ಸೋಮವಾರ, ಏಪ್ರಿಲ್ 28, 2025
HomeSportsCricketExclusive : ಕರ್ನಾಟಕ ರಣಜಿ ತಂಡಕ್ಕೆ ಸ್ಟುವರ್ಟ್ ಬಿನ್ನಿ ಕೋಚ್ ?

Exclusive : ಕರ್ನಾಟಕ ರಣಜಿ ತಂಡಕ್ಕೆ ಸ್ಟುವರ್ಟ್ ಬಿನ್ನಿ ಕೋಚ್ ?

- Advertisement -

ಬೆಂಗಳೂರು: ಭಾರತ ಪರ ಏಕದಿನ ಕ್ರಿಕೆಟ್’ನಲ್ಲಿ ಬೆಸ್ಟ್ ಬೌಲಿಂಗ್ ಸಾಧನೆಯ ದಾಖಲೆ ಹೊಂದಿರುವ ಕರ್ನಾಟಕ ತಂಡದ ಮಾಜಿ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ, ಮುಂದಿನ ದೇಶೀಯ ಕ್ರಿಕೆಟ್ ಋತುವಿಗೆ ರಾಜ್ಯ ರಣಜಿ ತಂಡದ ಕೋಚ್ ಆಗುವ ಸಾಧ್ಯತೆಯಿದೆ. 38 ವರ್ಷದ ಸ್ಟುವರ್ಟ್ ಬಿನ್ನಿ ಕ್ರಿಕೆಟ್”ಗೆ ನಿವೃತ್ತಿ ಘೋಷಿಸಿದ ನಂತರ ಕೋಚಿಂಗ್ ಫೀಲ್ಡ್’ಗೆ ಕಾಲಿಟ್ಟಿದ್ದು, ಆಗಸ್ಟ್ 7ರಿಂದ ಆರಂಭವಾಗಲಿರುವ KSCA ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮಂಗಳೂರು ಯುನೈಟೆಡ್ ತಂಡದ ಪ್ರಧಾನ ಕೋಚ್ ಆಗಿದ್ದಾರೆ. ಇದು ಕರ್ನಾಟಕ ತಂಡಕ್ಕೆ ಸ್ಟುವರ್ಟ್ ಬಿನ್ನಿ (Exclusive Stuart Binny to be Karnataka’s Next Coach) ಕೋಚ್ ಆಗುವ ಮೊದಲ ಹೆಜ್ಜೆ ಎನ್ನಲಾಗ್ತಿದೆ.

ರಾಜ್ಯ ತಂಡದ ಹಾಲಿ ಕೋಚ್’ಗಳಾದ ಯರೇ ಗೌಡ ಮತ್ತು ಎಸ್.ಅರವಿಂದ್ ಅವರ ಕಾರ್ಯಾವಧಿಯನ್ನು ಮುಂದುವರಿಸದಿರಲು ರಾಜ್ಯ ಕ್ರಿಕೆಟ್ ಸಂಸ್ಥೆಯ ನಿರ್ಧರಿಸಿದೆ. ಹೀಗಾಗಿ KSCA ಹೊಸ ಕೋಚ್’ಗಳ ಹುಡುಕಾಟದಲ್ಲಿದ್ದು, ಕರ್ನಾಟಕದವರೇ ಆಗಿರುವ ಸ್ಟುವರ್ಟ್ ಬಿನ್ನಿ ನೂತನ ಕೋಚ್ ಆಗುವ ಸಾಧ್ಯತೆಯಿದೆ. ಬಿನ್ನಿ ಅವರ ಜೊತೆ ಕರ್ನಾಟಕ ತಂಡದ ಮಾಜಿ ನಾಯಕ ಮತ್ತು ಮಾಜಿ ಕೋಚ್ ಕೂಡ ಆಗಿರುವ ಪಿ.ವಿ ಶಶಿಕಾಂತ್ ರಾಜ್ಯ ತಂಡದ ತರಬೇತುದಾರರಾಗಲಿದ್ದಾರೆ ಎಂದು KSCA ಮೂಲಗಳು ತಿಳಿಸಿವೆ.

95 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಸ್ಟುವರ್ಟ್ ಬಿನ್ನಿ, 11 ಶತಕಗಳ ಸಹಿತ 4,796 ರನ್ ಗಳಿಸಿದ್ದು, 148 ವಿಕೆಟ್’ಗಳನ್ನೂ ಪಡೆದಿದ್ದಾರೆ. 100 ಲಿಸ್ಟ್ ಎ ಪಂದ್ಯಗಳಿಂದ 1,788 ರನ್ ಮತ್ತು 99 ವಿಕೆಟ್ ಪಡೆದಿದ್ದಾರೆ. 6 ಟೆಸ್ಟ್, 14 ಏಕದಿನ ಹಾಗೂ 3 ಟಿ2 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2014ರಲ್ಲಿ ಬಾಂಗ್ಲಾದೇಶ ವಿರುದ್ಧ ಮೀರ್’ಪುರ್”ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಸ್ಟುವರ್ಟ್ ಬಿನ್ನಿ 4.4 ಓವರ್’ಗಳಲ್ಲಿ ಕೇವಲ 4 ರನ್ನಿತ್ತು 6 ವಿಕೆಟ್ ಪಡೆದಿದ್ದರು. ಇದು ಭಾರತ ಪರ ಏಕದಿನ ಕ್ರಿಕೆಟ್’ನಲ್ಲಿ ದಾಖಲಾಗಿರುವ ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್.

ಕರ್ನಾಟಕ ತಂಡದ ಹಾಲಿ ಕೋಚ್’ಗಳಾದ ಯರೇ ಗೌಡ ಮತ್ತು ಎಸ್.ಅರವಿಂದ್ ಅವಧಿಯಲ್ಲಿ ಕರ್ನಾಟಕ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. 2018ರಲ್ಲಿ ಯರೇಗೌಡ ಮತ್ತು ಎಸ್.ಅರವಿಂದ್ ಕರ್ನಾಟಕ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಕೋಚ್’ಗಳಾಗಿ ನೇಮಕಗೊಂಡಿದ್ದರು. ಇವರ ಅವಧಿಯಲ್ಲಿ ಕರ್ನಾಟಕ ತಂಡ ಎರಡು ಬಾರಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಮತ್ತು ಒಮ್ಮೆ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.

ಯರೇಗೌಡ-ಎಸ್.ಅರವಿಂದ್ ಕೋಚಿಂಗ್ ಸಾಧನೆ
ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ
2018-19: ಚಾಂಪಿಯನ್ಸ್
2019-20: ಚಾಂಪಿಯನ್ಸ್
ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ
2019-20: ಚಾಂಪಿಯನ್ಸ್

ಇದನ್ನೂ ಓದಿ : Uefa womens euro 2022 : ಸೌರವ್ ಗಂಗೂಲಿ ಶೈಲಿಯಲ್ಲಿ ಮೈದಾನದಲ್ಲೇ ಜೆರ್ಸಿ ಕಳಚಿದ ಮಹಿಳಾ ಫುಟ್ಬಾಲ್​ ಆಟಗಾರ್ತಿ

ಇದನ್ನೂ ಓದಿ : Pat Cummins Marriage : ತನ್ನ ಮಗುವಿನ ತಾಯಿಯನ್ನೇ ಮದುವೆಯಾದ ಆಸ್ಟ್ರೇಲಿಯಾ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್

Exclusive Stuart Binny to be Karnataka’s Next Coach?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular