ಗುಜರಾತ್ : ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಹೊಸದಾಗಿ ಸೇರ್ಪಡೆಯಾಗಿರುವ ಅಹಮದಾಬಾದ್ ಪ್ರಾಂಚೈಸಿ ಹೊಸ ನಾಯಕನ ಹುಡುಕಾಟದಲ್ಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ. ಇದರ ಬೆನ್ನಲ್ಲೇ ಅಹಮದಾಬಾದ್ ತಂಡ ಆಟಗಾರರ ಆಯ್ಕೆಗೆ ಮುಂದಾಗಿದೆ. ಅಲ್ಲದೇ ಐಪಿಎಲ್ 2022 ಗೆ ಮಾಜಿ ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya as captain) ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ.
ಅಹಮದಾಬಾದ್ ಅಂತಿಮವಾಗಿ ಐಪಿಎಲ್ 2022 ಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಸಿವಿಸಿ ಗ್ರೂಪ್ 5625 ಕೋಟಿ ಬಿಡ್ ಮಾಡಿ ತಂಡವನ್ನು ಖರೀದಿ ಮಾಡಿತ್ತು. ಅಹಮದಾಬಾದ್ ತಂಡ ಜನವರಿ ಅಂತ್ಯದ ಒಳಗಾಗಿ ಮೂವರು ಅಥವಾ ನಾಲ್ವರು ಆಟಗಾರರನ್ನು ಖರೀದಿ ಮಾಡಲು ಬಿಸಿಸಿಐ ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಸಮರ್ಥ ನಾಯಕನ ಆಯ್ಕೆಗೆ ಹೊಸ ಪ್ರಾಂಚೈಸಿ ಮುಂದಾಗಿದೆ. ಈ ಹಿಂದೆ ಶ್ರೇಯಸ್ ಅಯ್ಯರ್ ಅಹಮದಾಬಾದ್ ನಾಯಕನಾಗ್ತಾರೆ ಅನ್ನೋ ಮಾತು ಕೇಳಿಬಂದಿತ್ತು. ಆದ್ರೀಗ ಮುಂಬರುವ 2022 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಅಹಮದಾಬಾದ್ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ಐಪಿಎಲ್ ಆರಂಭದಿಂದಲೂ ಮುಂಬೈ ತಂಡದಲ್ಲಿ ಕಾಣಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಖ್ಯಾತ ಆಲ್‌ರೌಂಡರ್ ಆಟಗಾರ. ಆದ್ರೆ ಫಿಟ್ನೆಸ್ ಸಮಸ್ಯೆಯಿಂದಾಗಿ ಪಾಂಡ್ಯ ಅವರನ್ನು ಮುಂಬೈ ತಂಡ ಈ ಬಾರಿ ಕೈ ಬಿಟ್ಟಿತ್ತು. ಅಷ್ಟೇ ಅಲ್ಲಾ ಟೀಂ ಇಂಡಿಯಾದಲ್ಲಿನ ಖಾಯಂ ಸ್ಥಾನವೂ ಕೈತಪ್ಪಿತ್ತು. ಇದೀಗ ಮತ್ತೆ ತನ್ನ ಮೊದಲಿನ ಫಾರ್ಮ್‌ಗೆ ಮರಳಲು ಪಾಂಡ್ಯ ಹರಸಾಹಸ ಪಡುತ್ತಿದ್ದಾರೆ.
ಮುಂಬೈ ಇಂಡಿಯನ್ಸ್‌ನ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಹಾರ್ದಿಕ್ ಪಾಂಡ್ಯ ಐಪಿಎಲ್ 2021 ರಲ್ಲಿ ಬೌಲಿಂಗ್ ಮಾಡಲಿಲ್ಲ. ಹಾರ್ದಿಕ್ ಪಾಂಡ್ಯ ಅವರನ್ನು 2018 ರಲ್ಲಿ ಮುಂಬೈ ಇಂಡಿಯನ್ಸ್ 11 ಕೋಟಿ (110 ಮಿಲಿಯನ್) ಮೊತ್ತಕ್ಕೆ ಉಳಿಸಿಕೊಂಡಿತ್ತು. ಈ ಬಾರಿಯ ಹರಾಜಿನಲ್ಲಿ ಪಾಂಡ್ಯ ಅತ್ಯಧಿಕ ಮೊತ್ತಕ್ಕೆ ಹರಾಜಾಗುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಹರಾಜಿಗೂ ಮೊದಲೇ ಲಕ್ನೋ ಅಥವಾ ಅಹಮದಾಬಾದ್ ತಂಡ ಅತ್ಯಧಿಕ ಮೊತ್ತಕ್ಕೆ ಖರೀದಿ ಮಾಡಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇನ್ನು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮತ್ತು ಕೋಚ್ ವಿಕ್ರಮ್ ಸೋಲಂಕಿ ಅವರು ಕ್ರಿಕೆಟ್ ನಿರ್ದೇಶಕರಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರು ಇಂಗ್ಲೆಂಡ್ ಪರ 50 ODI ಮತ್ತು ಮೂರು T20I ಗಳನ್ನು ಆಡಿದ್ದಾರೆ. ಭಾರತವನ್ನು ಎಡಗೈ ವೇಗಿಯಾಗಿ ಪ್ರತಿನಿಧಿಸಿರುವ ಮತ್ತು ಬೌಲಿಂಗ್ ಕೋಚ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯ ಭಾಗವಾಗಿರುವ ಆಶಿಶ್ ನೆಹ್ರಾ ಅವರು ಹೊಸ ತಂಡದ ಮುಖ್ಯ ಕೋಚ್ ಆಗುವ ಸಾಧ್ಯತೆಯಿದೆ.
ಹಾರ್ದಿಕ್ ಈ ಹಿಂದೆ ಐಪಿಎಲ್ ತಂಡವನ್ನು ಮುನ್ನಡೆಸಿರಲಿಲ್ಲ. ಆದಾಗ್ಯೂ, ಆಲ್‌ರೌಂಡರ್ ಅವರು ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್‌ನ ಯಶಸ್ಸಿನ ಅವಿಭಾಜ್ಯ ಸದಸ್ಯರಾಗಿ ದ್ದರು. ಹಾರ್ದಿಕ್ ಒಟ್ಟು 92 ಪಂದ್ಯಗಳನ್ನು ಆಡಿದ್ದು, 153.91 ಸ್ಟ್ರೈಕ್ ರೇಟ್‌ನಲ್ಲಿ 1476 ರನ್ ಬಾರಿಸಿದ್ದಾರೆ. ಅವರು 42 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ : ಮತ್ತೆ ಆರ್‌ಸಿಬಿ ಸೇರ್ತಾರೆ ಎಬಿ ಡಿವಿಲಿಯರ್ಸ್
ಇದನ್ನೂ ಓದಿ : ಕೊನೆಯ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ವಿರಾಟ್ ಕೊಹ್ಲಿ
(Ahmedabad finally choose Hardik Pandya as captain for IPL 2022)