Send Secret Email in Android: ಸಿಕ್ರೇಟ್ ಇ ಮೇಲ್ ಕಳಿಸುವುದು ಹೇಗೆ?

ನೀವು ಜಿ ಮೇಲ್ (Gmail) ಬಳಕೆದಾರರೇ? ನೀವು Gmail ಖಾತೆಯನ್ನು ಹೊಂದಿದ್ದರೆ ಮತ್ತು ನೀವು ಅದನ್ನು ಮೇಲ್‌ಗಳನ್ನು ಕಳುಹಿಸಲು ನಿಯಮಿತವಾಗಿ ಬಳಸುತ್ತಿದ್ದರೆ ನೀವು ಸೀಕ್ರೆಟ್ ಅಥವಾ ಕಾನ್ಫಿಡೆನ್ಷಿಯಲ್ ಮೇಲ್‌ಗಳನ್ನು ಇನ್ನು ಮುಂದೆ ಸೆಂಡ್ ಹಾಗೂ ರಿಸೀವ್ ಮಾಡಬಹುದು. ಹೌದು, ಸೂಕ್ಷ್ಮ ಮಾಹಿತಿಯನ್ನು ರಕ್ಷಿಸಲು ,ಇ-ಮೇಲ್ ಹೊಸ ಫೀಚರ್ ಸೀಕ್ರೆಟ್ ಮೋಡ್ಅನ್ನು (Email in Secret Mode) ಬಳಸಬಹುದು. ನೀವು ಐಫೋನ್, ಆಂಡ್ರಾಯ್ಡ್, ಐಪ್ಯಾಡ್ (iPhone, Android or iPod) ಅಥವಾ ಕಂಪ್ಯೂಟರ್ ಮೂಲಕ ರಹಸ್ಯವಾಗಿ ಮೆಸೇಜ್ (How to send Send Secret Email) ಕಳುಹಿಸಬಹುದು. ಸಂದೇಶಗಳಿಗೆ ಎಕ್ಸ್ಪರಿ ದಿನಾಂಕವನ್ನು ಸೇರಿಸಲು ಅಥವಾ ಯಾವುದೇ ಸಮಯದಲ್ಲಿ ಹಿಂತೆಗೆದುಕೊಳ್ಳಲು ನೀವು ಸೀಕ್ರೆಟ್ ಮೋಡ್ ಅನ್ನು ಬಳಸಬಹುದು.

ವಿಶೇಷವಾಗಿ, ಸೀಕ್ರೆಟ್ ಸಂದೇಶವನ್ನು ಸ್ವೀಕರಿಸುವವರು ಸಂಪೂರ್ಣ ರಹಸ್ಯವನ್ನು ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಫಾರ್ವರ್ಡ್ ಮಾಡಲು, ಕಾಪಿ ಮಾಡುವುದು, ಪ್ರಿಂಟ್ ಮತ್ತು ಡೌನ್‌ಲೋಡ್ ಮಾಡಲು ತಮ್ಮ ಆಯ್ಕೆಗಳನ್ನು ಹೊಂದಿರುತ್ತಾರೆ. ಸೀಕ್ರೆಟ್ ಮೋಡ್ ಸ್ವೀಕರಿಸುವವರು ಆಕಸ್ಮಿಕವಾಗಿ ನಿಮ್ಮ ಇಮೇಲ್ ಅನ್ನು ಹಂಚಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ತಮ್ಮ ಕಂಪ್ಯೂಟರ್‌ನಲ್ಲಿ ಮಾಲ್ವೇರ್ ಹೊಂದಿರುವ ರಿಸಿವರ್ ಇನ್ನೂ ನಿಮ್ಮ ಸಂದೇಶಗಳು ಅಥವಾ ಇಮೈಲ್ ಕಾಪಿ ಅಥವಾ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಹೇಗೆ ಎಂಬುದು ಇಲ್ಲಿದೆ:

ಕಂಪ್ಯೂಟರ್ ಮೂಲಕ ಸೀಕ್ರೆಟ್ ಇಮೇಲ್ ಹೇಗೆ ಸೆಂಡ್ ಹಾಗೂ ರಿಸೀವ್ ಮಾಡುವುದು. ನೀವು ವರ್ಕ್ ಅಥವಾ ಶಾಲೆಯ ಖಾತೆಯೊಂದಿಗೆ ಜಿ ಮೈಲ್ ಅನ್ನು ಬಳಸುತ್ತಿದ್ದರೆ, ನೀವು ಸೀಕ್ರೆಟ್ ಮೋಡ್ ಅನ್ನು ಬಳಸಬಹುದೆಂದು ಖಚಿತಪಡಿಸಿಕೊಳ್ಳಲು ನಿಮ್ಮ ಅಡ್ಮಿನ್ ನೀವು ಸಂಪರ್ಕಿಸಬೇಕು.

  1. ನಿಮ್ಮ ಕಂಪ್ಯೂಟರ್‌ನಲ್ಲಿ, ಜಿ ಮೈಲ್ ಗೆ ಹೋಗಿ ಮತ್ತು ಕ್ರಿಯೇಟ್ ಕ್ಲಿಕ್ ಮಾಡಿ.
  2. ವಿಂಡೋದ ಕೆಳಗಿನ ಬಲಭಾಗದಲ್ಲಿ, ಸೀಕ್ರೆಟ್ ಮೋಡ್ ಅನ್ನು ಆನ್ ಮಾಡಿ ಕ್ಲಿಕ್ ಮಾಡಿ.
  3. ಏಕ್ಸ್ಪೈರಿ ದಿನಾಂಕ ಮತ್ತು ಪಾಸ್ಕೋಡ್ ಅನ್ನು ಹೊಂದಿಸಿ. ಈ ಸೆಟ್ಟಿಂಗ್‌ಗಳು ಮೆಸೇಜ್ ರೀಡಿಂಗ್ ಮತ್ತು ಯಾವುದೇ ಇತರ ಅಟ್ಯಾಚ್ಮೆಂಟ್ ಮೇಲೆ ಪರಿಣಾಮ ಬೀರುತ್ತವೆ. ನೀವು “ಎಸ್ ಎಂ ಎಸ್ ಪಾಸ್‌ಕೋಡ್ ಇಲ್ಲ” ಎಂದು ಆರಿಸಿದರೆ, ಜಿ ಮೈಲ್ ಅಪ್ಲಿಕೇಶನ್ ಬಳಸುವ ರಿಸಿವರ್ ಅದನ್ನು ನೇರವಾಗಿ ತೆರೆಯಲು ಸಾಧ್ಯವಾಗುತ್ತದೆ. ಹಾಗೇ ಜಿ ಮೈಲ್ ಬಳಸದ ರಿಸಿವರ್ ಇಮೇಲ್ ಪಾಸ್‌ಕೋಡ್ ಅನ್ನು ಪಡೆಯುತ್ತಾರೆ.
  4. ಸೇವ್ ಬಟನ್ ಕ್ಲಿಕ್ ಮಾಡಿ.
    ಐಫೋನ್, ಆಂಡ್ರಾಯ್ಡ್ ಫೋನ್, ಟ್ಯಾಬ್ಲೆಟ್, ಐ ಪಾಡ್ ನಲ್ಲಿ ಸೀಕ್ರೆಟ್ ಇಮೇಲ್ ಕಳುಹಿಸುವುದು ಹೇಗೆ:
  5. ಜಿಮೈಲ್ ಅಪ್ಲಿಕೇಶನ್ ತೆರೆಯಿರಿ.
  6. ಕಂಪೋಸ್ ಟ್ಯಾಪ್ ಮಾಡಿ.
  7. ಮೇಲಿನ ಬಲಭಾಗದಲ್ಲಿ, ಇನ್ನಷ್ಟು ಟ್ಯಾಪ್ ಮಾಡಿ ಮತ್ತು ನಂತರ ಸೀಕ್ರೆಟ್ ಮೋಡ್.
  8. ಸಿಕ್ರೆಟ್ ಮೋಡ್ ಅನ್ನು ಆನ್ ಮಾಡಿ.
  9. ಏಕ್ಸ್ಪೈರಿ ದಿನಾಂಕ, ಪಾಸ್ಕೋಡ್ ಮತ್ತು ಇತರ ನಿಯಂತ್ರಣಗಳನ್ನು ಹೊಂದಿಸಿ.
  10. ಡನ್ ಆಪ್ಶನ್ ಕ್ಲಿಕ್ ಮಾಡಿ.

    ಸೀಕ್ರೆಟ್ ಮೋಡ್‌ನೊಂದಿಗೆ ಕಳುಹಿಸಿದ ಇಮೇಲ್ ಅನ್ನು ಹೇಗೆ ತೆರೆಯುವುದು:
    ಹಂತ 1: ಏಕ್ಸ್ಪೈರಿ ದಿನಾಂಕದವರೆಗೆ ಅಥವಾ ಕಳುಹಿಸುವವರು ಎಂಟ್ರಿ ತೆಗೆದುಹಾಕುವವರೆಗೆ ನೀವು ಮೆಸೇಜ್ ಓಪನ್ ಮಾಡಬಹುದು.
    ಹಂತ 2: ಇಮೇಲ್ ತೆರೆಯಲು ನೀವು ಪಾಸ್‌ವರ್ಡ್‌ನ್ನು ಅನ್ನು ನಮೂದಿಸಬೇಕಾಗಬಹುದು

ಇದನ್ನೂ ಓದಿ: Relief From Joint Pain: ಚಳಿಗಾಲದಲ್ಲಿ ಗಂಟುನೋವೇ? ಇಲ್ಲಿದೆ ಪರಿಹಾರೋಪಾಯ

ಇದನ್ನೂ ಓದಿ: What is Ambergris smuggling: ಏನಿದು ಅಂಬರ್‌ಗ್ರೀಸ್ ಎಂಬ ತಿಮಿಂಗಿಲ ವಾಂತಿ? ಇದನ್ನು ಕಳ್ಳಸಾಗಣೆ ಮಾಡುವುದೇಕೆ?

(How to send Send Secret Email or Gmail in Android iPhone or iPod)

Comments are closed.