ಮಂಗಳವಾರ, ಏಪ್ರಿಲ್ 29, 2025
HomeSportsCricketಭಾರತದಲ್ಲಿ ವಿಶ್ವಕಪ್ ಗೆಲ್ಲಲು ಕಾಂಗರೂಗಳ ಮಾಸ್ಟರ್‌ಪ್ಲಾನ್, ಹೇಗಿದೆ ಗೊತ್ತಾ ಆಸ್ಟ್ರೇಲಿಯಾ ರಣವ್ಯೂಹ ?

ಭಾರತದಲ್ಲಿ ವಿಶ್ವಕಪ್ ಗೆಲ್ಲಲು ಕಾಂಗರೂಗಳ ಮಾಸ್ಟರ್‌ಪ್ಲಾನ್, ಹೇಗಿದೆ ಗೊತ್ತಾ ಆಸ್ಟ್ರೇಲಿಯಾ ರಣವ್ಯೂಹ ?

- Advertisement -

ಬೆಂಗಳೂರು: Australia plans win World Cup : ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ (ICC Men’s World Cup 2023) ಈ ವರ್ಷ ಭಾರತದಲ್ಲೇ ನಡೆಯಲಿದ್ದು, ಆತಿಥೇಯ ಭಾರತ ತಂಡ ತವರು ನೆಲದಲ್ಲಿ ಮತ್ತೊಮ್ಮೆ ವಿಶ್ವಕಪ್ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ. 2011ರಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ನಂತರ 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಕಂಡಿತ್ತು. ಆ ಟೂರ್ನಿಯಲ್ಲಿ ಆಸೀಸ್ ಚಾಂಪಿಯನ್ ಪಟ್ಟಕ್ಕೇರಿತ್ತು. 2019ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲೂ ಭಾರತ ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಇದೀಗ ವಿಶ್ವಕಪ್ ಟೂರ್ನಿ ಮತ್ತೆ ಬಂದಿದ್ದು, ಈ ಬಾರಿ ಮೆಗಾ ವರ್ಲ್ಡ್ ಕಪ್ ಭಾರತದಲ್ಲೇ ನಡೆಯಲಿದ್ದು, ಟೀಮ್ ಇಂಡಿಯಾ ಚಾಂಪಿಯನ್ ಆಗುವ ತವಕದಲ್ಲಿದೆ.

ಆದರೆ ಭಾರತ ತಂಡದ ಕನಸಿಗೆ ಅಡ್ಡಿಯಾಗುವ ಸಾಮರ್ಥ್ಯ ಹಲವು ತಂಡಗಳಿವೆ. ಮುಖ್ಯವಾಗಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಭಾರತದ ವಿಶ್ವಕಪ್ ಆಸೆಗೆ ತಣ್ಣೀರೆರಚುವ ಸಾಮರ್ಥ್ಯ ಹೊಂದಿವೆ. ಅದರಲ್ಲೂ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಈ ಬಾರಿ ಮತ್ತೆ ವಿಶ್ವಕಪ್ ಗೆಲ್ಲಲು ರೋಚಕ ತಂತ್ರ ಹೆಣೆದಿದೆ.

6 ತಿಂಗಳು ಭಾರತದಲ್ಲೇ ಕಾಂಗರೂಗಳ ಟೆಂಟ್:

ವಿಶ್ವಕಪ್ ಟೂರ್ನಿಗೂ ಮೊದಲು ಆರು ತಿಂಗಳುಗಳ ಕಾಲ ಆಸ್ಟ್ರೇಲಿಯಾ ಆಟಗಾರರು ಭಾರತದಲ್ಲೇ ಇರಲಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಾಗಿ ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿರುವ ಕಾಂಗರೂಗಳು ಎರಡು ತಿಂಗಳುಗಳ ಕಾಲ ಭಾರತ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಲ ಏಕದಿನ ಸರಣಿಯನ್ನಾಡಲಿದ್ದಾರೆ. ನಂತರ ಎರಡು ತಿಂಗಳುಗಳ ಕಾಲ ಆಸ್ಟ್ರೇಲಿಯಾ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಆಡಲಿದ್ದಾರೆ. ಮುಂದಿನ ಎರಡು ತಿಂಗಳು ಆಸ್ಟ್ರೇಲಿಯಾದ ಕೆಲ ಆಟಗಾರರು ಭಾರತದಲ್ಲೇ ಇದ್ದು ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸಲಿದ್ದಾರೆ. ಹೀಗೆ ವಿಶ್ವಕಪ್ ವರ್ಷದಲ್ಲಿ ಆಸ್ಟ್ರೇಲಿಯಾ ಆಟಗಾರರು ಆರು ತಿಂಗಳುಗಳ ಕಾಲ ಭಾರತದಲ್ಲೇ ಇದ್ದು, ವಿಶ್ವಕಪ್ ಗೆಲ್ಲಲು ತಯಾರಿ ನಡೆಸಲಿದ್ದಾರೆ (Australian players will be in India for around 6 months in 2023).
.
ಆಸ್ಟ್ರೇಲಿಯಾ ತಂಡದ ಸ್ಫೋಟಕ ಎಡಗೈ ಓಪನರ್ ಡೇವಿಡ್ ವಾರ್ನರ್ ಐಪಿಎಲ್’ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ. ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್’ವೆಲ್, ವೇಗಿ ಜೋಶ್ ಹೇಜರ್’ವುಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾರೆ. ಸ್ಫೋಟಕ ಹೊಡೆತಗಳ ಆಟಗಾರ ಟಿಮ್ ಡೇವಿಡ್, ಯುವ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ. ವೇಗಿ ಡೇನಿಯೆಲ್ ಸ್ಯಾಮ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದಾರೆ.

ಇದನ್ನೂ ಓದಿ : ICC World Cup 2023 : ಐಸಿಸಿ ಏಕದಿನ ವಿಶ್ವಕಪ್‌ಗೆ ಟೀಮ್ ಇಂಡಿಯಾ ರೆಡಿ : ವರ್ಲ್ಡ್ ಕಪ್ ಆಡಲಿರುವ ಆಟಗಾರರು ಇವರೇ

ಇದನ್ನೂ ಓದಿ : Rishabh Pant Rohit Sharma : ರಿಷಭ್ ಚೇತರಿಕೆಗೆ ಪಾಕ್ ಕ್ರಿಕೆಟಿಗರ ಹಾರೈಕೆ, ಇತ್ತ ಒಂದೇ ಒಂದು ಶಬ್ದ ಮಾತಾಡದ ರೋಹಿತ್; ಮಾನವೀಯತೆ ಮರೆತರಾ ಹಿಟ್‌ಮ್ಯಾನ್?

Australia plans to win World Cup in India Australian players will be in India 6 months in 2023

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular