ಕೊಲಂಬೊ : ಏಷ್ಯಾಕಪ್ (Asia Cup 2023 ) ಪಂದ್ಯಾವಳಿಯಲ್ಲಿ ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿದೆ. ಈಗಾಗಾಲೇ ಗ್ರೂಪ್ ಮಾದರಿಯ ಪಂದ್ಯಗಳು ಮುಕ್ತಾಯಗೊಂಡಿದ್ದು, ಸೂಪರ್ 4 (Asia Cup Super 4) ಹಂತದ ಪಂದ್ಯಗಳಿಗೆ ತಂಡಗಳು ಸಜ್ಜಾಗಿವೆ. ಇದೀಗ ಸೆಪ್ಟೆಂಬರ್ 10 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿದೆ. ಆದರೆ ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ.
ಶ್ರೀಲಂಕಾದ ಕೊಲಂಬೋದಲ್ಲಿರುವ ಎಂ ಪ್ರೇಮದಾಸ ಮೈದಾನದಲ್ಲಿ (R. Premadasa International Cricket Stadium)ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ನೇಪಾಳ ತಂಡದ ವಿರುದ್ದ ಭರ್ಜರಿ ಗೆಲುವು ದಾಖಲಿಸಿದ್ದ ಪಾಕಿಸ್ತಾನ ತಂಡಕ್ಕೆ ಭಾರತ ವಿರುದ್ದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇನ್ನು ಭಾರತ ಕೂಡ ನೇಪಾಳ ತಂಡದ ವಿರುದ್ದ ಮಳೆಯ ನಡುವಲ್ಲೇ ಭರ್ಜರಿ ಗೆಲುವು ದಾಖಲಿಸಿತ್ತು.
ಸೂಪರ್ 4 ಹಂತದ ಪಂದ್ಯಗಳಿಗೆ ಮತ್ತೆ ಮಳೆಯ ಭೀತಿ ಎದುರಾಗಿದೆ. ಶ್ರೀಲಂಕಾದ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯಲಿರುವ ಕೊಲಂಬೋದಲ್ಲಿ ಸೆಪ್ಟೆಂಬರ್ 10 ರಂದು ಮಳೆ ಸುರಿಯುವ ಸಾಧ್ಯತೆ ಶೇ.90 ರಷ್ಟಿದೆ. ಹೀಗಾಗಿ ಹೈವೋಲ್ಟೇಜ್ ಪಂದ್ಯ ರದ್ದಾಗುತ್ತಾ ಅನ್ನೋ ಭೀತಿ ಎದುರಾಗಿದೆ.

ಇದನ್ನೂ ಓದಿ : ಏಕದಿನ ವಿಶ್ವಕಪ್‌ಗೆ ಭಾರತ ತಂಡ ಪ್ರಕಟ : ಕೆಎಲ್ ರಾಹುಲ್ ಎಂಟ್ರಿ, ಖ್ಯಾತ ಆಟಗಾರರು ಔಟ್
ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಎಷ್ಟೇ ಮಳೆ ಬಂದರೂ ಕೂಡ ಬಹುಬೇಗನೇ ಮೈದಾನವನ್ನು ಪಂದ್ಯಕ್ಕೆ ಸಜ್ಜುಗೊಳಿಸಬಹುದಾಗಿದೆ. ಒಂದೊಮ್ಮೆ ಪಂದ್ಯ ಉದ್ದಕ್ಕೂ ಮಳೆರಾಯ ಬಿಡುವು ಪಡೆಯದೇ ಇದ್ದಲ್ಲಿ ಮಾತ್ರ ಬದ್ದವೈರಿಗಳ ಕಾದಾಟ ಸಂಪೂರ್ಣವಾಗಿ ರದ್ದಾಗಲಿದೆ. ಈ ಹಿನ್ನೆಲೆಯಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿನ್ ಪರ್ಯಾಯ ಮಾರ್ಗಗಳನ್ನು ಯೋಚಿಸುತ್ತಿದೆ.
ಏಷ್ಯಾ ಕಪ್‌ನ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆರಂಭಿಕರಾದ ರೋಹಿತ್ ಶರ್ಮಾ, ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಪಾಕಿಸ್ತಾನ ಶಾಹೀನ್ ಆಫ್ರಿದಿ ಹಾಗೂ ಹ್ಯಾರಿಸ್ ರೌಫ್ ದಾಳಿಗೆ ತತ್ತರಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಆದರೆ ಇಶಾನ್ ಕಿಶನ್ (Ishan Kishan)(82ರನ್ ) ಮತ್ತು ಹಾರ್ದಿಕ್ ಪಾಂಡ್ಯ (Hardik Pandya) (87ರನ್ ) ನೆರವಿನಿಂದ ಭಾರತವನ್ನು 266 ರನ್ ಗಳಿಸಿತ್ತು.
ಆದರೆ ಪಾಕಿಸ್ತಾನ ತಂಡ ಬ್ಯಾಟಿಂಗ್ ಆರಂಭಿಸುವ ಮೊದಲೇ ಭಾರೀ ಮಳೆ ಸುರಿದಿದೆ. ಮೈದಾನ ಸಂಪೂರ್ಣವಾಗಿ ಒದ್ದೆಯಾಗಿದ್ದ ಹಿನ್ನೆಲೆಯಲ್ಲಿ ಪಂದ್ಯವನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗಿದೆ. ಇದೀಗ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೊಂದು ಬಾರಿ ಮುಖಾಮುಖಿಯಾಗಲಿವೆ.

ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ಪ್ರಸಿದ್ ಕೃಷ್ಣ , ತಿಲಕ್ ವರ್ಮಾ, ಮೊಹಮ್ಮದ್ ಶಮಿ
ಪಾಕಿಸ್ತಾನ ತಂಡ:
ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಫಹೀಮ್ ಅಶ್ರಫ್, ಮೊಹಮ್ಮದ್ ಹ್ಯಾರಿಸ್ , ಮೊಹಮ್ಮದ್ ವಾಸಿಂ ಜೂನಿಯರ್, ಅಬ್ದುಲ್ಲಾ ಶಫೀಕ್, ಸೌದ್ ಶಕೀಲ್, ಉಸಾಮಾ ಮಿರ್
ಇದನ್ನೂ ಓದಿ : ICC World Cup 2023: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ, ಭಾರತಕ್ಕೆ ಯಾರು ಎದುರಾಳಿಗಳು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಏಷ್ಯಾಕಪ್ ಸೂಪರ್ 4 (Asia Cup 2023 Super-4) ವೇಳಾಪಟ್ಟಿ:
ಸೆಪ್ಟೆಂಬರ್ 6: ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ,
ಗಡಾಫಿ ಕ್ರೀಡಾಂಗಣ, ಲಾಹೋರ್, ಮಧ್ಯಾಹ್ನ 2:30 ಸ್ಥಳೀಯ
ಸೆಪ್ಟೆಂಬರ್ 9: ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ, ಆರ್ ಪ್ರೇಮದಾಸ ಸ್ಟೇಡಿಯಂ, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ ಸ್ಥಳೀಯ
ಸೆಪ್ಟೆಂಬರ್ 10 : ಪಾಕಿಸ್ತಾನ ವಿರುದ್ಧ ಭಾರತ,
ಆರ್ ಪ್ರೇಮದಾಸ ಸ್ಟೇಡಿಯಂ, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ ಸ್ಥಳೀಯ
ಸೆಪ್ಟೆಂಬರ್ 12: ಭಾರತ vs ಶ್ರೀಲಂಕಾ, ಆರ್ ಪ್ರೇಮದಾಸ ಸ್ಟೇಡಿಯಂ, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ ಸ್ಥಳೀಯ
ಸೆಪ್ಟೆಂಬರ್ 14: ಪಾಕಿಸ್ತಾನ ವಿರುದ್ಧ ಶ್ರೀಲಂಕಾ,
ಆರ್ ಪ್ರೇಮದಾಸ ಸ್ಟೇಡಿಯಂ, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ ಸ್ಥಳೀಯ
ಸೆಪ್ಟೆಂಬರ್ 15: ಭಾರತ vs ಬಾಂಗ್ಲಾದೇಶ, ಆರ್ ಪ್ರೇಮದಾಸ ಸ್ಟೇಡಿಯಂ, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ ಸ್ಥಳೀಯ
ಏಷ್ಯಾಕಪ್ ಫೈನಲ್ ಪಂದ್ಯ :
ಸೆಪ್ಟೆಂಬರ್ 17: ಟಿಬಿಸಿ ವಿರುದ್ಧ ಟಿಬಿಸಿ, ಆರ್ ಪ್ರೇಮದಾಸ ಸ್ಟೇಡಿಯಂ, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ ಸ್ಥಳೀಯ
ಏಷ್ಯಾಕಪ್‌ನಲ್ಲಿ ಭಾಗಿಯಾಗಿರುವ ಆಟಗಾರರು :
ಭಾರತ ತಂಡ :
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ವಿಕೆಟ್ ಕೀಪರ್ ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾಜ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).
ಪಾಕಿಸ್ತಾನ ತಂಡ :
ಬಾಬರ್ ಆಜಮ್ (ನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಫಹೀಮ್ ಅಶ್ರಫ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸ್ ಜೂನಿಯರ್, ನಸೀಮ್ ಶಾ, ಶಾಹೀನ್ ಅಫ್ರಿದಿ, ಸೌದ್ ಶಕೀಲ್, ತಯ್ಯಬ್ ತಾಹಿರ್ ( ಮೀಸಲು ಆಟಗಾರ).
ನೇಪಾಳ ತಂಡ :
ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಭುರ್ಟೆಲ್, ಆಸಿಫ್ ಶೇಖ್, ಭೀಮ್ ಶರ್ಕಿ, ಕುಶಾಲ್ ಮಲ್ಲಾ, ಆರಿಫ್ ಶೇಖ್, ದೀಪೇಂದ್ರ ಸಿಂಗ್ ಐರಿ, ಗುಲ್ಶನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಾಮಿಚಾನೆ, ಲಲಿತ್ ರಾಜ್‌ಬನ್ಶಿ, ಪ್ರತಿಶ್ ಜಿಸಿ, ಮೌಸಮ್ ಜೋ ಧಾಕಲ್, , ಕಿಶೋರ್ ಮಹತೋ, ಅರ್ಜುನ್ ಸೌದ್
ಬಾಂಗ್ಲಾದೇಶ ತಂಡ :
ಶಕೀಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್ ಬಿಜೋಯ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯೊಯ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್ ಧ್ರುಬೋ, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರಹಮಾನ್, ಶಾಕ್ ಶೊರಿಫುಲ್ ಇಸ್ಲಾಂ, ಶಾಕ್ ಮಹ್ಮದ್ ಇಸ್ಲಾಂ, ನಾಸ್ ನಯಿಮ್ ಶೇಖ್, ಶಮೀಮ್ ಹೊಸೈನ್, ತಂಝಿದ್ ಹಸನ್ ತಮೀಮ್, ತಂಝಿಮ್ ಹಸನ್ ಸಾಕಿಬ್
ಅಫ್ಘಾನಿಸ್ತಾನ ತಂಡ :
ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರಹಮತ್ ಷಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ರಶೀದ್ ಖಾನ್, ಗುಲ್ಬದಿನ್ ನೈಬ್, ಕರೀಂ ಜನತ್, ಅಬ್ದುಲ್ ರಹಮಾನ್, ಶರಫುದ್ದೀನ್ ಅಶ್ರಫ್, ಶರಫುದ್ದೀನ್ ಅಶ್ರಫ್ , ಸುಲಿಮಾನ್ ಸಫಿ, ಫಝಲ್ಹಕ್ ಫಾರೂಕಿ.
ಶ್ರೀಲಂಕಾ ತಂಡ :
ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾನಕ, ದಿಮುತ್ ಕರುಣಾರತ್ನೆ, ಕುಸಲ್ ಜನಿತ್ ಪೆರೆರಾ, ಕುಸಲ್ ಮೆಂಡಿಸ್ (ವಿಸಿ), ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ, ಮಹೇಶ್ ತೀಕ್ಷಣ, ದುನಿತ್ ವೆಲ್ಲಲಾಗೆ, ಮತೀಶ ಪತಿರಣ, ದುಶಾನ್ ಹೇಮ ರಜಿತ, ಕಸುನ್ ಹೇಮ ರಜಿತ, ಬಿನೂರ ಫೆರ್ನಾಂಡೋ, ಪ್ರಮೋದ್ ಮದುಶನ್.