ಬೆಂಗಳೂರು: ವಿಶ್ವಕಪ್ ಹೀರೋ ಯುವರಾಜ್ ಸಿಂಗ್ (World Cup Hero Yuvraj Singh) ಭಾರತಕ್ಕೆ ಎರಡು ವಿಶ್ವಕಪ್”ಗಳನ್ನು ಗೆದ್ದು ಕೊಟ್ಟ ದಿಗ್ಗಜ. 2007ರ ಐಸಿಸಿ ಟಿ20 ವಿಶ್ವಕಪ್, 2011ರ ಐಸಿಸಿ ಏಕದಿನ ವಿಶ್ವಕಪ್, ಈ ಎರಡೂ ಟೂರ್ನಿಗಳಲ್ಲಿ ಅದ್ಭುತ ಆಟವಾಡಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದವರು ಯುವಿ.

ಕ್ರಿಕೆಟ್ ಆಡುತ್ತಿದ್ದಾಗಲೇ ಯುವರಾಜ್ ಸಿಂಗ್, ಬಾಲಿವುಡ್ ನಟಿ ಹೇಜಲ್ ಕೀಚ್ ಅವರನ್ನು ವಿವಾಹವಾಗಿದ್ದರು. ಇಂಗ್ಲೆಂಡ್ ಸಂಜಾನೆ ಹೇಜಲ್ ಕೀಚ್ ಭಾರತದಲ್ಲೇ ನೆಲೆಸಿದ್ದು, ಯುವರಾಜ್ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಯುವಿ-ಹೇಜಲ್ ದಂಪತಿಗೆ ಕೆಲವೇ ತಿಂಗಳ ಹಿಂದೆ ಗಂಡು ಮಗುವಾಗಿತ್ತು. ಇದೀಗ ಯುವಿ ದಂಪತಿ ತಮ್ಮ ಮಗುವಿಗೆ ನಾಮಕರಣ ಮಾಡಿದ್ದಾರೆ.

ಅಂದ ಹಾಗೆ ಯುವರಾಜ್ ಸಿಂಗ್-ಹೇಜಲ್ ಕೀಚ್ ದಂಪತಿಯ ಪುತ್ರನ ಹೆಸರು “ಒರಾಯನ್ ಕೀಚ್ ಸಿಂಗ್” (𝗢𝗿𝗶𝗼𝗻 𝗞𝗲𝗲𝗰𝗵 𝗦𝗶𝗻𝗴𝗵). ಪುತ್ರನ ಹೆಸರಲ್ಲಿ ತಂದೆ-ತಾಯಿ ಇಬ್ಬರ ಸರ್’ನೇಮ್ ಇರುವುದು ವಿಶೇಷ. ಮತ್ತೊಂದು ವಿಶೇಷ ಏನಂದ್ರೆ ಯುವಿ-ಕೀಚ್ ದಂಪತಿ “ವಿಶ್ವ ಅಪ್ಪಂದಿರ ದಿನ”ವೇ ಪುತ್ರನಿಗೆ ನಾಮಕರಣ ಮಾಡಿದ್ದಾರೆ. (Yuvraj Singh reveals name of his son on father’s day). ಪುತ್ರನ ನಾಮಕರಣದ ಸಂಭ್ರಮವನ್ನು ಯುವರಾಜ್ ಸಿಂಗ್ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
Welcome to the world 𝗢𝗿𝗶𝗼𝗻 𝗞𝗲𝗲𝗰𝗵 𝗦𝗶𝗻𝗴𝗵 ❤️. Mummy and Daddy love their little “puttar”. Your eyes twinkle with every smile just as your name is written amongst the stars ✨ #HappyFathersDay @hazelkeech pic.twitter.com/a3ozeX7gtS
— Yuvraj Singh (@YUVSTRONG12) June 19, 2022
ಯುವರಾಜ್ ಸಿಂಗ್ 2016ರ ನವೆಂಬರ್ 30ರಂದು ಹೇಜಲ್ ಕೀಚ್ ಅವರನ್ನು ವಿವಾಹವಾಗಿದ್ದರು. ವೈಟ್ ಬಾಲ್ ಕ್ರಿಕೆಟ್”ನಲ್ಲಿ ಭಾರತೀಯ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಮ್ಯಾಚ್ ವಿನ್ನರ್ ಆಗಿರುವ ಯುವರಾಜ್ ಸಿಂಗ್, ಭಾರತ ಪರ 40 ಟೆಸ್ಟ್, 304 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನಾಡಿದ್ದಾರೆ. ಕ್ರಿಕೆಟ್ ಮೂರೂ ಪ್ರಕಾರಗಳಲ್ಲಿ 17 ಶತಕಗಳ ಸಹಿತ ಒಟ್ಟು 11,778 ರನ್ ಗಳಿಸಿದ್ದಾರೆ. 40 ವರ್ಷದ ಯುವರಾಜ್ ಸಿಂಗ್ 2019ರ ಜೂನ್ 10ರಂದು ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದರು.
ಇದನ್ನೂ ಓದಿ : Father’s Day special : ಅಪ್ಪ ಹೀರೊ, ಮಗ ಝೀರೊ : ಕ್ರಿಕೆಟ್ ಜಗತ್ತಿನ ಇಂಟರಸ್ಟಿಂಗ್ ಕಹಾನಿ
ಇದನ್ನೂ ಓದಿ : ICC T20 WC ಟಿ20 ವಿಶ್ವಕಪ್ : ಭಾರತ ತಂಡದ ‘ಫಸ್ಟ್ ಚಾಯ್ಸ್’ ಆಟಗಾರ ಇವನೇ !
Father’s Day: Yuvraj Singh reveals name of his son