IPLಗೆ ನಿವೃತ್ತಿ ಘೋಷಿಸಿದ ಡ್ವೇನ್ ಬ್ರಾವೋ : ಬೌಲಿಂಗ್ ಕೋಚ್ ಆಗಿ ನೇಮಿಸಿದ CSK

ವೆಸ್ಟ್ ಇಂಡಿಸ್ ದೈತ್ಯ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಖ್ಯಾತ ಆಲ್ ರೌಂಡರ್ ಡ್ವೇನ್ ಬ್ರಾವೋ (Dwayne Bravo ) ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಗುಡ್ ಬೈ ಹೇಳಿದ್ದಾರೆ. IPL 2023 ಆವೃತ್ತಿ ಆರಂಭಕ್ಕೂ ಮೊದಲೇ ಐಪಿಎಲ್ ತೊರೆದಿದ್ದಾರೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡ್ವೇನ್ ಬ್ರಾವೋ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ.

2008 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳುತ್ತಿದ್ದಂತೆಯೇ ಪದಾರ್ಪಣೆ ಮಾಡಿದ್ದ ಡ್ವೇನ್ ಬ್ರಾವೋ 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರ್ಪಡೆಗೊಂಡಿದ್ದರು. ಅಂದಿನಿಂದಲೂ ಡ್ವೇನ್ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ 161 ಪಂದ್ಯಗಳನ್ನು ಆಡಿದ್ದು, 183 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ ಐಪಿಎಲ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಅನ್ನೋ ಖ್ಯಾತಿಗೂ ಪಾತ್ರರಾಗಿದ್ದಾರೆ.

ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್ ನಲ್ಲಿಯೂ ಡ್ವೇನ್ ಬ್ರಾವೋ ಮಿಂಚು ಹರಿಸಿದ್ದಾರೆ. ಆಲ್ ರೌಂಡರ್ ಆಟವನ್ನು ಪ್ರದರ್ಶಿಸಿರುವ ಬ್ರಾವೋ 130 ಸ್ಟ್ರೈಕ್ ರೇಟ್ ನಲ್ಲಿ 1560 ರನ್ ಗಳಿಸಿದ್ದಾರೆ. 2011 ರಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಿರುವ ಬ್ರಾವೋ, 2011, 2018 ಮತ್ತು 2021 ರಲ್ಲಿ ಮೂರು ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾತ್ರವಲ್ಲದೇ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಲಯನ್ಸ್ ತಂಡದ ಪರ ಆಡಿದ್ದಾರೆ ಚೆನ್ನೈ ಪರ 144 ಪಂದ್ಯಗಳನ್ನು ಆಡಿರುವ ಬ್ರಾವೋ 168 ವಿಕೆಟ್ ಪಡೆದಿದ್ದು, 1556 ರನ್ ಗಳಿಸಿದ್ದಾರೆ. 2013 ಮತ್ತು 2015ರಲ್ಲಿ ಅವರು ಐಪಿಎಲ್ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರು.

ಇದನ್ನೂ ಓದಿ : Pro Kabaddi 2023 Playoff : ಟಾಪ್-2 ಟೀಮ್‌ಗೆ ಡೆರೆಕ್ಟ್ ಸೆಮಿಫೈನಲ್ ಎಂಟ್ರಿ, ಹೀಗಿರಲಿದೆ ಪ್ಲೇ ಆಫ್ ಫೈಟ್

ಇದನ್ನೂ ಓದಿ : IPL Auction 2023: ಡಿಸೆಂಬರ್ 23ಕ್ಕೆ ಐಪಿಎಲ್ ಹರಾಜು: ಒಟ್ಟು 991 ಆಟಗಾರರು, 774 ಭಾರತೀಯರು

ಇದನ್ನೂ ಓದಿ : Harris Rauf Virat Kohli : ಸಿಕ್ಸರ್ ಬಾರಿಸಿದ್ದು ಕಿಂಗ್ ಕೊಹ್ಲಿ.. ಪಾಂಡ್ಯ, ಡಿಕೆ ಅಲ್ಲ” ಪಾಕ್ ವೇಗಿ ಹ್ಯಾರಿಸ್ ರೌಫ್ ಹೀಗಂದರೇಕೆ ?

CSK top All-rounder Dwayne Bravo announced retirement for IPL

Comments are closed.