KSCA Maharaja Trophy T20 : ಗುಲ್ಬರ್ಗ ಮಿಸ್ಟಿಕ್ಸ್‌ಗೆ ಮನೀಶ್ ಕ್ಯಾಪ್ಟನ್, ಬೆಂಗಳೂರು ಬ್ಲಾಸ್ಟರ್ಸ್‌ಗೆ ಮಯಾಂಕ್ ನಾಯಕ

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಸ್ಟಾರ್, ಕರ್ನಾಟಕ ತಂಡದ ನಾಯಕ, ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ ತಂಡದ ಆಟಗಾರ ಮನೀಶ್ ಪಾಂಡೆ (Manish Pandey), KSCA ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಗುರ್ಬರ್ಗ ಮಿಸ್ಟಿಕ್ಸ್ ತಂಡವನ್ನು(Manish Pandey captain Gulbarga Mystics) ಮುನ್ನಡೆಸಲಿದ್ದಾರೆ. ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಟೀಮ್ ಇಂಡಿಯಾದ ಮತ್ತೊಬ್ಬ ಸ್ಟಾರ್ ಮಯಾಂಕ್ ಅಗರ್ವಾಲ್ (Mayank Agarwal) ಮುನ್ನಡೆಸಲಿದ್ದಾರೆ. ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಹಿರಿಯ ಅನುಭವಿ ವೇಗಿ ಅಭಿಮನ್ಯು ಮಿಥುನ್ (A Mithun) ನಾಯಕರಾಗುವ ಸಾಧ್ಯತೆಯಿದೆ. ಮಂಗಳೂರು ಯುನೈಟೆಡ್ ತಂಡಕ್ಕೆ ರಾಜ್ಯ ರಣಜಿ ತಂಡದ ಉಪನಾಯಕ ಆರ್.ಸಮರ್ಥ್ (R Samarth) ನಾಯಕರಾಗುವ ಸಾಧ್ಯತೆಗಳು ಹೆಚ್ಚು. ಮೈಸೂರು ವಾರಿಯರ್ಸ್ ತಂಡದ ನಾಯಕತ್ವ ಕರುಣ್ ನಾಯರ್ (Karun Nair) ಕೈಗೆ ಸಿಗುವ ಸಾಧ್ಯತೆಗಳಿದ್ರೆ, ಶಿವಮೊಗ್ಗ ಸ್ಟ್ರೈಕರ್ಸ್ ತಂಡದ ಚುಕ್ಕಾಣಿ ಆಲ್ರೌಂಡರ್ ಕೆ.ಗೌತಮ್ (Krishnappa Gowtham) ಕೈಗೆ ಸಿಗುವ ಸಾಧ್ಯತೆಯಿದೆ.

ಶನಿವಾರವಷ್ಟೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಟಗಾರರ ಡ್ರಾಫ್ಟ್ ನಡೆದಿತ್ತು. ಐಪಿಎಲ್’ನಲ್ಲಿ ಆಡಿರುವ ಕರ್ನಾಟಕ ತಂಡದ ಸ್ಟಾರ್ ಆಟಗಾರಾರದ ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್, ಅಭಿಮನ್ಯು ಮಿಥುನ್, ಕೆ.ಗೌತಮ್, ಜೆ.ಸುಚಿತ್, ಕೆ.ಸಿ ಕಾರಿಯಪ್ಪ, ದೇವದತ್ ಪಡಿಕ್ಕಲ್ ಸಹಿತ ರಾಜ್ಯದ ಪ್ರಮುಖ ಆಟಗಾರರೆಲ್ಲಾ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಲಿದ್ದಾರೆ.

KSCA ಮಹಾರಾಜ ಟ್ರೋಫಿ ಟಿ20ಯಲ್ಲಿ ಆಟಗಾರರು ಪಡೆಯಲಿರುವ ಸಂಭಾವನೆ ಎಷ್ಟು?

Category A
ಭಾರತ ಪರ ಮತ್ತು ಐಪಿಎಲ್ ಆಡಿದ ಆಟಗಾರರು: ₹ 5 ಲಕ್ಷ

Category B
ಕರ್ನಾಟಕ ಪರ ರಣಜಿ ಟ್ರೋಫಿ, ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕನಿಷ್ಠ ಒಂದು ಪಂದ್ಯವಾಡಿದ ಆಟಗಾರರು: ₹ 2 ಲಕ್ಷ

Category C
ಅಂಡರ್-19, ಅಂಡರ್-23 ಟೂರ್ನಿಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಆಟಗಾರರು: ₹ 1 ಲಕ್ಷ

Category D
ಉದಯೋನ್ಮುಖ ಆಟಗಾರರು: ₹ 50,000

ಬೆಂಗಳೂರು ಬ್ಲಾಸ್ಟರ್ಸ್:
ಮಯಾಂಕ್ ಅಗರ್ವಾಲ್, ಜೆ.ಸುಚಿತ್, ಅನಿರುದ್ಧ ಜೋಶಿ, ಟಿ.ಪ್ರದೀಪ್, ಕ್ರಾಂತಿ ಕುಮಾರ್, ಚೇತನ್ ಎಲ್.ಆರ್., ಅನೀಶ್ ಕೆ.ವಿ., ಕುಮಾರ್ ಎಲ್.ಆರ್., ರಕ್ಷಿತ್ ಶಿವಕುಮಾರ್, ರಿಷಿ ಬೋಪಣ್ಣ, ಸಂತೋಖ್ ಸಿಂಗ್, ಸೂರಜ್ ಅಹುಜಾ, ಲೋಚನ್ ಗೌಡ, ರೋನಿತ್ ಮೋರೆ, ಸೀನ್ ಇಶಾನ್ ಜೋಸೆಫ್, ಕುಷ್ ಮರಾಠೆ, ತನಯ್ ವಾಲ್ಮಿಕ್.
ಕೋಚ್: ಟಿ.ನಾಸಿರುದ್ದೀನ್.
ಅಸಿಸ್ಟೆಂಟ್ ಕೋಚ್: ಕೆ.ಬಿ ಪವನ್
ಸೆಲೆಕ್ಟರ್: ರಘೋತ್ತಮ್ ನಾವ್ಳಿ

ಗುಲ್ಬರ್ಗ ಮಿಸ್ಟಿಕ್ಸ್:
ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ಸಿ.ಎ ಕಾರ್ತಿಕ್, ಮನೋಜ್ ಭಾಂಡಗೆ, ಕೃತಿಕ್ ಕೃಷ್ಣ, ಅಭಿಲಾಷ್ ಶೆಟ್ಟಿ, ಕುಶಾಲ್ ವಾಧ್ವಾನಿ, ಪ್ರಣವ್ ಭಾಟಿಯಾ, ಕೆ.ಎಲ್ ಶ್ರೀಜಿತ್, ರಿತೇಶ್ ಭಟ್ಕಳ್, ಮೋಹಿತ್ ಬಿ.ಎ., ರೋಹನ್ ಪಾಟೀಲ್, ಧನುಷ್ ಗೌಡ, ಮೊಹಮ್ಮದ್ ಅಕಿಬ್ ಜಾವೆದ್, ವಿದ್ವತ್ ಕಾವೇರಪ್ಪ, ಯಶ್ವಂತ್ ಆಚಾರ್ಯ, ಆರೋನ್ ಕ್ರಿಸ್ಟೀ, ಶ್ರೀಶ ಆಚಾರ್.
ಕೋಚ್: ಮನ್ಸೂರ್ ಅಲಿ ಖಾನ್.
ಅಸಿಸ್ಟೆಂಟ್ ಕೋಚ್: ರಾಜಶೇಖರ್ ಶಾನ್’ಬಾಲ್
ಸೆಲೆಕ್ಟರ್: ಸಂತೋಷ್ ವಿ.

ಹುಬ್ಬಳ್ಳಿ ಟೈಗರ್ಸ್:
ಅಭಿಮನ್ಯು ಮಿಥುನ್, ಲವ್ನೀತ್ ಸಿಸೋಡಿಯಾ, ವಿ.ಕೌಶಿಕ್, ಲಿಯಾನ್ ಖಾನ್, ನವೀನ್ ಎಂ.ಜಿ., ಆನಂದ್ ದೊಡ್ಡಮಣಿ, ಶಿವಕುಮಾರ್ ಬಿ.ಯು., ತುಷಾರ್ ಸಿಂಗ್, ಅಕ್ಷಣ್ ರಾವ್, ಜಹೂರ್ ಫರೂಕಿ, ರೋಹನ್ ನವೀನ್, ಸೌರವ್ ಶ್ರೀವಾತ್ಸವ್, ಸಾಗರ್ ಸೋಳಂಕಿ, ಗೌತಮ್ ಸಾಗರ್, ರೋಹನ್ ಎ., ರಾಹುಲ್ ಸಿಂಗ್ ರಾವತ್, ಶಿಶಿರ್ ಭವಾನೆ, ಶರಣ್ ಗೌಡ.
ಕೋಚ್: ದೀಪಕ್ ಚೌಗುಲೆ.
ಅಸಿಸ್ಟೆಂಟ್ ಕೋಚ್: ರಾಜೂ ಭಟ್ಕಳ್
ಸೆಲೆಕ್ಟರ್: ಆನಂದ್ ಕಟ್ಟಿ

ಮಂಗಳೂರು ಯುನೈಟೆಡ್:
ಅಭಿನವ್ ಮನೋಹರ್, ಆರ್.ಸಮರ್ಥ್, ವೈಶಾಖ್ ವಿಜಯ್ ಕುಮಾರ್, ಅಮಿತ್ ವರ್ಮಾ, ಎಂ.ವೆಂಕಟೇಶ್, ಅನೀಶ್ವರ್ ಗೌತಮ್, ಸುಜಯ್ ಸತೇರಿ, ರೋಹಿತ್ ಕುಮಾರ್ ಎ.ಸಿ., ಮ್ಯಾಕ್ನೀಲ್ ನೊರೊನ್ಹಾ, ಎಚ್.ಎಸ್ ಶರತ್, ಶಶಿಕುಮಾರ್ ಕೆ., ನಿಕಿನ್ ಜೋಸ್, ರಘುವೀರ್, ಅಮೋಘ್ ಎಸ್., ಚಿನ್ಮಯ್ ಎನ್.ಎ., ಆದಿತ್ಯ ಸೋಮಣ್ಣ, ಯಶ್ವರ್ಧನ್, ಧೀರಜ್ ಗೌಡ.
ಕೋಚ್: ಸ್ಟುವರ್ಟ್ ಬಿನ್ನಿ.
ಅಸಿಸ್ಟೆಂಟ್ ಕೋಚ್: ಸಿ.ರಾಘವೇಂದ್ರ
ಸೆಲೆಕ್ಟರ್: ಎಂ.ವಿ ಪ್ರಶಾಂತ್

ಮೈಸೂರು ವಾರಿಯರ್ಸ್:
ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಶುಭಾಂಗ್ ಹೆಗ್ಡೆ, ಪವನ್ ದೇಶಪಾಂಡೆ, ವಿದ್ಯಾಧರ್ ಪಾಟೀಲ್, ನಿಹಾಲ್ ಉಳ್ಳಾಲ್, ಪ್ರತೀಕ್ ಜೈನ್, ಲೋಚನ್ ಅಪ್ಪಣ್ಣ, ಚಿರಂಜೀವಿ ಜಿ.ಎಸ್., ನಾಗಾ ಭರತ್, ಭರತ್ ಧುರಿ, ಶಿವರಾಜ್, ಮನೀಶ್ ರೆಡ್ಡಿ, ವರುಣ್ ರಾವ್, ರಾಹುಲ್ ಪ್ರಸನ್ನ, ನಿತಿನ್ ಬಿಲ್ಲೆ, ಆದಿತ್ಯ ಗೋಯೆಲ್, ಅಭಿಷೇಕ್ ಅಹ್ಲಾವತ್.
ಕೋಚ್: ಪಿ.ವಿ ಶಶಿಕಾಂತ್.
ಅಸಿಸ್ಟೆಂಟ್ ಕೋಚ್: ಎಸ್.ಎಲ್ ಅಕ್ಷಯ್
ಸೆಲೆಕ್ಟರ್: ಕೆ.ಎಲ್ ಅಶ್ವತ್ಥ್

ಶಿವಮೊಗ್ಗ ಸ್ಟ್ರೈಕರ್ಸ್:
ಕೆ.ಗೌತಮ್, ಕೆ.ಸಿ ಕಾರಿಯಪ್ಪ, ರೋಹನ್ ಕದಂ, ಕೆ.ವಿ ಸಿದ್ಧಾರ್ಥ್, ದರ್ಶನ್ ಎಂ.ಬಿ., ಸ್ಟಾಲಿನ್ ಹೂವರ್, ಅವಿನಾಶ್ ಡಿ., ಸ್ಮರಣ್ ಆರ್., ಬಿ.ಆರ್ ಶರತ್, ರಾಜ್ವೀರ್ ವಾಧ್ವಾ, ರಾಜೇಂದ್ರ ಡಂಗನವರ್, ಉತ್ತಮ್ ಅಯ್ಯಪ್ಪ, ಚೈತನ್ಯ ಎಸ್., ಶ್ರೇಯಸ್ ಬಿ.ಎಂ, ಕೆ.ಎಸ್ ದೇವಯ್ಯ, ವಿನಯ್ ಸಾಗರ್, ಶ್ರೇಯಸ್ ಎಸ್.ಪಿ., ಪುನೀತ್ ಎಸ್.
ಕೋಚ್: ನಿಖಿಲ್ ಹಲ್ದೀಪುರ್.
ಅಸಿಸ್ಟೆಂಟ್ ಕೋಚ್: ಆದಿತ್ಯ ಸಾಗರ್
ಸೆಲೆಕ್ಟರ್: ಎ.ಆರ್ ಮಹೇಶ್

ಇದನ್ನೂ ಓದಿ : IND-W vs PAK-W : ಪಾಕ್ ಮಹಿಳೆಯರ ವಿರುದ್ಧ ಭಾರತದ ವನಿತೆಯರಿಗೆ ಭರ್ಜರಿ ಜಯ

ಇದನ್ನೂ ಓದಿ : Exclusive : ಕರ್ನಾಟಕ ರಣಜಿ ತಂಡಕ್ಕೆ ಸ್ಟುವರ್ಟ್ ಬಿನ್ನಿ ಕೋಚ್ ?

KSCA Maharaja Trophy T20 Manish Pandey captain Gulbarga Mystics, Mayank Agarwal captain for Bangalore Blasters

Comments are closed.