PUBG ಆಡುತ್ತಿದ್ದಾಗ ಹರಿದ ರೈಲು : ಇಬ್ಬರು ಬಾಲಕರು ಸಾವು

ಆಗ್ರಾ : ಇತ್ತೀಚಿನ ದಿನಗಳಲ್ಲಿ ಪಬ್‌ ಜಿ (PUBG) ಗೀಳು ಹೆಚ್ಚುತ್ತಿದೆ. ಅದ್ರಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಯುವ ಜನತೆ ಪಬ್‌ಜೀ ಆಟದ ಹುಚ್ಚು ಅಂಟಿಸಿಕೊಳ್ಳುತ್ತಿದ್ದಾರೆ. ಪಬ್‌ ಜಿ ಆಡುತ್ತಾ ಕುಳಿತಿದ್ರೆ ಸಾಕು ಅವರಿಗೆ ತಮ್ಮ ಸುತ್ತಮುತ್ತಲೂ ಏನು ನಡೆಯುತ್ತೆ ಅನ್ನೋದು ಗೊತ್ತೇ ಆಗೋದಿಲ್ಲ. ಇದೀಗ ಪಬ್‌ ಜೀ ಆಡುತ್ತಾ ರೈಲು ಹಳಿಯ ಮೇಲೆ ಕುಳಿತಿದ್ದ ಇಬ್ಬರು ಬಾಲಕರ ಮೇಲೆ ರೈಲು ಹರಿದು ಇಬ್ಬರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮಥುರಾ ಲಕ್ಷ್ಮೀ ನಗರದ ನಿವಾಸಿ ಗೌರವ್‌ ಕುಮಾರ್‌ (14 ವರ್ಷ), ಕಪಿಲ್‌ ಕುಮಾರ್‌ (14 ವರ್ಷ) ಎಂಬವರೇ ಮೃತ ದುರ್ದೈವಿಗಳು. 10ನೇ ತರಗತಿ ವಿದ್ಯಾರ್ಥಿ ಗಳಾಗಿದ್ದ ಇಬ್ಬರು ಬಾಲಕರು ಬೆಳಗ್ಗೆ ಸುಮಾರು ೫.೧೫ರ ಸುಮಾರಿಗೆ ವಾಕಿಂಗ್‌ಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟು ಬಂದಿದ್ದರು. ಇಬ್ಬರೂ ವಾಕಿಂಗ್‌ಗೆ ತೆರಳುವ ಬದಲು ನೇರವಾಗಿ ರೈಲ್ವೆ ಹಳಿಯ ಬಳಿಗೆ ಬಂದಿದ್ದಾರೆ.

ಇಬ್ಬರೂ ರೈಲ್ವೆ ಹಳಿಯ ಮೇಲೆ ಕುಳಿತುಕೊಂಡು ಪಬ್‌ ಆಡೋದಕ್ಕೆ ಶುರು ಮಾಡಿದ್ದಾರೆ. ಈ ವೇಳೆಯಲ್ಲಿ ರೈಲು ಹರಿದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬಾಲಕರ ಸಾವಿನ ಬೆನ್ನಲ್ಲೇ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ. ಈ ಕುರಿತು ರೈಲ್ವೆ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಬ್‌ಜಿ ಗೀಳಿಗೆ ಒಳಗಾಗಿ ಯುವ ಜನತೆ ತಮ್ಮ ಜೀವವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : PUBG : ಪಬ್‌ ಜೀ ಆಡಲು ತಾಯಿಯ ಬ್ಯಾಂಕ್‌ ಖಾತೆಯಿಂದ 10 ಲಕ್ಷ ವ್ಯಯಿಸಿದ ಬಾಲಕ !

ಇದನ್ನೂ ಓದಿ : School girl : ಸಿನಿಮಾದಲ್ಲಿ ನಟಿಸುವ ಆಮಿಷ : ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ಬಂಧನ

(Train runs over two young boys while playing PUBG game in Railway track)

Comments are closed.