ಮಂಗಳವಾರ, ಏಪ್ರಿಲ್ 29, 2025
HomeSportsCricketSourav Ganguly 50th birthday : ಲಂಡನ್‌ನಲ್ಲಿ ದಾದಾ 50ನೇ ಹುಟ್ಟುಹಬ್ಬದ “ಪ್ರೀ ಬರ್ತ್’ಡೇ ಸೆಲೆಬ್ರೇಷನ್”.....

Sourav Ganguly 50th birthday : ಲಂಡನ್‌ನಲ್ಲಿ ದಾದಾ 50ನೇ ಹುಟ್ಟುಹಬ್ಬದ “ಪ್ರೀ ಬರ್ತ್’ಡೇ ಸೆಲೆಬ್ರೇಷನ್”.. ಗಂಗೂಲಿಗೆ ಕೇಕ್ ತಿನ್ನಿಸಿದ ತೆಂಡೂಲ್ಕರ್

- Advertisement -

ಲಂಡನ್‌: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶುಕ್ರವಾರ 50ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹಾಫ್ ಸೆಂಚುರಿ ಬಾರಿಸುತ್ತಿರುವ “ದಾದಾ” ಖ್ಯಾತಿಯ ಸೌರವ್ ಗಂಗೂಲಿ, ಒಂದು ದಿನ ಮೊದಲೇ ಲಂಡನ್‌ನಲ್ಲಿ ತಮ್ಮ 50ನೇ ಹುಟ್ಟುಹಬ್ಬವನ್ನು (Sourav Ganguly 50th birthday) ಆಚರಿಸಿಕೊಂಡಿದ್ದಾರೆ. ಆ ಸಂಭ್ರಮದ ಫೋಟೋಗಳು “ಪ್ರೀ ಬರ್ತ್’ಡೇ ಸೆಲೆಬ್ರೇಷನ್” ಎಂಬ ಹೆಸರಲ್ಲಿ ವೈರಲ್ ಆಗುತ್ತಿವೆ.

ವಿಶೇಷ ಏನಂದ್ರೆ ಸೌರವ್ ಗಂಗೂಲಿ ಅವರ 50ನೇ ವರ್ಷದ “ಪ್ರೀ ಬರ್ತ್’ಡೇ ಸೆಲೆಬ್ರೇಷನ್”ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾಗಿಯಾಗಿದ್ದಾರೆ. ಪತ್ನಿ ಅಂಜಲಿ ತೆಂಡೂಲ್ಕರ್ ಸಮೇತ ಸ್ನೇಹಿತನ ಜನ್ಮದಿನದ ಸಂಭ್ರಮಕ್ಕೆ ಆಗಮಿಸಿದ್ದ ಸಚಿನ್, ದಾದಾಗೆ ಕೇಸ್ ತಿನ್ನಿಸಿದ್ದಾರೆ.

ಸೌರವ್ ಗಂಗೂಲಿ ಅವರ “ಪ್ರೀ ಬರ್ತ್’ಡೇ ಸೆಲೆಬ್ರೇಷನ್”ನಲ್ಲಿ ಪತ್ನಿ ಡೋನಾ ಗಂಗೂಲಿ, ಪುತ್ರಿ ಸನಾ ಗಂಗೂಲಿ ಸೇರಿದಂತೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಭಾಗಿಯಾಗಿದ್ದರು. ಗಂಗೂಲಿ ಬಿಸಿಸಿಐ ಅಧ್ಯಕ್ಷರೂ ಆಗಿರುವ ಕಾರಣ ಬಿಸಿಸಿಐ ಪದಾಧಿಕಾರಿಗಳೂ ಹಾಜರಿದ್ದರು. ಆದರೆ ಆಕರ್ಷಣೆಯ ಕೇಂದ್ರಬಿಂದುವಾಗಿದ್ದದ್ದು ಸಚಿನ್ ತೆಂಡೂಲ್ಕರ್ ಮತ್ತು ಪತ್ನಿ ಅಂಜಲಿ ತೆಂಡೂಲ್ಕರ್.

ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಅವರದ್ದು ಏಕದಿನ ಕ್ರಿಕೆಟ್”ನಲ್ಲಿ ಅದ್ಭುತ ಆರಂಭಿಕ ಜೋಡಿ ಎಂದೇ ಹೆಸರು ಮಾಡಿತ್ತು. ಈ ಎಡಗೈ-ಬಲಗೈ ಜೋಡಿ ಏಕದಿನ ಕ್ರಿಕೆಟ್”ನಲ್ಲಿ ಪ್ರಥಮ ವಿಕೆಟ್”ಗೆ ವಿಶ್ವದಾಖಲೆಯ 21 ಶತಕದ ಜೊತೆಯಾಟಗಳನ್ನಾಡಿದೆ. ಒಟ್ಟು 136 ಏಕದಿನ ಪಂದ್ಯಗಳಲ್ಲಿ ಭಾರತ ಪರ ಇನ್ನಿಂಗ್ಸ್ ಆರಂಭಿಸಿದ್ದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜೋಡಿ, 49.32ರ ಸರಾಸರಿಯಲ್ಲಿ 6,609 ರನ್ ಕಲೆ ಹಾಕಿದೆ. ಇದರಲ್ಲಿ 21 ಶತಕದ ಜೊತೆಯಾಟಗಳು ಮತ್ತು 23 ಅರ್ಧಶತಕದ ಜೊತೆಯಾಟಗಳು ಸೇರಿವೆ.

ಏಕದಿನ ಕ್ರಿಕೆಟ್: ಸೌರವ್ –ಸಚಿನ್ ಓಪನಿಂಗ್ ರೆಕಾರ್ಡ್
ವರ್ಷ: 1996-2007
ಪಂದ್ಯ: 136
ರನ್: 6,609
ಸರಾಸರಿ: 49.32
ಬೆಸ್ಟ್: 258
ಶತಕ: 21
ಅರ್ಧಶತಕ: 23

ಭಾರತ ಪರ ಒಟ್ಟು 311 ಏಕದಿನ ಪಂದ್ಯಗಳನ್ನಾಡಿರುವ ಸೌರವ್ ಗಂಗೂಲಿ 22 ಶತಕಗಳ ಸಹಿತ 41ರ ಸರಾಸರಿಯಲ್ಲಿ 11,363 ರನ್ ಗಳಿಸಿದ್ದಾರೆ. 113 ಟೆಸ್ಟ್ ಪಂದ್ಯಗಳಿಂದ 16 ಶತಕಗಳ ಸಹಿತ 42ರ ಸರಾಸರಿಯಲ್ಲಿ 7,212 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Meerut’s Gold Coffee Café: ಮೀರತ್ ನ ಈ ಕೆಫೆಯಲ್ಲಿ ಸಿಗುತ್ತೆ ‘ಗೋಲ್ಡ್ ಕಾಫಿ ‘; ಯಾವ ಕೆಫೆ ಅಂತೀರಾ, ಈ ಸ್ಟೋರಿ ಓದಿ

ಇದನ್ನೂ ಓದಿ : 2 Days Holiday : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ದಿನ ಶಾಲೆಗಳಿಗೆ ರಜೆ : ಇಲ್ಲಿದೆ ಪರಿಷ್ಕೃತ ಆದೇಶ

Dada’s Sourav Ganguly 50th birthday “pre-birthday celebration” in London.. Tendulkar fed cake to Ganguly

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular