ಬ್ಯಾಟಿಂಗ್ ದಿಗ್ಗಜನ ಮಹಾಪತನ, 6 ವರ್ಷಗಳಲ್ಲಿ ಮೊದಲ ಬಾರಿ ಟಾಪ್-10ನಿಂದ ವಿರಾಟ್ ಕೊಹ್ಲಿ ಔಟ್ !

ಲಂಡನ್: ಮೂರೇ ಮೂರು ವರ್ಷಗಳ ಹಿಂದೆ ಕ್ರಿಕೆಟ್ ಜಗತ್ತನ್ನು ಅಕ್ಷರಶಃ ಆಳಿದ್ದ ವಿರಾಟ್ ಕೊಹ್ಲಿ, ಈಗ ಫಾರ್ಮ್ ಕಳೆದುಕೊಂಡಿದ್ದಾರೆ. ಮೈದಾನಕ್ಕಿಳಿದ್ರೆ ಸಾಕು ಲೀಲಾಜಾಲವಾಗಿ ರನ್ ಗಳಿಸುತ್ತಾ ಶತಕಗಳ ಮೇಲೆ ಶತಕಗಳನ್ನು ಬಾರಿಸುತ್ತಿದ್ದ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸದೆ ಎರಡೂವರೆ ವರ್ಷಗಳೇ ಕಳೆದು ಹೋಗಿವೆ. ಇದ್ರ ಎಫೆಕ್ಟ್ ಐಸಿಸಿ Rankingನಲ್ಲೂ ಗೋಚರಿಸುತ್ತಿದೆ. 6 ವರ್ಷಗಳಲ್ಲಿ ಇದೇ ಮೊದಲ ಬಾರಿ ವಿರಾಟ್ ಕೊಹ್ಲಿ, ಐಸಿಸಿ ಟೆಸ್ಟ್ ಬ್ಯಾಟಿಂಗ್ Rankingನಲ್ಲಿ ಟಾಪ್-10ನಿಂದ ಹೊರ ಬಿದ್ದಿದ್ದಾರೆ (Virat Kohli out of Top-10 in Test Ranking).

ಐಸಿಸಿ ಬಿಡುಗಡೆಗೊಳಿಸಿರುವ ನೂತನ ಟೆಸ್ಟ್ ಬ್ಯಾಟಿಂಗ್ Rankingನಲ್ಲಿ ವಿರಾಟ್ ಕೊಹ್ಲಿ, 4 ಸ್ಥಾನ ಕುಸಿತ ಕಂಡು 714 ರೇಟಿಂಗ್ ಪಾಯಿಂಟ್”ಗಳೊಂದಿಗೆ 13ನೇ ಸ್ಥಾನಕ್ಕೆ ಜಾರಿದ್ದಾರೆ. ಟಾಪ್-10ನಿಂದ ವಿರಾಟ್ ಹೊರ ಬೀಳುತ್ತಿರುವುದು 2016ರ ನಂತರ ಇದೇ ಮೊದಲು.

ಇಂಗ್ಲೆಂಡ್’ನ ರನ್ ಮಷಿನ್ ಜೋ ರೂಟ್ 923 ರೇಟಿಂಗ್ ಪಾಯಿಂಟ್”ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ರೆ, ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ (879), ಸ್ಟೀವ್ ಸ್ಮಿತ್ (826), ಪಾಕಿಸ್ತಾನದ ಬಾಬರ್ ಅಜಂ (815) ಮತ್ತು ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (801) ಟಾಪ್-5ನಲ್ಲಿ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ್ದ ರಿಷಭ್ ಪಂತ್ ಪ್ರಥಮ ಇನ್ನಿಂಗ್ಸ್’ನಲ್ಲಿ ಸ್ಫೋಟಕ ಶತಕ ಬಾರಿಸಿ 111 ಎಸೆತಗಳಲ್ಲಿ 146 ರನ್ ಸಿಡಿದ್ರೆ, ದ್ವಿತೀಯ ಇನ್ನಿಂಗ್ಸ್’ನಲ್ಲಿ 57 ರನ್ ಗಳಿಸಿದ್ದರು. ಈ ಅಮೋಘ ಆಟದ ಪರಿಣಾಮ ಐಸಿಸಿ ಬ್ಯಾಟಿಂಗ್ Rankingನಲ್ಲಿ ಐದು ಸ್ಥಾನ ಮೇಲಕ್ಕೆ ಜಿಗಿದಿರುವ ಪಂತ್, 5ನೇ Rank ಪಡೆದಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 9ನೇ ಸ್ಥಾನ ಪಡೆದಿದ್ದಾರೆ.

ಆದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್’ಗಳಲ್ಲಿ ವಿರಾಟ್ ಕೊಹ್ಲಿ 11 ರನ್ ಮತ್ತು 20 ರನ್ನಿಗೆ ಔಟಾಗುವ ಮೂಲಕ ವೈಫಲ್ಯ ಎದುರಿಸಿದ್ದರು. ಕಳೆದ ಶ್ರೀಲಂಕಾ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲೂ ದೊಡ್ಡ ಮೊತ್ತ ಗಳಿಸಲು ಕೊಹ್ಲಿ ವಿಫಲರಾಗಿದ್ದರು.

https://twitter.com/Trend_VKohli/status/1544672918658895874?s=20&t=N1xcvZarPEV7g7Lr9t3PJg

2019ರ ನವೆಂಬರ್”ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ನಡೆದ “ಡೇ-ನೈಟ್” ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ನಂತರ, ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಟೆಸ್ಟ್, ಏಕದಿನ ಹಾಗೂ ಟಿ20 ಸೇರಿ ಒಟ್ಟು 64 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ರೂ, ವಿರಾಟ್ ಕೊಹ್ಲಿಗೆ ಶತಕ ಭಾಗ್ಯ ಸಿಕ್ಕಿಲ್ಲ. ಈ 64 ಇನ್ನಿಂಗ್ಸ್’ಗಳಲ್ಲಿ ಕೊಹ್ಲಿ 25 ಅರ್ಧಶತಕಗಳನ್ನ ಬಾರಿಸಿದ್ದಾರೆ.

ಇದನ್ನೂ ಓದಿ : 2 Days Holiday : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ದಿನ ಶಾಲೆಗಳಿಗೆ ರಜೆ : ಇಲ್ಲಿದೆ ಪರಿಷ್ಕೃತ ಆದೇಶ

ಇದನ್ನೂ ಓದಿ : MS Dhoni Turns 41: ಅಭಿಮಾನಿಗಳಿಂದ ನಿರ್ಮಾಣವಾಯಿತು 41 ಅಡಿಯ ಧೋನಿ ಕಟೌಟ್‌

Virat Kohli out of Top-10 in Test Ranking of ICC’s Test batting rankings for the first time since 2016

Comments are closed.