿದು ಭರ್ಜರಿ ಫೀಲ್ಡಿಂಗ್ ಮಾಡಿದೆ, ಅಷ್ಟೇ ಯಾಕೆ ನಾಯಿ ಚೆಂಡನ್ನು ಕದ್ದೊಯ್ಯುತ್ತಿದ್ದಂತೆಯೇ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿದೆ.
ಹೌದು, ಬ್ರೆಡಿ ಮತ್ತು ಸಿಎಸ್‌ಎನ್‌ಐ ತಂಡಗಳ ನಡುವೆ ದೇಶೀಯ ಕ್ರಿಕೆಟ್ ಪಂದ್ಯವಳಿ ನಡೆಯುತ್ತಿತ್ತು. ಈ ವೇಳೆಯಲ್ಲಿ ಐರೀಶ್ ದೇಶೀಯ ಮಹಿಳೆಯರು ಆಟದಲ್ಲಿ ಮಗ್ನರಾಗಿದ್ದರು. ಸ್ಟೇಡಿಯಂನಲ್ಲಿ ತನ್ನ ಮಾಲೀಕನ ಜೊತೆಗೆ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದ ನಾಯಿಯೊಂದು ಅಂಗಳಕ್ಕೆ ಎಂಟ್ರಿಕೊಟ್ಟಿತ್ತು.

ಮಳೆಯ ಹಿನ್ನೆಲೆಯಲ್ಲಿ ಪಂದ್ಯವನ್ನುಮೊಟಕುಗೊಳಿಸಲಾಗಿದ್ದು, 12 ಓವರ್‌ಗಳ ಪಂದ್ಯದಲ್ಲಿ 74 ರನ್ ಗಳಿಸಲು ಅವಕಾಶ ನೀಡಲಾಗಿತ್ತು. ಈ ವೇಳೆಯಲ್ಲಿ ಬ್ಯಾಟರ್ ಅಬ್ಬಿ ಲೆಕ್ಕಿ ಕೀಪರ್‌ನ ಹಿಂದೆಯೇ ಚೆಂಡನ್ನು ಹೊಡೆದರು. ಶಾರ್ಟ್ ಥರ್ಡ್ ಮ್ಯಾನ್‌ನಲ್ಲಿ ಫೀಲ್ಡರ್ ಆಫ್ ಸೈಡ್‌ನಲ್ಲಿರುವ ಚೆಂಡನ್ನು ಫೀಲ್ಡರ್ ವಿಕೆಟ್ ಕೀಪರ್‌ಗೆ ಎಸೆದರು. ವಿಕೆಟ್ ಕೀಪರ್ ರಾಚೆಲ್ ಹೆಫ್ಟರ್ನ್ ಚೆಂಡನ್ನು ಹಿಡಿದು ಸ್ಟಂಪ್‌ಗೆ ಎಸೆದಿದ್ದಾರೆ. ಆದರೆ ಚೆಂದು ಸ್ಟಂಪ್‌ಗೆ ಸವರದೇ ಮುಂದಕ್ಕೆ ಸಾಗಿದೆ.
ಇದನ್ನು ನೋಡುತ್ತಿದ್ದ ನಾಯಿಯೊಂದು ಚೆಂಡನ್ನು ಬೆನ್ನಟ್ಟಿ ಹಿಡಿದು ಭರ್ಜರಿ ಫೀಲ್ಡಿಂಗ್ ಮಾಡಿದೆ. ಆದರೆ ನಾಯಿ ಚೆಂಡನ್ನು ಬಾಯಿಯನ್ನು ಕಚ್ಚಿಕೊಂಡು ಮೈದಾನದ ಸುತ್ತಲೂ ಓಡೋದಕ್ಕೆ ಶುರು ಮಾಡಿದೆ. ಕ್ರಿಕೆಟ್ ಮೈದಾನದಲ್ಲಿದ್ದ ಆಟಗಾರರು ಅರೆ ಕ್ಷಣ ಆಶ್ಚರ್ಯ ಚಕಿತರಾಗಿದ್ದಾರೆ. ಅಷ್ಟೇ ಯಾಕೆ ಕಾಮೆಂಟೇಟರ್, ಪ್ರೇಕ್ಷಕರು ಅರೆ ಕ್ಷಣ ನೆಗೆಯ ಅಲೆಯಲ್ಲಿ ತೇಲಾಡಿದ್ದಾರೆ.

ನಂತರ ಅಂಗಳಕ್ಕೆ ಎಂಟ್ರಿಕೊಟ್ಟ ನಾಯಿಯ ಮಾಲೀಕರು ಬೆನ್ನಟ್ಟಿ ನಾಯಿಯನ್ನು ಹಿಡಿದಿದ್ದಾರೆ. ಅಂತಿಮವಾಗಿ ನಾಯಿ ಚೆಂಡನ್ನು ಬಾಯಿಯಿಂದ ಬಿಡುವುದಕ್ಕೆ ಒಪ್ಪಿಗೆಯನ್ನು ನೀಡಿದೆ. ನಾಯಿಯ ಅವಾಂತರದಿಂದಾಗಿ ಕೆಲ ಹೊತ್ತು ಪಂದ್ಯವನ್ನೇ ಸ್ಥಗಿತಗೊಳಿಸಲಾಗಿತ್ತು. ನಾಯಿಯ ಈ ಫನ್ನಿ ವಿಡಿಯೋವನ್ನು ಐರ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ : ರದ್ದಾಗಿಲ್ಲ ಇಂಡಿಯಾ ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯ : ಸ್ಪಷ್ಟನೆಕೊಟ್ಟ ECB ಮುಖ್ಯಸ್ಥರು
ಇದನ್ನೂ ಓದಿ : ಟೀ ಇಂಡಿಯಾ ಮೆಂಟರ್ ಆಯ್ಕೆ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿ ವಿರುದ್ಧ ದಾಖಲಾಯ್ತು ದೂರು !
(Ireland-Cricket match halted as dog steals the ball-viral video )