ಸೋಮವಾರ, ಏಪ್ರಿಲ್ 28, 2025
HomeSportsCricketDhoni Buys A 1971 Land Rover Series 3 Station Wagon: ಹರಾಜಿನಲ್ಲಿ ವಿಟೇಂಜ್...

Dhoni Buys A 1971 Land Rover Series 3 Station Wagon: ಹರಾಜಿನಲ್ಲಿ ವಿಟೇಂಜ್ ಕಾರು ಖರೀದಿಸಿದ ಎಂ.ಎಸ್.ದೋನಿ

- Advertisement -

1971ನೇ ಮಾಡಲ್‌(1971 Model)ನ ಲ್ಯಾಂಡ್ ರೋವರ್ ಸರಣಿಯ 3 ಸ್ಟೇಷನ್ ವ್ಯಾಗನ್(Land Rover Series 3 Station Wagon) ಕಾರನ್ನು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ದೋನಿ(M.S. Dhoni) ಖರೀದಿಸಿದ್ದಾರೆ. ಬಿಗ್ ಬಾಯ್ ಟಾಯ್ಜ್ (ಬಿಬಿಟಿ) ಆನ್ಲೈನ್ ಹರಾಜಿ(Big Boy Toyz’s Online Auction)ನ ಮೂಲಕ ವಿಂಟೇಜ್ ಕಾರುಗಳನ್ನು ಆನ್ಲೈನ್ ಮೂಲಕ ಹರಾಜು ಮಾಡುತ್ತಿದ್ದು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ದೋನಿ 1971ನೇ ಇಸ್ವಿಯ ಲ್ಯಾಂಡ್ ರೋವರ್ ಸರಣಿಯ 3 ಸ್ಟೇಷನ್‌ ವ್ಯಾಗನ್ ಕಾರನ್ನು ಖರೀದಿಸಿದ್ದಾರೆ.

ಲ್ಯಾಂಡ್ ರೋವರ್ ಹಳೆಯ ಕಾರಿನ ಜೊತೆಗೆ ಹೊಸ ಸರಣಿಯ ಕಾರೂ ಅವರ ಬಳಿ ಇದೆ. ಈಗ ಈವೆರಡನ್ನು ಇರಿಸಲು ದೋನಿಗೆ ತಮ್ಮ ರಾಂಚಿ ಮನೆಯ ಸಾಮಾನ್ಯ ಗ್ಯಾರೆಜ್ ಸಾಲದಾಗುತ್ತದೆ. ವಿಶಾಲವಾದ ಗ್ಯಾರೇಜ್ ಅನ್ನೇ ಅವರು ನಿರ್ಮಿಸಿಕೊಳ್ಳಬೇಕು. ಬಿಬಿಟಿ ಹರಾಜು ಪಟ್ಟಿಯಲ್ಲಿ ರೋಲ್ಸ್ ರಾಯ್, ಕ್ಯಾಡಿಲಾಕ್ಸ್, ಬ್ಯೂಕ್ಸ್, ಚೆವ್ರೊಲೆಟ್ಸ್, ಆಸ್ಟಿನ್, ಮರ್ಸಿಡಿಸ್‌ ಸೇರಿ 19 ಹಳೆಯ ಕಾರುಗಳನ್ನು ಇರಿಸಲಾಗಿತ್ತು. ಇದರಲ್ಲಿ 3 ಸ್ಟೇಷನ್ ವ್ಯಾಗನ್ ಅಪರೂಪದ ಸಂಗ್ರಹದ ಕಾರಾಗಿದ್ದು, ಹಳದಿ ಬಣ್ಣದ್ದಾಗಿದೆ. ಲ್ಯಾಂಡ್ ರೋವರ್‌ 1971ರಿಂದ 1985ರವರೆಗೆ ತಯಾರಿಸಿದ 4,40 ಲಕ್ಷ ಕಾರುಗಳಲ್ಲಿ ಜನರು ಅತ್ಯಂತ ಇಷ್ಟಪಟ್ಟ ಬಣ್ಣದ್ದಾಗಿದೆ. 2-3 ಲೀಟರ್ ಆಗಿದ್ದು, ನಾಲ್ಕು ಸಿಲಿಂಡರ್‌ಗಳಿರುವ 3.5 ಲೀಟರ್ ವಿ8 ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. ನಾಲ್ಕು ಮ್ಯಾನುವಲ್ ಗೇರ್‌ಗಳಿವೆ. ಆದರೆ, ಧೋನಿ ಖರೀದಿಸಿರುವ ಕಾರು ಇವುಗಳಲ್ಲಿ ಯಾವ ಮಾಡಲ್ ಇಂಜಿನ್ ಹೊಂದಿದೆ ಎಂಬುದು ಸ್ಪಷ್ಟವಾಗಿಲ್ಲ.

ವಿಟೇಂಜ್ ಕಾರುಗಳು ಕ್ಲಾಸಿಕ್ ವರ್ಗಕ್ಕೆ ಸೇರಿದ ಕಾರುಗಳಾಗಿವೆ. ಜಾಗತಿಕವಾಗಿ ಹಳೆಯ ಕಾರುಗಳುಗಳಿಗೆ ಬಹುದೊಡ್ಡ ಮಾರುಕಟ್ಟೆ ಇದ್ದು, ಇದು ಬಹುಕೋಟಿ ಡಾಲರ್ ಮೊತ್ತದ ವ್ಯವಹಾರ ನಡೆಸುತ್ತದೆ. ನಮ್ಮ ಕಂಪನಿಯು ಇದೇ ಮೊದಲ ಬಾರಿಗೆ ಭಾರತದಲ್ಲಿ ಆನ್ಲೈನ್ ಮೂಲಕ ಹರಾಜು ಪ್ರಕ್ರಿಯೆ ನಡೆಸಿದೆ ಎಂದು ಬಿಬಿಟಿ ಸಂಸ್ಥಾಪಕ ಜತಿನ್ ಅಹುಜಾ ಹೇಳಿದ್ದಾರೆ. ಭಾರತದಲ್ಲಿ ಹಳೆಯ ಕಾರುಗಳ ಪ್ರೇಮಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಹವ್ಯಾಸ, ಆಸಕ್ತಿಯಿಂದ ಖರೀದಿಸುವವರಿಗೆ ಬಿಬಿಟಿ ಉತ್ತಮ ಆಯ್ಕೆಗಳನ್ನು ಅನುಕೂಲಕರ ಬೆಲೆಯಲ್ಲಿ ನೀಡುತ್ತದೆ. ನೂರು ಕೋಟಿ ರೂಪಾಯಿ ಮಾರುಕಟ್ಟೆಯನ್ನು ಭಾರತದಲ್ಲಿ ಸೃಷ್ಟಿಸುವ ಉದ್ದೇಶ ಕಂಪನಿ ಹೊಂದಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಆನ್‌ಲೈನ್‌ ಹರಾಜು ನಡೆಸಲು ನಿರ್ಧರಿಸಿದೆ. ಮುಂದಿನ ಹರಾಜು ಫೆಬ್ರವರಿಯಲ್ಲಿ ನಡೆಯಲಿದೆ ಎಂದಿದ್ದಾರೆ.

ವೋಕ್ಸ್ವ್ಯಾಗನ್ ಬೀಟಲ್ ಕಾರಿನ ಹರಾಜಿನ ಆರಂಭ ಒಂದು ಲಕ್ಷ ರೂಪಾಯಿಯಿಂದ ಆರಂಭವಾಗಿ 25 ಲಕ್ಷ ರೂಪಾಯಿಗೆ ತಲುಪಿತು. ಉಳಿದ ಕಾರುಗಳು ಯಾವ ಬೆಲೆ ಇತ್ತು ಎಂಬುದು ತಿಳಿದುಬಂದಿಲ್ಲ. ದೋನಿ ಖರೀದಿಸಿದ ಕಾರಿನ ದರ ಎಷ್ಟು ಎಂಬುದು ಗೊತ್ತಾಗಿಲ್ಲ.

ಇದನ್ನೂ ಓದಿ: Rare Blanket Octopus : 20 ವರ್ಷಗಳ ನಂತರ ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ಕಂಬಳಿ ಆಕ್ಟೋಪಸ್

(MS Dhoni Buys A 1971 Land Rover Series 3 Station Wagon In BBT Online Auction)

RELATED ARTICLES

Most Popular