ಸೋಮವಾರ, ಏಪ್ರಿಲ್ 28, 2025
HomeSportsCricketBCCI postmortem Meeting : ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋಲು, ಬಿಸಿಸಿಐ ಮೀಟಿಂಗ್'ನಲ್ಲಿ ಹೊರ...

BCCI postmortem Meeting : ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋಲು, ಬಿಸಿಸಿಐ ಮೀಟಿಂಗ್’ನಲ್ಲಿ ಹೊರ ಬೀಳಲಿದೆ ಮಹತ್ವದ ನಿರ್ಧಾರ

- Advertisement -

ಮುಂಬೈ: ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧ ಅವಮಾನಕರ ರೀತಿಯಲ್ಲಿ ಏಕದಿನ ಸರಣಿ ಸೋತಿರುವ ಹಿನ್ನೆಲೆಯಲ್ಲಿ ಬಿಸಿಸಿಐ (BCCI) ಗರಂ ಆಗಿದೆ.
ಬಾಂಗ್ಲಾದೇಶ ಪ್ರವಾಸದ ಬೆನ್ನಲ್ಲೇ ಬಿಸಿಸಿಐ ಮಹತ್ವದ ಸಭೆ ನಡೆಯಲಿದ್ದು, (BCCI postmortem Meeting) ಭಾರತ ತಂಡದ ವಿಚಾರವಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ.

ಬಾಂಗ್ಲಾದೇಶ ಪ್ರವಾಸದಲ್ಲಿರುವ (India tour of Bangladesh) ಟೀಮ್ ಇಂಡಿಯಾ ಮೀರ್’ಪುರ್’ನಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿಯ ಮೊದಲರೆಡು ಪಂದ್ಯಗಳನ್ನು ಸೋತು ಸರಣಿಯನ್ನು ಈಗಾಗಲೇ ಆತಿಥೇಯರಿಗೆ ಒಪ್ಪಿಸಿದೆ. ಸರಣಿಯ ಮೂರನೇ ಪಂದ್ಯ ಶನಿವಾರ ನಡೆಯಲಿದ್ದು, ಟೀಮ್ ಇಂಡಿಯಾ ಕ್ಲೀನ್ ಕ್ವೀಪ್ ಅವಮಾನದ ಭೀತಿಯಲ್ಲಿದೆ. 2ನೇ ಪಂದ್ಯದಲ್ಲಿ ಕೈಬೆರಳಿನ ಗಾಯಕ್ಕೊಳಗಾಗಿರುವ ನಾಯಕ ರೋಹಿತ್ ಶರ್ಮಾ 3ನೇ ಪಂದ್ಯಕ್ಕೆ ಅಲಭ್ಯರಾಗಿದ್ದು ಭಾರತ ತಂಡವನ್ನು ಉಪನಾಯಕ ಕೆ.ಎಲ್ ರಾಹುಲ್ ಮುನ್ನಡೆಸಲಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಸೋಲಿನಿಂದ ಎಚ್ಚೆತ್ತುಕೊಂಡಿರುವ ಬಿಸಿಸಿಐ, ಬಾಂಗ್ಲಾ ಪ್ರವಾಸ ಮುಗಿದ ಬೆನ್ನಲ್ಲೇ ಮುಂಬೈನಲ್ಲಿ ಮಹತ್ವದ ಸಭೆ ನಡೆಸಲಿದೆ. ಈ ಸಭೆಗೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (National Cricket Academy – NCA) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಕೂಡ ಹಾಜರಾಗಲಿದ್ದಾರೆ. ಭಾರತ ತಂಡದ ಇತ್ತೀಚಿನ ವೈಫಲ್ಯಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಬಿಸಿಸಿಐ ಸಭೆಯಲ್ಲಿ ಚರ್ಚೆಯಾಗಲಿರುವ ಅಂಶಗಳು :

  • ಏಷ್ಯಾಕಪ್ ಟಿ20 ಟೂರ್ನಿಯ ವೈಫಲ್ಯ
  • ಐಸಿಸಿ ಟಿ20 ವಿಶ್ವಕಪ್ ವೈಫಲ್ಯ
  • ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಸೋಲು
  • ಆಟಗಾರರು ಪದೇ ಪದೇ ಗಾಯಕ್ಕೊಳಗಾಗುತ್ತಿರುವುದು
  • ಟಿ20 ತಂಡಕ್ಕೆ ಪ್ರತ್ಯೇಕ ನಾಯಕ ಹಾಗೂ ಕೋಚ್ ಆಯ್ಕೆ

ಏಷ್ಯಾ ಕಪ್ ಟಿ20 ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸತತ ವೈಫಲ್ಯಗಳ ಹಿನ್ನೆಲೆಯಲ್ಲಿ ಟಿ20 ತಂಡಕ್ಕೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನೂತನ ನಾಯಕನನ್ನಾಗಿ ನೇಮಕ ಮಾಡುವ ಸಾಧ್ಯತೆಗಳಿವೆ. ಮುಂದಿನ ವರ್ಷದ ಅರಂಭದಲ್ಲೇ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ಟಿ20 ತಂಡಕ್ಕೆ ಹೊಸ ನಾಯಕನನ್ನು ಬಿಸಿಸಿಐ ನೇಮಕ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ : Rohith Sharma 500 Sixers : ನೋವಿನ ಮಧ್ಯೆಯೂ ಸಿಕ್ಸರ್’ಗಳ ಸುರಿಮಳೆ, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 500 ಸಿಕ್ಸರ್ಸ್ ಸಿಡಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ : Exclusive: Srinivas Chandrasekaran Video analyst: ಭಾರತ ವಿರುದ್ಧ ಬಾಂಗ್ಲಾದೇಶದ ಐತಿಹಾಸಿಕ ಸರಣಿ ಗೆಲುವಿನ ಹಿಂದೆ ಕನ್ನಡಿಗನ ಕಮಾಲ್

ಇದನ್ನೂ ಓದಿ : Rohith Sharma thump injury : ಬಾಂಗ್ಲಾ ಪ್ರವಾಸದಿಂದ ರೋಹಿತ್ ಔಟ್, ಮುಂಬೈಗೆ ವಾಪಸ್; ಕೊನೆಯ ಏಕದಿನ ಪಂದ್ಯಕ್ಕೆ ರಾಹುಲ್ ಕ್ಯಾಪ್ಟನ್

ಶ್ರೀಲಂಕಾ ವಿರುದ್ಧ ಭಾರತ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದ್ದು, ಈ ಸರಣಿ ಜನವರಿ 3ರಂದು ಮುಂಬೈನಲ್ಲಿ ಆರಂಭವಾಗಲಿದೆ. ನಂತರ ಟೀಮ್ ಇಂಡಿಯಾ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧವೂ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.

BCCI postmortem meeting: ODI series defeat against Bangladesh, important decision will be made in BCCI meeting

RELATED ARTICLES

Most Popular