Delhi vs Karnataka: ಕನ್ನಡಿಗರ ಪೌರುಷಕ್ಕೆ ಡೆಲ್ಲಿ ಢಮಾರ್, ಸತತ 4ನೇ ಜಯ ದಾಖಲಿಸಿದ ಕರ್ನಾಟಕ

ಕೋಲ್ಕತಾ: (Delhi vs Karnataka) ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ ಸತತ 4ನೇ ಗೆಲುವು ದಾಖಲಿಸಿದೆ.ಜಾಧವ್’ಪುರ ಯೂನಿವರ್ಸಿಟಿ ಕ್ಯಾಂಪಸ್ ಮೈದಾನದಲ್ಲಿ ಗುರುವಾರ ನಡೆದ ಎಲೈಟ್ ಗ್ರೂಪ್ ’ಬಿ’ ಹಂತದ ಪಂದ್ಯ(Delhi vs Karnataka) ದಲ್ಲಿ ಕರ್ನಾಟಕ ತಂಡ ದೆಹಲಿ ವಿರುದ್ಧ 4 ವಿಕೆಟ್’ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಎಲೈಟ್ ಗ್ರೂಪ್ ’ಬಿ’ನಲ್ಲಿ ಸತತ 4ನೇ ಗೆಲುವಿನೊಂದಿಗೆ 16 ಅಂಕ ಗಳಿಸಿ ಅಗ್ರಸ್ಥಾನದಲ್ಲಿ ಮುಂದುವರಿಯಿತು.

ಮಯಾಂಕ್ ಅಗರ್ವಾಲ್ ಗಾಯಗೊಂಡ ಕಾರಣ ಉಪನಾಯಕ ಆರ್.ಸಮರ್ಥ್ ಕರ್ನಾಟಕ ತಂಡವನ್ನು ಮುನ್ನಡೆಸಿ ಗೆಲುವು ತಂದುಕೊಟ್ಟರು.

ಗೆಲ್ಲಲು ದೆಹಲಿ ಒಡ್ಡಿದ 160 ರನ್’ಗಳ ಸುಲಭ ಗುರಿ ಬೆನ್ನಟ್ಟಿದ್ದ ಕರ್ನಾಟಕ, 29.4 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಜಯಭೇರಿ ಬಾರಿಸಿತು. ನಾಯಕನ ಆಟವಾಡಿದ ಸಮರ್ಥ್ 59 ರನ್ ಗಳಿಸಿದ್ರೆ, ಮಾಜಿ ನಾಯಕ ಮನೀಶ್ ಪಾಂಡೆ 37 ಎಸೆತಗಳಲ್ಲಿ 48 ರನ್ ಸಿಡಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದೆಹಲಿ, ಕರ್ನಾಟಕ ಬೌಲರ್’ಗಳ ಸಂಘಟಿತ ದಾಳಿಗೆ ತತ್ತರಿಸಿತು. ಮಧ್ಯಮ ವೇಗಿ ವಿ.ಕೌಶಿಕ್ ಅವರ ಕರಾರುವಾಕ್ ದಾಳಿಗೆ ಆರಂಭದಲ್ಲೇ ತತ್ತರಿಸಿದ ದೆಹಲಿಯನ್ನು ಕೆಳ ಕ್ರಮಾಂಕದಲ್ಲಿ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಕಟ್ಟಿ ಹಾಕಿದರು. ಅಮೋಘ ದಾಳಿ ಸಂಘಟಿಸಿದ ಕೌಶಿಕ್ 10 ಓವರ್’ಗಳಲ್ಲಿ 23 ರನ್ನಿತ್ತು 3 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ 25 ರನ್ನಿಗೆ 3 ವಿಕೆಟ್ ಉರುಳಿಸಿದರು. ಬಲಗೈ ಮಧ್ಯಮ ವೇಗಿ ವಿದ್ವತ್ ಕಾವೇರಪ್ಪ, ಕೃಷ್ಣಪ್ಪ ಗೌತಮ್ ಮತ್ತು ಯುವ ಆಲ್ರೌಂಡರ್ ಮನೋಜ್ ಭಾಂಡಗೆ ತಲಾ ಒಂದು ವಿಕೆಟ್ ಉರುಳಿಸಿದರು.
ಕರ್ನಾಟಕ ಬೌಲರ್’ಗಳ ಸಂಘಟಿತ ದಾಳಿಗೆ ಸಡ್ಡು ಹೊಡೆದ ಲಲಿತ್ ಯಾದವ್ 59 ರನ್ ಗಳಿಸಿದರೆ, ನಾಯಕ ನಿತೀಶ್ ರಾಣಾ 30 ರನ್’ಗಳ ಕಾಣಿಕೆಯಿತ್ತರು. ಅಂತಿಮವಾಗಿ ದೆಹಲಿ ತಂಡ 45.4 ಓವರ್’ಗಳಲ್ಲಿ 159 ರನ್’ಗಳಿಗೆ ಆಲೌಟಾಯಿತು.

ಇದನ್ನೂ ಓದಿ : Dhoni’s successor: ಸಿಎಸ್‌ಕೆ ಯಲ್ಲಿ ಧೋನಿ ಉತ್ತರಾಧಿಕಾರಿಯಾಗ್ತಾನಾ ಈ ಯುವ ಆಟಗಾರ..? ಚೆನ್ನೈ ನಾಯಕತ್ವಕ್ಕೆ ಅಚ್ಚರಿಯ ಆಯ್ಕೆ..?

ಇದನ್ನೂ ಓದಿ : Team India players in Beach : ವೆಲ್ಲಿಂಗ್ಟನ್ ಬೀಚ್‌ನಲ್ಲಿ ಟೀಮ್ ಇಂಡಿಯಾ ಆಟಗಾರರ “ಬಾಡಿ” ಪ್ರದರ್ಶನ, ವೀಡಿಯೊ ವೈರಲ್

ಇದನ್ನೂ ಓದಿ : India Vs NZ T20 Series: ನಾಳೆಯಿಂದ ಭಾರತ Vs ನ್ಯೂಜಿಲೆಂಜ್ ಟಿ20 ಸರಣಿ: ಒಂದೇ ಕ್ಲಿಕ್‌ನಲ್ಲಿ Live ಟೆಲಿಕಾಸ್ಟ್, ಪ್ಲೇಯಿಂಗ್ XI ಸಹಿತ ಕಂಪ್ಲೀಟ್ ಮಾಹಿತಿ

ಶನಿವಾರ (ನವೆಂಬರ್ 19) ನಡೆಯುವ ತನ್ನ ಐದನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಅಸ್ಸಾಂ ಸವಾಲನ್ನು ಎದುರಿಸಲಿದೆ.

(Delhi vs Karnataka) In the Vijay Hazare Trophy ODI tournament, the Karnataka team has recorded its 4th consecutive win. In the elite group ‘B’ stage match (Delhi vs Karnataka) held at the Jadhavpur University campus ground on Thursday, the Karnataka team recorded a 4-wicket win against Delhi. With this, they continued to lead Elite Group ‘B’ with 16 points with their 4th win in a row.

Comments are closed.