ಮಂಗಳವಾರ, ಏಪ್ರಿಲ್ 29, 2025
HomeSportsCricketSuryakumar 1000 runs : 550 ಎಸೆತಗಳಲ್ಲಿ 1026 ರನ್, T20Iನಲ್ಲಿ ಒಂದೇ ವರ್ಷ ಸಾವಿರ...

Suryakumar 1000 runs : 550 ಎಸೆತಗಳಲ್ಲಿ 1026 ರನ್, T20Iನಲ್ಲಿ ಒಂದೇ ವರ್ಷ ಸಾವಿರ ರನ್ ಸರದಾರನಾದ ಸೂರ್ಯ

- Advertisement -

ಮೆಲ್ಬೋರ್ನ್: Suryakumar 1000 runs : ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ (Suryakumar Yadav) ಈ ವರ್ಷ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸಾವಿರ ರನ್ ಕಲೆ ಹಾಕಿದ್ದಾರೆ. ಟಿ20 ವಿಶ್ವಕಪ್ (T20 World Cup 2022) ಟೂರ್ನಿಯ ಜಿಂಬಾಬ್ವೆ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 35 ರನ್ ಗಳಿಸಿದ್ದಾಗ 2022ರಲ್ಲಿ ಸಾವಿರ ಟಿ20 ರನ್’ಗಳ ಗಡಿ ತಲುಪಿದರು.

T20I: 2022ರಲ್ಲಿ ಅತೀ ಹೆಚ್ಚು ರನ್ (ಟಾಪ್-5) (Most T20I runs in 2022)
1026: ಸೂರ್ಯಕುಮಾರ್ ಯಾದವ್ (ಭಾರತ); 28 ಇನ್ನಿಂಗ್ಸ್
924: ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ); 23 ಇನ್ನಿಂಗ್ಸ್
735: ಸಿಕಂದರ್ ರಾಜಾ (ಜಿಂಬಾಬ್ವೆ); 23 ಇನ್ನಿಂಗ್ಸ್
731: ವಿರಾಟ್ ಕೊಹ್ಲಿ (ಭಾರತ); 19 ಇನ್ನಿಂಗ್ಸ್
713: ಪತುನ್ ನಿಸ್ಸಾಂಕ (ಶ್ರೀಲಂಕಾ); 24 ಇನ್ನಿಂಗ್ಸ್

2022ರಲ್ಲಿ ಒಟ್ಟು 28 ಟಿ20 ಇನ್ನಿಂಗ್ಸ್’ಗಳನ್ನಾಡಿರುವ ಸೂರ್ಯಕುಮಾರ್ ಯಾದವ್ ಎದುರಿಸಿದ ಒಟ್ಟು 550 ಎಸೆತಗಳಲ್ಲಿ 1026 ರನ್ ಕಲೆ ಹಾಕಿದ್ದಾರೆ.

T20I: 2022ರಲ್ಲಿ ಸೂರ್ಯಕುಮಾರ್ ಯಾದವ್

ಇನ್ನಿಂಗ್ಸ್: 28, ರನ್: 1026, ಸರಾಸರಿ: 44.60, ಸ್ಟ್ರೈಕ್’ರೇಟ್: 186.54, ಅರ್ಧಶತಕ: 09, ಶತಕ: 01

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಆಟ ಪ್ರದರ್ಶಿಸುತ್ತಿರುವ ಸೂರ್ಯಕುಮಾರ್ ಯಾದವ್ ಆಡಿರುವ 5 ಪಂದ್ಯಗಳಲ್ಲಿ ಮೂರು ಅರ್ಧಶತಕಗಳ ಸಹಿತ 225 ರನ್ ಕಲೆ ಹಾಕಿದ್ದಾರೆ.

ಟಿ20 ವಿಶ್ವಕಪ್ 2022: ಸೂರ್ಯಕುಮಾರ್ ಯಾದವ್ ಗಳಿಸಿರುವ ರನ್
15 (10) Vs ಪಾಕಿಸ್ತಾನ
51* (25) Vs ನೆದರ್ಲೆಂಡ್ಸ್
68 (40) Vs ದಕ್ಷಿಣ ಆಫ್ರಿಕಾ
30 (16) Vs ಬಾಂಗ್ಲಾದೇಶ
61* (25) Vs ಜಿಂಬಾಬ್ವೆ

2021ರ ಮಾರ್ಚ್ 14ರಂದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಸೂರ್ಯಕುಮಾರ್ ಯಾದವ್ ಕೇವಲ ಒಂದೂವರೆ ವರ್ಷದಲ್ಲಿ ಜಗತ್ತಿನ ನಂ.1 ಟಿ20 ಬ್ಯಾಟ್ಸ್’ಮನ್ ಎನಿಸಿಕೊಂಡಿದ್ದಾರೆ. ಐಸಿಸಿ ಟಿ20 ಬ್ಯಾಟಿಂಗ್ rankingನಲ್ಲಿ 863 ರೇಟಿಂಗ್ ಪಾಯಿಂಟ್’ಗಳೊಂದಿಗೆ ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊಹಮ್ಮದ್ ರಿಜ್ವಾನ್ 842 ರೇಟಿಂಗ್ ಪಾಯಿಂಟ್’ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್’ನ ಡೆವೋನ್ ಕಾನ್ವೇ (792), ಪಾಕಿಸ್ತಾನದ ಬಾಬರ್ ಅಜಮ್ (780) ಮತ್ತು ದಕ್ಷಿಣ ಆಫ್ರಿಕಾದ ಏಡನ್ ಮಾರ್ಕ್ರಮ್ (767) ನಂತರದ ಸ್ಥಾನಗಳಲ್ಲಿದ್ದಾರೆ. 638 ರೇಟಿಂಗ್ ಪಾಯಿಂಟ್ ಕಲೆ ಹಾಕಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟಿ20 ಬ್ಯಾಟಿಂಗ್ rankingನಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಇದುವರೆಗೆ ಭಾರತ ಪರ 38 ಟಿ20 ಪಂದ್ಯಗಳನ್ನಾಡಿರುವ 32 ವರ್ಷದ ಸೂರ್ಯಕುಮಾರ್ ಯಾದವ್ ಒಂದು ಶತಕ, ಹಾಗೂ 12 ಅರ್ಧಶತಕಗಳ ಸಹಿತ 1,270 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : South Africa knocked out : ನೆದರ್ಲೆಂಡ್ಸ್ ವಿರುದ್ಥ ಸೋಲು, ಟಿ20 ವಿಶ್ವಕಪ್’ನಿಂದ ಚೋಕರ್ಸ್ ದಕ್ಷಿಣ ಆಫ್ರಿಕಾ ಔಟ್

ಇದನ್ನೂ ಓದಿ : Pak Vs Kiwis : ಸೆಮೀಸ್‌ನಲ್ಲಿ ಭಾರತಕ್ಕೆ ಇಂಗ್ಲೆಂಡ್ ಎದುರಾಳಿ, ಪಾಕ್ Vs ಕೀವಿಸ್ ಮಧ್ಯೆ ಮತ್ತೊಂದು ಸೆಮಿಫೈನಲ್

1026 runs off 550 balls, Suryakumar became the leader of 1000 runs in T20i in one year

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular