ಬೆಂಗಳೂರು: ಬಿಸಿಸಿಐ ನಡೆಸುವ ಐಪಿಎಲ್ (IPL) ಟೂರ್ನಿಗಿಂತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡೆಸುವ ಪಿಎಸ್ಎಲ್ (PSL) ಟೂರ್ನಿಯೇ ಗ್ರೇಟ್ ಎಂಬಂತೆ ಪಾಕಿಸ್ತಾನದ ಕೆಲ ಕ್ರಿಕೆಟಿಗರು (Babar Azam Vs Smriti Mandhana ) ಪೋಸ್ ಕೊಡ್ತಾರೆ. ಆದ್ರೆ ಐಪಿಎಲ್ ಮುಂದೆ ಪಿಎಸ್ಎಲ್ ಲೆಕ್ಕಕ್ಕೇ ಇಲ್ಲ. ಇದು ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ಪಿಎಸ್ಎಲ್’ನಲ್ಲಿ ಪಡೆಯುವ ಸಂಭಾವನೆಗಿಂತ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (Women’s Premier League) ಸ್ಮೃತಿ ಮಂಧನ (Smriti Mandhana) ಪಡೆಯಲಿರುವ ಸಂಭಾವನೆಯೇ ಹೆಚ್ಚು.
ಸೋಮವಾರ ನಡೆದ WPL ಆಟಗಾರ್ತಿಯರ ಹರಾಜಿನಲ್ಲಿ ಟೀಮ್ ಇಂಡಿಯಾ ಸೂಪರ್ ಸ್ಟಾರ್ ಸ್ಮೃತಿ ಮಂಧನ 3.4 ಕೋಟಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತ್ತು. ಇದರೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್’ನ ದುಬಾರಿ ಆಟಗಾರ್ತಿಯಾಗಿ ಸ್ಮೃತಿ ಮಂಧನ ಮೂಡಿ ಬಂದಿದ್ದರು. ಪಿಎಸ್ಎಲ್ ಟೂರ್ನಿಯಲ್ಲಿ ಪೇಶಾವರ ಜಲ್ಮಿ ತಂಡದ ಪರ ಆಡುವ ಬಾಬರ್ ಅಜಮ್ ವರ್ಷಕ್ಕೆ 1,50,000 ಡಾಲರ್ ಸಂಭಾವನೆ ಪಡೆಯುತ್ತಾರೆ. ಪಾಕಿಸ್ತಾನದ ಕರೆನ್ಸಿಯಲ್ಲಿ ಇದು 3 ಕೋಟಿ 60 ಲಕ್ಷ. ಇದನ್ನು ಭಾರತದ ರೂಪಾಯಿಯಲ್ಲಿ ಲೆಕ್ಕ ಹಾಕಿದಾಗ 1.23 ಕೋಟಿ. WPLನಲ್ಲಿ ಸ್ಮೃತಿ ಮಂಧನ ಪಡೆಯಲಿರುವ ಮೊತ್ತ ಬರೋಬ್ಬರಿ 3.40 ಕೋಟಿ ರೂಪಾಯಿ.
ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಲಿರುವ ರಿಚಾ ಘೋಷ್, ರೇಣುಕಾ ಠಾಕೂರ್ ಹಾಗೂ ಆಸ್ಟ್ರೇಲಿಯಾ ಆಲ್ರೌಂಡರ್ ಎಲೀಸ್ ಪೆರಿ ಕೂಡ ಬಾಬರ್ ಅಜಮ್’ಗಿಂತ ಹೆಚ್ಚಿನ ಸಂಭಾವನೆ ಪಡೆಯಲಿದ್ದಾರೆ. ರಿಚಾ ಘೋಷ್ 1.9 ಕೋಟಿ, ರೇಣುಕಾ ಠಾಕೂರ್ 1.5 ಕೋಟಿ ಹಾಗೂ ಎಲೀಸ್ ಪೆರಿ ಅವರನ್ನು 1.7 ಕೋಟಿ ಮೊತ್ತಕ್ಕೆ RCB ಫ್ರಾಂಚೈಸಿ ಖರೀದಿಸಿದೆ.
ಇದನ್ನೂ ಓದಿ : Women’s Premier League : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಕನ್ನಡಿಗ RX ಮುರಳಿ ಬ್ಯಾಟಿಂಗ್ ಕೋಚ್
ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿರುವ ಜೆಮೈಮಾ ರಾಡ್ರಿಗ್ಸ್ (2.2 ಕೋಟಿ), ಶೆಫಾಲಿ ವರ್ಮಾ (2 ಕೋಟಿ), ಮುಂಬೈ ಇಂಡಿಯನ್ಸ್ ಪರ ಆಡಲಿರುವ ನಥಾಲೀ ಸಿವರ್ (3.2 ಕೋಟಿ), ಪೂಜಾ ವಸ್ತ್ರಕಾರ್ (1.9 ಕೋಟಿ), ಹರ್ಮನ್ ಪ್ರೀತ್ ಕೌರ್ (1.8 ಕೋಟಿ), ಯಸ್ತಿಕಾ ಭಾಟಿಯಾ (1.5 ಕೋಟಿ), ಯು.ಪಿ ವಾರಿಯರ್ಸ್ ಪರ ಆಡಲಿರುವ ದೀಪ್ತಿ ಶರ್ಮಾ (2.6 ಕೋಟಿ), ಸೋಫೀ ಎಕ್ಲಿಸ್ಟೋನ್ (1.8 ಕೋಟಿ), ಗುಜರಾತ್ ಜೈಂಟ್ಸ್ ಪರ ಆಡಲಿರುವ ಆಶ್ಲೆ ಗಾರ್ಡ್ನರ್ (3.2 ಕೋಟಿ), ಬೆತ್ ಮೂನಿ (2 ಕೋಟಿ) ಕೂಡ ಪಾಕಿಸ್ತಾನ ತಂಡದ ನಾಯಕನಿಗಿಂತ ಹೆಚ್ಚಿನ ಸಂಭಾವನೆ ಪಡೆಯಲಿದ್ದಾರೆ.
Babar Azam Vs Smriti Mandhana : Smriti Mandhan’s WPL salary is more than Pakistan’s Babar Azam PSL salary