Abhimanyu Eswaran century : ಅಪ್ಪ ಕಟ್ಟಿಸಿದ ತನ್ನದೇ ಹೆಸರಿನ ಕ್ರೀಡಾಂಗಣದಲ್ಲಿ ರಣಜಿ ಶತಕ ಬಾರಿಸಿದ ಮಗ

ಡೆಹ್ರಾಡೂನ್: ಮಗನ ಹೆಸರಲ್ಲಿ ಅಪ್ಪ ಕಟ್ಟಿಸಿದ ಕ್ರಿಕೆಟ್ ಕ್ರೀಡಾಂಗಣ… ಆ ಕ್ರೀಡಾಂಗಣದಲ್ಲಿ ರಣಜಿ ಶತಕ ಬಾರಿಸಿ ಮಿಂಚಿದ ಮಗ. ತನ್ನದೇ ಹೆಸರಿನಲ್ಲಿರುವ ತನ್ನ ಸ್ವಂತ ಕ್ರೀಡಾಂಗಣದಲ್ಲಿ ಶತಕ (Abhimanyu Eswaran century) ಬಾರಿಸಿ ಗಮನ ಸೆಳೆದಿದ್ದಾರೆ ಬಂಗಾಳ ಕ್ರಿಕೆಟ್ ತಂಡದ ನಾಯಕ ಅಭಿಮನ್ಯು ಈಶ್ವರನ್ (Abhimanyu Eswaran).

ಬಂಗಾಳ ಹಾಗೂ ಆತಿಥೇಯ ಉತ್ತರಾಖಂಡ್ ನಡುವಿನ ರಣಜಿ ಟ್ರೋಫಿ ಗ್ರೂಪ್ ‘ಬಿ’ ಪಂದ್ಯ ಉತ್ತರಾಖಂಡ್’ನ ಡೆಹ್ರಾಡೂನ್’ನಲ್ಲಿರುವ ಅಭಿಮನ್ಯು ಕ್ರಿಕೆಟ್ ಅಕಾಡೆಮಿ (Abhimanyu Cricket Academy) ಮೈದಾನದಲ್ಲಿ ನಡೆಯುತ್ತಿದೆ. ಇದು ಬಂಗಾಳ ತಂಡದ ನಾಯಕ ಅಭಿಮನ್ಯು ಈಶ್ವರನ್ (Abhimanyu Cricket Academy ground) ಅವರ ಹೆಸರಿನಲ್ಲಿ ತಂದೆ ನಿರ್ಮಿಸಿರುವ ಕ್ರಿಕೆಟ್ ಕ್ರೀಡಾಂಗಣ.ತಂದೆ ನಿರ್ಮಿಸಿದ ತನ್ನದೇ ಹೆಸರಿನಲ್ಲಿರುವ ಮೈದಾನದಲ್ಲಿ ಅಭಿಮನ್ಯು ಈಶ್ವರನ್ ಅಮೋಘ ಶತಕ ಬಾರಿಸಿದ್ದಾರೆ. 287 ಎಸೆತಗಳನ್ನೆದುರಿಸಿದ ಅಭಿಮನ್ಯು 14 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಆಕರ್ಷಕ 165 ರನ್ ಸಿಡಿಸಿದ್ದಾರೆ.

27 ವರ್ಷದ ಅಭಿಮನ್ಯು ಈಶ್ವರನ್ ಅವರ ತಂದೆ ರಂಗನಾಥನ್ ಪರಮೇಶ್ವರನ್ ತಮಿಳುನಾಡು ಮೂಲದವರು. ಮದುವೆಯಾಗಿದ್ದು ಪಂಜಾಬಿ ಮೂಲದವರನ್ನ. ತಮಿಳಿಯನ್ ತಂದೆ, ಪಂಜಾಬಿ ತಾಯಿಯ ಮಗ ಆಡಿದ್ದು ಮಾತ್ರ ಬಂಗಾಳ ಪರವಾಗಿ.ಡೆಹ್ರಾಡೂನ್’ನ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ 12 ಕಿ.ಮೀ ದೂರದಲ್ಲಿ ಈ ಕ್ರೀಡಾಂಗಣ ಎದ್ದು ನಿಂತಿದೆ. ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣದಲ್ಲಿ ಇದುವರೆಗೆ ಕಿರಿಯರ ವಯೋಮಿತಿಯ ಕ್ರಿಕೆಟ್ ಪಂದ್ಯಗಳು ನಡೆಯುತ್ತಿದ್ದು, ಇದೇ ಮೊದಲ ಬಾರಿ ರಣಜಿ ಪಂದ್ಯ ನಡೆಯುತ್ತಿದೆ.

ನಾನು ನ್ಯೂಸ್ ಪೇಪರ್ ಏಜೆಂಟ್ ಆಗಿದ್ದ ರಂಗನಾಥನ್ ಪರಮೇಶ್ವರನ್ ನಂತರ ಚಾರ್ಟೆಟ್ ಅಕೌಂಟೆಂಟ್ ಆಗ್ತಾರೆ. ಅದಾದ ನಂತರ ಕ್ರೀಡಾಂಗಣ ನಿರ್ಮಿಸುವ ಕನಸು ಹುಟ್ಟಿಕೊಂಡಾಗ 1988ರಲ್ಲಿ ಉತ್ತರಾಖಂಡ್’ನ ಡೆಹ್ರಾಡೂನ್’ನಲ್ಲಿ ಭೂಮಿ ಖರೀದಿಸಿ ಕ್ರೀಡಾಂಗಣ ನಿರ್ಮಿಸಿಯೇ ಬಿಡ್ತಾರೆ. ತಂದೆ ಕಟ್ಟಿಸಿದ ಮೈದಾನದಲ್ಲಿ ಮೊದಲ ಬಾರಿ ರಣಜಿ ಪಂದ್ಯವಾಡುತ್ತಿರುವ ಪುತ್ರ ಶತಕ ಬಾರಿಸಿ ತಂದೆಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾನೆ.

ಇದನ್ನೂ ಓದಿ : Mysuru Chamundeswari Temple : ಮದುವೆಗೂ ಮುನ್ನ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ಕ್ರಿಕೆಟಿಗ ರಾಹುಲ್

ಇದನ್ನೂ ಓದಿ : Saurashtra Cricket Association : ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್, ಜೈದೇವ್ ಉನಾದ್ಕಟ್ ದಾಳಿಗೆ ಡೆಲ್ಲಿ ಚಿಂದಿ ಚಿತ್ರಾನ್ನ : ಟಾಪ್-6ರಲ್ಲಿ ಐದು ಡಕ್

ಇದನ್ನೂ ಓದಿ : India Cricket Team Next Coach : ದ್ರಾವಿಡ್ ನಂತರ ಇವರೇ ಟೀಮ್ ಇಂಡಿಯಾ ಕೋಚ್, ಬಿಸಿಸಿಐ ಸೂಪರ್ ಪ್ಲಾನ್

ಬಲಗೈ ಆರಂಭಿಕ ಬ್ಯಾಟ್ಸ್’ಮನ್ ಆಗಿರುವ ಅಭಿಮನ್ಯು ಈಶ್ವರನ್ ಈಗಾಗಲೇ ಭಾರತ ‘ಎ’ ಪರ ಆಡಿದ ಅನುಭವ ಹೊಂದಿದ್ದಾರೆ. ಇತ್ತೀಚೆಗೆ ನಡೆದ ಬಾಂಗ್ಲಾಗೇಶ ವಿರುದ್ಧದ ಟೆಸ್ಟ್ ಸರಣಿಗೆ ಅಭಿಮನ್ಯು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಆದರೆ ಟೆಸ್ಟ್ ಪದಾರ್ಪಣೆಯ ಅವಕಾಶ ಸಿಕ್ಕಿರಲಿಲ್ಲ.ಇದುವರೆಗೆ 79 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಅಭಿಮನ್ಯು ಈಶ್ವರನ್ 46.33ರ ಸರಾಸರಿಯಲ್ಲಿ 19 ಶತಕಗಳ ಸಹಿತ 5746 ರನ್ ಕಲೆ ಹಾಕಿದ್ದಾರೆ. 78 ಲಿಸ್ಟ್ ‘ಎ’ ಪಂದ್ಯಗಳಿಂದ 46.24ರ ಸರಾಸರಿಯಲ್ಲಿ 7 ಶತಕಗಳ ಸಹಿತ 3376 ರನ್ ಗಳಿಸಿದ್ದಾರೆ.

Abhimanyu Eswaran century: The son who scored a Ranji century in his own stadium built by his father

Comments are closed.