India Vs Bangladesh 3rd ODI: ಕ್ಲೀನ್ ಸ್ವೀಪ್ ಭೀತಿಯಲ್ಲಿ ಭಾರತ, ಕನ್ನಡಿಗ ಕೆ.ಎಲ್ ರಾಹಲ್ ಮುಂದೆ ಬಿಗ್ ಚಾಲೆಂಜ್

ಛಟ್ಟೋಗ್ರಾಮ್ : ಆತಿಥೇಯ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ನಾಳೆ (ಶನಿವಾರ) ನಡೆಯಲಿದ್ದು (India Vs Bangladesh 3rd ODI) ಪ್ರವಾಸಿ ಭಾರತ ಕ್ಲೀನ್ ಸ್ವೀಪ್ ಅವಮಾನದ ಭೀತಿಯಲ್ಲಿದೆ. ಛಟ್ಟೋಗ್ರಾಮ್’ನಲ್ಲಿರುವ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಕನ್ನಡಿಗ ಕೆ.ಎಲ್ ರಾಹುಲ್ (KL Rahul Captain) ಮುನ್ನಡೆಸಲಿದ್ದಾರೆ.

ನಾಯಕ ರೋಹಿತ್ ಶರ್ಮಾ (Rohit Sharma) ಮೀರ್’ಪುರ್’ನಲ್ಲಿ ಬುಧವಾರ ನಡೆದ ಸರಮಿಯ 2ನೇ ಪಂದ್ಯದಲ್ಲಿ ಎಡಗೈ ಹೆಬ್ಬೆರಳಿನ ಗಾಯಕ್ಕೊಳಗಾಗಿದ್ದು, ಚಿಕಿತ್ಸೆಗಾಗಿ ಮುಂಬೈಗೆ ಮರಳಿದ್ದಾರೆ. ಹೀಗಾಗಿ 3ನೇ ಪಂದ್ಯಕ್ಕೆ ರೋಹಿತ್ ಅಲಭ್ಯರಾಗಿದ್ದು ಉಪನಾಯಕ ಕೆ.ಎಲ್ ರಾಹುಲ್ ಭಾರತ ತಂಡದ ಸಾರಥ್ಯ ವಹಿಸಲಿದ್ದಾರೆ. ರೋಹಿತ್ ಶರ್ಮಾ ಸ್ಥಾನದಲ್ಲಿ ವಿಕೆಟ್ ಕೀಪರ್ ಇಶಾನ್ ಕಿಶನ್ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದು, ಶಿಖರ್ ಧವನ್ ಜೊತೆ ಟೀಮ್ ಇಂಡಿಯಾದ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

2ನೇ ಪಂದ್ಯದಲ್ಲಿ ಗಾಯಗೊಂಡಿದ್ದ ಸ್ವಿಂಗ್ ಬೌಲರ್ ದೀಪಕ್ ಚಹರ್ ಮತ್ತು ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದ ಯುವ ವೇಗಿ ಕುಲ್ದೀಪ್ ಸೇನ್ 3ನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇಬ್ಬರು ವೇಗದ ಬೌಲರ್’ಗಳು ಗಾಯಗೊಂಡಿರುವ ಕಾರಣ 3ನೇ ಪಂದ್ಯದಲ್ಲಿ ಒಬ್ಬ ಹೆಚ್ಚುವರಿ ವೇಗಿಯ ಸೇವೆಯಿಂದ ಭಾರತ ವಂಚಿತವಾಗಲಿದ್ದು, ಆ ಸ್ಥಾನದಲ್ಲಿ ಎಡಗೈ ಸ್ಪಿನ್ ಆಲ್ರೌಂಡರ್ ಶಹಬಾಜ್ ಅಹ್ಮದ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಏಕದಿನ ಸರಣಿಯ ನಂತರ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

ಬಾಂಗ್ಲಾದೇಶ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
1.ಶಿಖರ್ ಧವನ್, 2.ಇಶಾನ್ ಕಿಶನ್, 3.ವಿರಾಟ್ ಕೊಹ್ಲಿ, 4.ಶ್ರೇಯಸ್ ಅಯ್ಯರ್, 5.ಕೆ.ಎಲ್ ರಾಹುಲ್ (ನಾಯಕ, ವಿಕೆಟ್ ಕೀಪರ್), 6.ಅಕ್ಷರ್ ಪಟೇಲ್, 7.ವಾಷಿಂಗ್ಟನ್ ಸುಂದರ್, 8.ಶಾರ್ದೂಲ್ ಠಾಕೂರ್, 9.ಶಹಬಾಜ್ ಅಹ್ಮದ್, 10.ಮೊಹಮ್ಮದ್ ಸಿರಾಜ್, 10.ಉಮ್ರಾನ್ ಮಲಿಕ್.

ಇದನ್ನೂ ಓದಿ : England tour of Pakistan : ಇಂಗ್ಲೆಂಡ್ ತಂಡ ತಂಗಿದ್ದ ಹೋಟೆಲ್ ಬಳಿ ಗುಂಡಿನ ಸದ್ದು, ಬೆಚ್ಚಿ ಬಿದ್ದ ಇಂಗ್ಲೀಷ್ ಆಟಗಾರರು

ಇದನ್ನೂ ಓದಿ : BCCI postmortem Meeting : ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋಲು, ಬಿಸಿಸಿಐ ಮೀಟಿಂಗ್’ನಲ್ಲಿ ಹೊರ ಬೀಳಲಿದೆ ಮಹತ್ವದ ನಿರ್ಧಾರ

ಇದನ್ನೂ ಓದಿ : Rohith Sharma thump injury : ಬಾಂಗ್ಲಾ ಪ್ರವಾಸದಿಂದ ರೋಹಿತ್ ಔಟ್, ಮುಂಬೈಗೆ ವಾಪಸ್; ಕೊನೆಯ ಏಕದಿನ ಪಂದ್ಯಕ್ಕೆ ರಾಹುಲ್ ಕ್ಯಾಪ್ಟನ್

ಭಾರತ Vs ಬಾಂಗ್ಲಾದೇಶ 3ನೇ ಏಕದಿನ ಪಂದ್ಯ :
ಪಂದ್ಯ ಆರಂಭ: ಬೆಳಗ್ಗೆ 11.30ಕ್ಕೆ
ಸ್ಥಳ: ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣ, ಛಟ್ಟೋಗ್ರಾಮ್
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಸ್ (Sony Sports Network)
ಲೈವ್ ಸ್ಟ್ರೀಮಿಂಗ್: Sony Liv App

India Vs Bangladesh 3rd ODI: India in danger of clean sweep, big challenge ahead of Kannadigas KL Rahul

Comments are closed.