ದೆಹಲಿ : ಕರ್ನಾಟಕ ತಂಡವನ್ನು ಸೋಲಿಸುವ ಮೂಲಕ ತಮಿಳುನಾಡು ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿಯನ್ನು (SMAT Final ) ತನ್ನದಾಗಿಸಿಕೊಂಡಿದೆ. 2006-07, 2020-21 ಸಾಲಿನಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ತಮಿಳುನಾಡು ಈ ಬಾರಿಯೂ ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವನ್ನು ಸೋಲಿಸುವ ಮೂಲಕ ಮೂರನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ಕರ್ನಾಟಕ ತಂಡಕ್ಕೆ ಮತ್ತೆ ಸೋಲಿನ ರುಚಿ ತೋರಿಸಿದೆ. ಕರ್ನಾಟಕ ತಂಡದ ಬೌಲರ್‌ಗಳು ನೀಡಿದ ಇತರೆ ಎಸೆತಗಳೇ ತಂಡಕ್ಕೆ ಮುಳುವಾಗಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ಸಾಯಿ ಕಿಶೋರ್ ಆರಂಭಿಕ ಆಘಾತವನ್ನು ನೀಡಿದ್ರು. ಭರವಸೆಯ ಆಟಗಾರ ರೋಹನ್ ಕದಂ ಶೂನ್ಯಕ್ಕೆ ಔಟಾದ್ರೆ ನಾಯಕ ಮನೀಶ್ ಪಾಂಡೆ 13 ರನ್ ಗಳಿಸುವಷ್ಟರಲ್ಲಿ ಫೆವಿಲಿಯನ್ ಹಾದಿ ಹಿಡಿದಿದ್ದರು. ನಂತರ ಬಂದ ಕರುಣ್ ನಾಯರ್ 18 ರನ್ ಹಾಗೂ ಶರತ್ ಬಿ.ಆರ್. 16 ರನ್ ನೆರವಿನಿಂದ ಕರ್ನಾಟಕ ಕೊಂಚ ಚೇತರಿಕೆಯನ್ನು ಕಂಡಿತ್ತು. ಆದರೆ ಅಭಿನವ್ ಮನೋಹರ್ ಹಾಗೂ ಪ್ರವೀಣ್ ದುಬೆ ಅಬ್ಬರದ ಬ್ಯಾಟಿಂಗ್ ಸಂಕಷ್ಟದಲ್ಲಿದ್ದ ಕರ್ನಾಟಕಕ್ಕೆ ವರದಾನವಾಗಿತ್ತು. ಅಭಿನವ್ ಮನೋಹರ್ 37 ಎಸೆತಗಳಲ್ಲಿ ೪೬ರನ್ ಸಿಡಿಸಿದಿದ್ರೆ, ಪ್ರವೀಣ್ ದುಬೆ 25 ಎಸೆತಗಳಲ್ಲಿ 33 ರನ್ ಬಾರಿಸಿದ್ದಾರೆ. ಅಂತಿಮವಾಗಿ ಜೆ. ಸುಜಿತ್ 7 ಎಸೆತಗಳಲ್ಲಿ 18 ರನ್ ಸಿಡಿಸಲು ಮೂಲಕ ಕರ್ನಾಟಕ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಬರೋಬ್ಬರಿ 151 ರನ್ ಗಳಿಸಿತ್ತು.
ಕರ್ನಾಟಕ ನೀಡಿದ್ದ ಸವಾಲು ಬೆನ್ನತ್ತಿದ ತಮಿಳುನಾಡು ತಂಡಕ್ಕೆ ಆರಂಭಿಕರಾದ ಹರಿ ನಿಶಾಂತ್ ಹಾಗೂ ಎನ್. ಜಗದೀಶನ್ ಉತ್ತಮ ಜೊತೆಯಾಟ ನೀಡಿದ್ರು. ಹರಿನಿಶಾಂತ್ 23 ರನ್ ಗಳಿಸಿ ಔಟಾಗುತ್ತಲೇ ಕ್ರಿಸ್‌ಗೆ ಬಂದ ಸಾಯಿ ಸುದರ್ಶನ್ ಆಟ ಕೇವಲ 9 ರನ್‌ಗೆ ಸೀಮಿತವಾಯ್ತು. ತಮಿಳುನಾಡು ತಂಡಕ್ಕೆ ಕಾರ್ಯಪ್ಪ ಮಾರಕವಾಗಿ ಪರಿಣಮಿಸಿದ್ರು. 18 ರನ್ ಗಳಿಸಿದ್ದ ವಿಜಯ್ ಶಂಕರ್ ಅವರನ್ನು ಕಾರ್ಯಪ್ಪ ಬಲಿ ಪಡೆದ್ರೆ, ಸಂಜಯ್ ಯಾದವ್ ಗೆ ಪ್ರತೀಕ್ ಜೈನ್ ಫೆವಿಲಿಯನ್ ಹಾದಿ ತೋರಿಸಿದ್ರು. ಇನ್ನು 41 ರನ್ ಗಳಿಸಿ ಉತ್ತಮ ಆಟವಾಡುತ್ತಿದ್ದ ಎನ್.ಜಗದೀಶನ್ ಅವರನ್ನು ಕಾರ್ಯಪ್ಪ ಬಲಿ ಪಡೆದಿದ್ದಾರೆ. ನಂತರದಲ್ಲಿ ನಂತರದಲ್ಲಿ ಶಾರೂಖ್ ಖಾನ್ ಹಾಗೂ ಸಾಯಿ ಕಿಶೋರ್ ತಮಿಳುನಾಡು ತಂಡಕ್ಕೆ ನೆರವಾಗಿದ್ದಾರೆ. ಶಾರೂಖ್ ಖಾನ್ 33 ರನ್ ಬಾರಿಸಿ ತಮಿಳುನಾಡಿಗೆ ಗೆಲುವಿನ ಆಸೆಯನ್ನು ಮೂಡಿಸಿದ್ದರು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್ ಬೇಕಾಗಿತ್ತು. ಪ್ರತೀಕ್ ಜೈನ್ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಶಾರೂಖ್ ಖಾನ್ ತಮಿಳುನಾಡಿಗೆ ಸತತವಾಗಿ ಗೆಲುವನ್ನು ತಂದುಕೊಟ್ಟಿದ್ದಾರೆ.
ಇದನ್ನೂ ಓದಿ : India vs Newzealand : ನ್ಯೂಜಿಲೆಂಡ್‌ಗೆ ಹಿನಾಯ ಸೋಲು : ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ
ಇದನ್ನೂ ಓದಿ : ಮನೀಶ್ ಪಾಂಡೆ, ಕದಂ ಆರ್ಭಟ : ಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ
( SMAT Final : Karnataka wins Syed Mushtaq Ali Trophy Against Tamil Nadu)