Andrew Flintoff : ಕಾರು ಅಪಘಾತದಲ್ಲಿ ಆ್ಯಂಡ್ರ್ಯೂ ಫ್ಲಿಂಟಾಫ್‌ಗೆ ಗಂಭೀರ ಗಾಯ, ಆಸ್ಪತ್ರೆಗೆ ಏರ್ ಲಿಫ್ಟ್

ಲಂಡನ್: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಲ್ರೌಂಡರ್’ಗಳಲ್ಲಿ ಒಬ್ಬರಾಗಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಆ್ಯಂಡ್ರ್ಯೂ ಫ್ಲಿಂಟಾಫ್ (Andrew Flintoff) ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಅಪಘಾತ ನಡೆದ ಸ್ಥಳದಿಂದ ಫ್ಲಿಂಟಾಫ್ ಅವರನ್ನು ಏರ್ ಲಿಫ್ಟ್ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

45 ವರ್ಷದ ಆ್ಯಂಡ್ರ್ಯೂ ಫ್ಲಿಂಟಾಫ್ ಬಿಬಿಸಿ ಸೀರೀಸ್’ನ ಎಪಿಸೋಡ್ ಒಂದರಲ್ಲಿ ನಟಿಸುತ್ತಿದ್ದು, ಸರ್ರೆಯಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಈ ಅಪಘಾತ ಸಂಭವಿಸಿದೆ. ಶೂಟಿಂಗ್ ವೇಳೆ ಪ್ಲಿಂಟಾಫ್ ಗಂಟೆಗೆ 124 ಕಿ.ಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಸಹನಟನ ಕಾರಿಗೆ ಫ್ಲಿಂಟಾಫ್ ಕಾರು ಢಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಗಾಯಗೊಂಡ ಫ್ಲಿಂಟಾಫ್ ಅವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಫ್ಲಿಂಟಾಫ್ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಬೇರೆ ಕಡೆ ಶಿಫ್ಟ್ ಮಾಡಲಾಗಿದೆ.

ಆ್ಯಂಡ್ರ್ಯೂ ಫ್ಲಿಂಟಾಫ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ. ಇಂಗ್ಲೆಂಡ್ ಪರ 79 ಟೆಸ್ಟ್ ಹಾಗೂ 141 ಏಕದಿನ ಪಂದ್ಯಗಳನ್ನಾಡಿರುವ ಬಲಗೈ ಆಲ್ರೌಂಡರ್ ಆ್ಯಂಡ್ರ್ಯೂ ಫ್ಲಿಂಟಾಫ್ 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಿಂದ ನಿವೃತ್ತಿಯಾಗಿದ್ದರು. ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್’ಗಳಲ್ಲಿ ಒಬ್ಬರಾಗಿರುವ ಆ್ಯಂಡ್ರ್ಯೂ ಫ್ಲಿಂಟಾಫ್ 79 ಟೆಸ್ಟ್ ಪಂದ್ಯಗಳಿಂದ 3845 ರನ್ ಗಳಿಸಿದ್ದು, 5 ಶತಕ ಹಾಗೂ 26 ಅರ್ಧಶತಕಗಳನ್ನ ಬಾರಿಸಿದ್ದಾರೆ. ಅಷ್ಟೇ ಅಲ್ಲ, ಟೆಸ್ಟ್ ಕ್ರಿಕೆಟ್’ನಲ್ಲಿ 226 ವಿಕೆಟ್’ಗಳನ್ನೂ ಕಬಳಿಸಿದ್ದಾರೆ.

ಇನ್ನು 141 ಏಕದಿನ ಪಂದ್ಯಗಳಿಂದ 3 ಶತಕ ಹಾಗೂ 18 ಅರ್ಧಶತಕಗಳ ಸಹಿತ 3394 ರನ್ ಗಳಿಸಿರುವ ಫ್ಲಿಂಟಾಫ್ 169 ವಿಕೆಟ್’ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ಪರ 7 ಟಿ20 ಪಂದ್ಯಗಳನ್ನೂ ಆಡಿರುವ ಫ್ಲಿಂಟಾಫ್ 76 ರನ್ ಹಾಗೂ 5 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 227 ಪಂದ್ಯಗಳನ್ನಾಡಿರುವ ಫ್ಲಿಂಟಾಫ್, 7315 ರನ್ ಹಾಗೂ 400 ವಿಕೆಟ್’ಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಆಲ್ರೌಂಡರ್’ಗಳಲ್ಲಿ ಒಬ್ಬರು ಎನಿಸಿದ್ದಾರೆ.

ಇದನ್ನೂ ಓದಿ :  7.44 ಪಂದ್ಯಕ್ಕೊಂದು ಸೆಂಚುರಿ, ಶತಕ ಬೇಟೆಯಲ್ಲೂ ಸಚಿನ್ ತೆಂಡೂಲ್ಕರ್‌ಗಿಂತ ಕಿಂಗ್ ಕೊಹ್ಲಿಯೇ ಬೆಸ್ಟ್

ಇದನ್ನೂ ಓದಿ : Sanju Samson play Ireland: ಐರ್ಲೆಂಡ್ ಪರ ಆಡಲಿದ್ದಾರಾ ಸಂಜು ಸ್ಯಾಮ್ಸನ್.. ಐರ್ಲೆಂಡ್ ಆಫರ್‌ಗೆ ಸಂಜು ಹೇಳಿದ್ದೇನು ?

former England All Rounder Andrew Flintoff hospitalized after car crash

Comments are closed.