KD Movie : ಆ್ಯಕ್ಷನ್ ಪ್ರಿನ್ಸ್ “ಕೆಡಿ” ಸಿನಿಮಾದ ಕ್ರೇಜ್ ಹೆಚ್ಚಿಸಿದ ಪ್ರೇಮ್

ನಿರ್ದೇಶಕ ಪ್ರೇಮ್‌ ಕನ್ನಡ ಸಿನಿರಂಗದಲ್ಲಿ ಯಾವ ಸಿನಿಮಾ ಮಾಡಿದರೂ ಹೊಸ ಕ್ರೇಜ್ ಸೃಷ್ಟಿ ಮಾಡುವುದರಲ್ಲಿ ಸದಾ ಮುಂದೆ ಇರುತ್ತಾರೆ. ನಿರ್ದೇಶಕ ಪ್ರೇಮ್‌ ಅವರ ಮೊದಲ ಸಿನಿಮಾವಾದ ಕರಿಯದಿಂದ ಹಿಡಿದು ಇತ್ತೀಚಿನ ಏಕ್ ಲವ್ ಯಾವರೆಗೆ ಅದನ್ನು ಸಾಬೀತು ಮಾಡಿದ್ದಾರೆ. ಅಷ್ಟೆ ಅಲ್ಲದೇ ಈ ಸಿನಿಮಾವನ್ನು ಗೆದ್ದುಕೊಂಡಿದ್ದಾರೆ. ಇದೀಗ ಪ್ರೇಮ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಮಾಡುತ್ತಿರುವ “ಕೆಡಿ” ಸಿನಿಮಾದಲ್ಲಿ (KD Movie) ಕ್ರೇಜ್ ಸೃಷ್ಟಿ ಮಾಡುವುದಕ್ಕೆಂದು ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರನ್ನು ಕರೆದು ತಂದಿದ್ದಾರೆ.

ರವಿಚಂದ್ರನ್ ಸಿನಿಮಾಗಳನ್ನು ನೋಡಿಕೊಂಡು ಅವರಂತೆಯೇ ಡೈರೆಕ್ಟರ್ ಆಗಬೇಕು ಎಂದು ಕನಸು ಕಂಡಿದ್ದ ಪ್ರೇಮ್ ಅವರಿಗೆ ಇದು ಹೆಮ್ಮೆಯ ವಿಷಯವೂ ಹೌದು.ಕೆಡಿ ಸಿನಿ ಮಾದಲ್ಲಿ ರವಿಚಂದ್ರನ್ ಅಣ್ಣಯ್ಯಪ್ಪ ಎಂಬ ಪಾತ್ರದಲ್ಲಿ ನಟಿಸಲಿದ್ದಾರೆ. ಇದೀಗ ಅದರ ಅಣ್ಣಯ್ಯಪ್ಪ ಪಾತ್ರದ ಫಸ್ಟ್ ಲುಕ್ ಹೊರಬಿದ್ದಿದೆ. ಪೋಸ್ಟರ್ ಡಿಫರೆಂಟ್ ಆಗಿದ್ದು, ಇನ್ನೂ ಪಾತ್ರಕ್ಕೆ ಅಣ್ಣಯ್ಯಪ್ಪ ಹೆಸರನ್ನು ಸೂಚಿಸಿದ್ದಾರೆ. ಹಾಗಾಗಿ ಅಣ್ಣಯ್ಯಪ್ಪ ಎಂದರೆ ಸಿನಿಪ್ರಿಯರಿಗೆ ಅಣ್ಣಯ್ಯ ಸಿನಿಮಾವನ್ನು ನೆನಪಿಸಿದರೆ ಅಚ್ಚರಿಯೇನಿಲ್ಲ. ಹಾಗಾಗಿ ಆ ಪಾತ್ರ ನೆನಪಾಗಲಿ ಎಂದೇ ಪಾತ್ರಕ್ಕೆ ಆ ಹೆಸರು ಇಟ್ಟಿದ್ದರೂ ಇರಬಹುದು ಎಂದು ಹಲವರು ಮಾತನಾಡಿಕೊಂಡಿದ್ದಾರೆ.

ಕೆಡಿ ಸಿನಿಮಾ 70ರ ದಶಕದ ನಟೋರಿಯಸ್ ರೌಡಿಯೊಬ್ಬನ ಕಥಾಹಂದರವನ್ನು ಒಳಗೊಂಡಿದೆ. ಇತ್ತೀಚೆಗೆ ರಿಲೀಸ್ ಮಾಡಿದ್ದ ಟೈಟಲ್ ಹಾಗೂ ಟೀಸರ್‌ ಎರಡು ಸಿನಿಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದಂತೂ ಸುಳ್ಳಲ್ಲ. ಈ ಸಿನಿಮಾದ ಟೈಟಲ್ ಹಾಗೂ ಟೀಸರ್‌ನಲ್ಲಿ ವ್ಯಕ್ತಿಯೊಬ್ಬನನ್ನು ಮೂಟೆ ಕಟ್ಟಿಕೊಂಡು ಬರುತ್ತಿದ್ದ ಧ್ರುವ ಸರ್ಜಾರನ್ನು ತೋರಿಸಲಾಗಿತ್ತು. ಈ ಸಿನಿಮಾದಲ್ಲಿ ಈಗಾಗಲೇ ಬಾಲಿವುಡ್‌ನ ಖ್ಯಾತ ನಟ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ : Kranti Movie Trailer Release : ಬಹುನಿರೀಕ್ಷಿತ “ಕ್ರಾಂತಿ” ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ಸಿನಿತಂಡ

ಇದನ್ನೂ ಓದಿ : ಮನೆಯ ಬಾಲ್ಕನಿಯಲ್ಲಿ ಸ್ನೇಹಿತರೊಂದಿಗೆ ಹೊಸ ವರ್ಷ ಆಚರಿಸಿದ ಆಲಿಯಾ ಭಟ್ – ರಣಬೀರ್ ಕಪೂರ್

ಇದನ್ನೂ ಓದಿ : Spooky College Movie : ಟ್ರೈಲರ್‌ನಿಂದಲೇ ಕಿಕ್‌ ಕೊಟ್ಟ ‘ಸ್ಪೂಕಿ ಕಾಲೇಜ್’ ಸಿನಿಮಾ ರಿಲೀಸ್‌ಗೆ ರೆಡಿ

ಈ ಸಿನಿಮಾಗೆ 75ರಲ್ಲಿ ನಡೆದಿದ್ದ ಕೆಲವು ನೈಜ ಘಟನೆಗಳೇ ಸ್ಫೂರ್ತಿಯಾಗಿದ್ದು, ಅದಕ್ಕೆ ಕಮರ್ಷಿಯಲ್ ಟಚ ಕೊಟ್ಟಿದ್ದೇವೆ. ಆಗಿನ ಕಾಲದ ಮಾತಿನ ಸ್ಟೈಲ್ ಕೂಡಾ ಹಾಗೇ ಇರುತ್ತದೆ. ಈ ಸಿನಿಮಾದಲ್ಲಿ ಸೆನ್ಸಾರ್ ಇರಲ್ಲ. ಆ ಕಾಲದ ಕೆಲವು ನೈಜ ಹೆಸರುಗಳೂ ಹಾಗೆಯೇ ಇರುತ್ತವೆ. ಇದು ಬೆಂಗಳೂರಿನಲ್ಲಿಯೇ ನಡೆದಿದ್ದ ಕಥೆಯಾಗಿದ್ದು, ಈ ಸಿನಿಮಾದ ಕಥೆ ರೋಚಕವಾಗಿರೋ ಕಾರಣದಿಂದಲೇ ಯುದ್ಧದ ಮುನ್ನುಡಿ ಎಂದು ಟ್ಯಾಗ್‍ಲೈನ್ ಇಟ್ಟೆವು ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. ಈಗ ಯುದ್ಧದ ಸೈನ್ಯಕ್ಕೆ ಧ್ರುವ, ಸಂಜಯ್ ದತ್ ಜೊತೆ ರವಿಚಂದ್ರನ್ ಕೂಡಾ ಸೇರಿದ್ದಾರೆ ಎಂದು ಹೇಳಿದರು.

Prem who increased the craze of action prince KD movie

Comments are closed.