ಬೆಂಗಳೂರು: ವಿರಾಟ್ ಕೊಹ್ಲಿಯವರನ್ನು (Virat Kohli) ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ ಬಿಸಿಸಿಐ ಹುಟ್ಟುಹಾಕಿರುವ ವಿವಾದ ಸದ್ಯಕ್ಕೆ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರರು ಹಾಗೂ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿದ್ದವರು ದಿನಕ್ಕೊಬ್ಬರಂತೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹವ್ಯಾಸ ಮುಂದುವರೆದಿದ್ದು ಇತ್ತೀಚಿನ ಸರದಿ ಭಾರತದ ಮಾಜಿ ವೇಗದ ಬೌಲರ್ ದೆಹಲಿಯ ಅತುಲ್ ವಾಸನ್‌ರದ್ದಾಗಿದೆ (Atul Wassan).
ಕ್ರಿಕೆಟ್ ಮಂಡಳಿಗೆ (BCCI) ವಿರಾಟ್ ಕೊಹ್ಲಿಯವರ ಇತ್ತೀಚಿನ ಪ್ರದರ್ಶನಗಳು ತೃಪ್ತಿ ತರದೇ ತಂಡವೂ ಪ್ರಮುಖ ಪಂದ್ಯಾವಳಿಗಳಲ್ಲಿ ಸೋಲನ್ನು ಕಂಡಿದ್ದು ಮಂಡಳಿ ಇಂತಹ ಪ್ರಮುಖ ನಿರ್ಧಾರಕ್ಕೆ ಬಂದಿರಬೇಕಲ್ಲದೇ ಇದು ಆಯ್ಕೆದಾರರ ನಿರ್ಧಾರದಂತೆ ಕಾಣುವುದಿಲ್ಲವೆಂದ ವಾಸನ್ ತಿಳಿಸಿದರು.
ಇದಕ್ಕೆ ಕಾರಣವೇನಿರಬಹುದಂಬ ಪ್ರಶ್ನೆಯನ್ನು ಅವರ ಮುಂದೆ ಇಟ್ಟಾಗ “ಇದಕ್ಕೆ ಒಂದೇ ಕಾರಣವನ್ನು ಕೊಡಲಾಗುವುದಿಲ್ಲ, ಅನೇಕ ಕಾರಣಗಳಿರಬಹುದು. ಅವರ ಇತ್ತೀಚಿನ ಸಾಧನೆಗಳು, ತಂಡವು ಐಸಿಸಿ ಪಂದ್ಯವಾಳಿಗಳಲ್ಲಿ ಗೆಲ್ಲಲು ವಿಫಲವಾಗಿರುವುದು, ಮುಂತಾದ ಅನೇಕ ಕಾರಣಗಳಿರಬಹುದು. ಅವರ ಸತತವಾಗಿ ಉತ್ತಮ ಸಾಧನೆ ತೋರುತ್ತಿದ್ದರೆ, ತಂಡವು ಸತತವಾಗಿ ಗೆಲ್ಲುತ್ತಿದ್ದರೆ ಅವರನ್ನು ಮುಟ್ಟುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ. ರವಿ ಶಾಸ್ತ್ರಿ ಕೋಚ್ ಸ್ಥಾನದಿಂದ ಹೊರ ಹೋಗಿದ್ದು ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ ಬಂದಿರುವುದು, ಇಂಥವೆಲ್ಲಾ ಸೇರಿ ಈ ಬೆಳವಣಿಗೆ ಆಗಿರಬಹುದು. ಆಡಳಿತ ಮಂಡಳಿಯ ಉನ್ನತ ವಲಯವು ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ವಿರಾಟ್ ಕೊಹ್ಲಿಯವರನ್ನು (Virat Kohli) ಹದ್ದುಬಸ್ತಿನಲ್ಲಿಡಲು ಈ ನಿರ್ಧಾರ ಕೈಗೊಂಡಿರಬೇಕೆಂದು ಅವರು ತಿಳಿಸಿದರು.
Atul Wassan says the decision to remove Virat Kohli from one day captaincy might have been taken from the board and not from the selectors
ಇದನ್ನೂ ಓದಿ: Kirti Azad : ಗ್ರೆಗ್ ಚಾಪೆಲ್ ಕೋಚ್ ಆಗಿದ್ದಾಗ ನಾನು ಗಂಗೂಲಿಯ ಬೆಂಬಲಕ್ಕೆ ನಿಂತಿದ್ದೆ: ಮಾಜಿ ಆಯ್ಕೆದಾರ ಕೀರ್ತಿ ಆಝಾದ್
ಇದನ್ನೂ ಓದಿ: Lucknow IPL 2022 : ಲಖನೌ ತಂಡಕ್ಕೆ ಆಂಡಿ ಫ್ಲವರ್ ಕೋಚ್, ಗೌತಮ್ ಗಂಭೀರ್ ಮೆಂಟರ್, ಕೆಎಲ್ ರಾಹುಲ್ ನಾಯಕ