ಬೆಂಗಳೂರು : (Chahal Dhanashree Relationship) ಕಳೆದ ಕೆಲ ಗಂಟೆಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಟೀಮ್ ಇಂಡಿಯಾ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ಡಿವೋರ್ಸ್’ನದ್ದೇ ಸುದ್ದಿ. ಯುಜ್ವೇಂದ್ರ ಚಹಲ್ (Yuzvendra Chahal) ಮತ್ತು ಧನಶ್ರೀ ವರ್ಮಾ (Dhanashree Verma) 2020ರ ಡಿಸೆಂಬರ್’ನಲ್ಲಿ ಮದುವೆಯಾಗಿದ್ದರು. ಚಹಲ್ ಮತ್ತು ಧನಶ್ರೀ ದಂಪತಿಯ ಸಂಬಂಧ ಬಿರುಕು ಬಿಟ್ಟಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೆಲ್ಲಾ ಶುರುವಾಗಿದ್ದು ಧನಶ್ರೀ ವರ್ಮಾ ಮಾಡಿದ ಅದೊಂದು ಕೆಲಸದಿಂದ. ಯುಜ್ವೇಂದ್ರ ಚಹಲ್ ಪತ್ನಿ ಧನಶ್ರೀ ತಮ್ಮ ಹೆಸರಿನ ಮುಂದಿದ್ದ ಚಹಲ್ ಎಂಬ ಸರ್’ನೇಮ್ ಅನ್ನು ಇನ್’ಸ್ಟಾಗ್ರಾಂ ಅಕೌಂಟ್’ನಿಂದ ತೆಗೆದು ಹಾಕಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಇದೇ ಹೊತ್ತಲ್ಲಿ ಯುಜ್ವೇಂದ್ರ ಚಹಲ್ ತಮ್ಮ ಇನ್’ಸ್ಟಾಗ್ರಾಂನಲ್ಲಿ “ಹೊಸ ಜೀವನ ಶುರುವಾಗುತ್ತಿದೆ” ಎಂದು ಬರೆದುಕೊಂಡಿದ್ದರು. ಇದು ಮತ್ತಷ್ಟು ಕುತೂಹಲಗಳನ್ನು ಹುಟ್ಟು ಹಾಕಿತ್ತು. ಚಹಲ್ ಮತ್ತು ಧನಶ್ರೀ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದ್ದವು.
ಇದೇ ಸಂದರ್ಭದಲ್ಲಿ ಮುಂಬೈ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ ಹೆಸರೂ ಚಹಲ್-ಧನಶ್ರೀ ಮಧ್ಯೆ ಥಳಕು ಹಾಕಿಕೊಂಡಿತ್ತು. ಇತ್ತೀಚೆಗಷ್ಟೇ ಮುಂಬೈನಲ್ಲಿ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ಧನಶ್ರೀಯನ್ನು ಮನೆಗೆ ಆಹ್ವಾನಿಸಿ ಪಾರ್ಟಿ ನಡೆಸಿದ್ದರು. ಅಷ್ಟೇ ಅಲ್ಲ, ಈ ಬಗ್ಗೆ ಇನ್’ಸ್ಟಾಗ್ರಾಂ ಪೋಸ್ಟ್ ಕೂಡ ಹಾಕಿದ್ದ ಸೂರ್ಯಕುಮಾರ್ ಯಾದವ್, “Sorry ಚಹಲ್, ನಾವು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ” ಎಂದು ಟ್ರೋಲ್ ಮಾಡಿದ್ದರು.
ಶ್ರೇಯಸ್ ಅಯ್ಯರ್ ಕಾರಣದಿಂದ ಚಹಲ್ ಮತ್ತು ಧನಶ್ರೀ ಸಂಬಂಧ ಹಾಳಾಗಿದೆ ಎಂಬ ಮಾತುಗಳೂ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿದ್ವು. ಆದ್ರೆ ಗೆಳೆಯನಿಗೆ ಮೋಸ ಮಾಡಲು ಶ್ರೇಯಸ್ ಅಯ್ಯರ್ ಏನು ಮುರಳಿ ವಿಜಯ್ ಅಲ್ಲ ಎಂದು ಅಯ್ಯರ್ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದರು.
ತಮ್ಮ ಮತ್ತು ಪತ್ನಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಚಹಲ್, ನಮ್ಮ ಮಧ್ಯೆ ಅಂಥದ್ದೇನೂ ಆಗಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
“ನಮ್ಮ ಸಂಬಂಧದ ಬಗ್ಗೆ ಹಬ್ಬುತ್ತಿರುವ ರೂಮರ್’ಗಳನನ್ನು ಯಾರೂ ನಂಬಬೇಡಿ. ದಯವಿಟ್ಟು ಎಲ್ಲವನ್ನೂ ಇಲ್ಲೇ ಮುಗಿಸಿ ಬಿಡಿ” ಎಂದು ಚಹಲ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Meghana Raj Sarja : ಮತ್ತೊಂದು ಮದುವೆಯಾಗ್ತಾರಾ ನಟಿ ಮೇಘನಾ ರಾಜ್ ಸರ್ಜಾ ; ಇಲ್ಲಿದೇ ಕುಟ್ಟಿಮಾ ಬೋಲ್ಡ್ ಆನ್ಸರ್
Chahal Dhanashree Relationship Yuzvendra Chahal clarification on his relationship with his wife Dhanashree Verma