ಕೋಯಿಕ್ಕೋಡ್ ವಿಮಾನ ದುರಂತ : ಅಪಘಾತದ ಹಿಂದಿನ ಕಾರಣ ಬಿಚ್ಚಿಟ್ಟ ಎಎಐಬಿ ವರದಿ

ತಿರುವನಂತಪುರ : ಕಳೆದೊಂದು ವರ್ಷದ ಹಿಂದೆ ನಡೆದಿದ್ದ ಕೋಯಿಕ್ಕೋಡ್‌ ಏರ್‌ ಇಂಡಿಯಾ ವಿಮಾನ ದುರಂತ ಪ್ರಕರಣದ ಹಿಂದಿನ ಕಾರಣ ಬಯಲಾಗಿದೆ. ದುರಂತದ ಕುರಿತು ತನಿಕೇಯನ್ನು ನಡೆದಿದ್ದ ಏರ್‌ ಕ್ರಾಫ್ಟ್‌ ಆಕ್ಸಿಡೆಂಟ್‌ ಇನ್ವೆಸ್ಟಿಗೇಷನ್‌ ಬ್ಯುರೋ (AAIB) ತನ್ನ ತನಿಖಾ ವರದಿಯನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಕೆ ಮಾಡಿದೆ.

ಆಗಸ್ಟ್ 7 ರಂದು ದುಬೈನಿಂದ ಕೋಯಿಕ್ಕೋಡ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ B737-800 ವಿಮಾನ ರನ್‌ವೇನಲ್ಲಿ ದುರಂತ ಕ್ಕೀಡಾಗಿತ್ತು. ವಿಮಾನದಲ್ಲಿದ್ದ 190 ಕ್ಕೂ ಅಧಿಕ ಪ್ರಯಾಣಿಕರ ಪೈಕಿ ವಿಮಾನದ ಫೈಲೆಟ್‌ ಸೇರಿದಂತೆ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದರು. ಈ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕರಣದ ತನಿಖೆಗೆ ಸೂಚನೆಯನ್ನು ನೀಡಿತ್ತು.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಭೀಕರ ಅಪಘಾತದ ಒಂದು ವರ್ಷದ ನಂತರ ಏರ್‌ ಕ್ರಾಫ್ಟ್‌ ಆಕ್ಸಿಡೆಂಟ್‌ ಇನ್ವೆಸ್ಟಿಗೇಷನ್‌ ಬ್ಯುರೋ (AAIB) ಸುಮಾರು 257 ಪುಟಗಳ ವರದಿಯನ್ನು ಸಲ್ಲಿಕೆ ಮಾಡಿದೆ. ಪ್ರಮುಖವಾಗಿ ವರದಿಯಲ್ಲಿ ವಿಮಾನ ದುರಂತದ ಕಾರಣವನ್ನು ಬಿಚ್ಚಿಟ್ಟಿದೆ, “ಪಿಎಫ್ (ಪೈಲಟ್ ಫ್ಲೈಯಿಂಗ್) ನಿಂದ ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಅನ್ನು ಅನುಸರಿಸದಿರುವುದೇ ಇರುವುದು ಅಪಘಾತಕ್ಕೆ ಸಂಭವನೀಯ ಕಾರಣ ಎಂದು ಹೇಳಿದೆ.

ಇದನ್ನೂ ಓದಿ : ಬೆಚ್ಚಿಬೀಳಿಸುತ್ತಿದೆ ಏರ್ ಇಂಡಿಯಾ ವಿಮಾನ ದುರಂತದ ದೃಶ್ಯ: ಭಯಾನಕತೆಯನ್ನು ಸಾರಿ ಹೇಳುತ್ತಿವೆ PHOTOಗಳು !

ವಿಮಾನವನ್ನು ಹಾರಿಸಿದ್ದ ಫೈಲೆಟ್‌ ಪ್ರಮಾಣಿಕ ಕಾರ್ಯಚರಣೆಯ ವಿಧಾನಗಳನ್ನು ಅನುಸರಿಸಿಲ್ಲ. ಅಲ್ಲದೇ ಪಿಎಫ್ ಅಸ್ಥಿರಗೊಳಿಸದ ವಿಧಾನವನ್ನು ಮುಂದುವರಿಸಲಾಗಿತ್ತು. ಇನ್ನು ಟಚ್‌ಡೌನ್ ವಲಯವನ್ನು ಮೀರಿ ವಿಮಾನ ಮುಂದೆ ಬಂದಿದೆ. ಇದರಿಂದಾಗಿಯೇ ರನ್‌ ವೇ ಅರ್ಧದಷ್ಟು ಕೆಳಗಿದೆ. ಇನ್ನು ಪಿಎಮ್‌ನಿಂದ ‘ಗೋ ಅರೌಂಡ್’ ಕರೆಯ ಹೊರತಾಗಿಯೂ ವಿಮಾನ ನಿಯಂತ್ರಣವನ್ನು ತಪ್ಪಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಏರ್ ಇಂಡಿಯಾ ವಿಮಾನ ದುರಂತ : ಬ್ಲ್ಯಾಕ್ ಬಾಕ್ಸ್ ಪತ್ತೆ, ಸಾವಿನ ಸಂಖ್ಯೆ19ಕ್ಕೆ ಏರಿಕೆ

ಇದನ್ನೂ ಓದಿ : ಕೇರಳ ಏರ್ ಇಂಡಿಯಾ ವಿಮಾನ ದುರಂತ : ಬೆಸ್ಟ್ ಪೈಲಟ್ ಆಗಿದ್ದರು ಕ್ಯಾ.ದೀಪಕ್ ವಸಂತ್ ಸಾಠೆ

(Kozhikode plane crash: AAIB reports reason behind the crash )

Comments are closed.