ದೆಹಲಿ:(Exclusive Rishabh Pant accident secret) ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant accident) ಚೇತರಿಸಿಕೊಳ್ಳುತ್ತಿದ್ದಾರೆ.ಡೆಹ್ರಾಡೂನ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಭ್ ಪಂತ್ ಅವರನ್ನು ಮುಂಬೈಗೆ ಏರ್ ಲಿಫ್ಟ್ ಮಾಡಲು ಬಿಸಿಸಿಐ ನಿರ್ಧರಿಸಿದೆ. ಏರ್ ಆ್ಯಂಬುಲೆನ್ಸ್ ಮೂಲಕ ಪಂತ್ ಅವರನ್ನು ಮುಂಬೈನ ಕೊಕಿಲಾ ಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಗೆ ಶಿಫ್ಟ್ ಮಾಡಲು ಬಿಸಿಸಿಐ ಮುಂದಾಗಿದೆ.
(Exclusive Rishabh Pant accident secret)25 ವರ್ಷದ ರಿಷಭ್ ಪಂತ್ ಡಿಸೆಂಬರ್ 30ರಂದು ಬೆಳಗ್ಗೆ ಐದೂವರೆಗೆ ದೆಹಲಿ ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ ರೂರ್ಕಿಯ ನರ್ಸನ್ ಬಳಿಯಿರುವ ಹಮ್ಜದ್’ಪುರ ಸಮೀಪ ಅಪಘಾತಕ್ಕೊಳಲಾಗಿದ್ದರು. ಪಂತ್ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ರಸ್ತೆ ಡಿವೈಡರ್’ಗೆ ಡಿಕ್ಕಿ ಹೊಡೆದಿತ್ತು. ಅತಿಯಾದ ವೇಗದಲ್ಲಿದ್ದ ಕಾರು ಡಿವೈಡರ್’ಗೆ ಬಂದಪ್ಪಳಿಸಿದ ಪರಿಣಾಮ ಕಾರು ಚಲಾಯಿಸುತ್ತಿದ್ದ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ ಪಂತ್ ಅವರ ಮುಖ, ಬೆನ್ನು, ಮೊಣಕಾಲು, ಪಾದಕ್ಕೆ ಗಾಯವಾಗಿತ್ತು.
ರೊರ್ಕಿಯಲ್ಲಿರುವ ತಾಯಿಯನ್ನು ನೋಡಲು ತೆರಳುತ್ತಿದ್ದಾಗ ರಿಷಭ್ ಪಂತ್ ಕಾರು ಅಪಘಾತಕ್ಕೀಡಾಗಿತ್ತು ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಬಿಸಿಸಿಐ ಮೂಲಗಳು ಹೇಳುತ್ತಿರುವ ಕಥೆಯೇ ಬೇರೆ. ಪಂತ್ ಅಪಘಾತಕ್ಕೆ ಕಾರಣ ಅವರ ಗರ್ಲ್ ಫ್ರೆಂಡ್ (Rishabh Pant girl friend).
ಇದನ್ನೂ ಓದಿ:Mysuru Chamundeswari Temple : ಮದುವೆಗೂ ಮುನ್ನ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ಕ್ರಿಕೆಟಿಗ ರಾಹುಲ್
ರಿಷಭ್ ಪಂತ್ ಅವರ ಗರ್ಲ್ ಫ್ರೆಂಡ್ ಉತ್ತರಾಖಂಡ್’ನ ಡೆಹ್ರಾಡೂನ್ ನಿವಾಸಿ. ಇಬ್ಬರೂ ಹೊಸ ವರ್ಷವನ್ನು ಆಚರಿಸಲು ಪ್ಲಾನ್ ಮಾಡಿಕೊಂಡಿದ್ದರು. ಹೀಗಾಗಿ ಡೆಹ್ರಾಡೂನ್’ಗೆ ಬಂದು ತನ್ನನ್ನು ಕರೆದುಕೊಂಡು ಹೋಗು ಎಂದು ಪಂತ್ ಬಳಿ ಗೆಳತಿ ದುಂಬಾಲು ಬಿದ್ದಿದ್ದಳಂತೆ. ಗೆಳತಿಯ ಒತ್ತಡಕ್ಕೆ ಬೇಸತ್ತ ಪಂತ್ ಶುಕ್ರವಾರ ಬೆಳ್ಳಂ ಬೆಳಗ್ಗೆ ಎದ್ದು ತಾವೇ ಅತೀ ವೇಗದಲ್ಲಿ ಕಾರು ಚಲಾಯಿಸಿಕೊಂಡು ಡೆಹ್ರಾಡೂನ್’ನತ್ತ ಹೊರಟಿದ್ದರು. ನಿದ್ದೆಯ ಮಂಪರಿನಲ್ಲಿದ್ದ ಕಾರಣ ರೊರ್ಕಿ ಬಳಿ ಕಾರು ಡಿವೈಡರ್’ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ನುಜ್ಜುನುಜ್ಜಾಗಿದ್ದು, ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಅಲ್ಲಿಗೆ ಬಂದ ಹರ್ಯಾಣದ ಟ್ರಕ್ ಡ್ರೈವರ್ ಒಬ್ಬರು ಹೊತ್ತಿ ಉರಿಯುತ್ತಿದ್ದ ಕಾರಿನಿಂದ ರಿಷಭ್ ಪಂತ್ ಅವರನ್ನು ಹೊರಗೆಳೆದು ಪ್ರಾಣ ಉಳಿಸಿದ್ದರು. ನಂತರ ಆಂಬ್ಯುಲೆನ್ಸ್’ಗೆ ಕರೆ ಮಾಡಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದರು.
Rishabh Pant accident secret Rishabh Pant Girlfriend is the cause of the accident!