Irfan Pathan :ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್ ದಂಪತಿ ಇಂದು ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಇರ್ಫಾನ್ ಖಾನ್ ಹಾಗೂ ಸಫಾ ದಂಪತಿಗೆ ಗಂಡು ಮಗು ಜನಿಸಿದ್ದು ಈ ಶುಭ ಸುದ್ದಿಯನ್ನು ಇನ್ಸ್ಟಾಗ್ರಾಂನಲ್ಲಿ ಪಠಾಣ್ ಹಂಚಿಕೊಂಡಿದ್ದಾರೆ.
ಇರ್ಫಾನ್ ಪಠಾಣ್ ಹಾಗೂ ಸಫಾ ಬೈಗ್ ದಂಪತಿಗೆ ಈಗಾಗಲೇ ಓರ್ವ ಗಂಡು ಪುತ್ರನಿದ್ದಾನೆ. ಪುತ್ರ ಇಮ್ರಾನ್ ಖಾನ್ ಪಠಾಣ್ 2016ರ ಡಿಸೆಂಬರ್ 20ರಂದು ಜನಿಸಿದ್ದ.
ಈ ಶುಭ ಸುದ್ದಿಯನ್ನು ಇರ್ಫಾನ್ ಖಾನ್ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು ಆಸ್ಪತ್ರೆಯಲ್ಲಿ ತಾಯಿ ಹಾಗೂ ಮಗು ಇಬ್ಬರೂ ಆರಾಮಾಗಿ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್ ಮಾಡಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸಫಾ ಹಾಗೂ ನಾನು ಗಂಡು ಮಗುವನ್ನು ಬರಮಾಡಿಕೊಂಡಿದ್ದೇವೆ. ತಾಯಿ ಮಗು ಇಬ್ಬರೂ ಆರಾಮಾಗಿ ಇದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.
ರಾಯ್ಪುರದಲ್ಲಿ ಸಚಿನ್ ತೆಂಡಲ್ಕೂರ್ ನಾಯಕತ್ವದಲ್ಲಿ ಕಳೆದ ವರ್ಷ ನಡೆದಿದ್ದ ರೋಡ್ ಸೇಫ್ಟಿ ವರ್ಲ್ಡ್ ಸರಣಿಯಲ್ಲಿ ಆಟವಾಡಿದ್ದರು. ಇರ್ಫಾನ್ ಖಾನ್ ಕಳೆದ ವರ್ಷ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
ಇರ್ಫಾನ್ ಖಾನ್ ಈವರೆಗೆ 29 ಟೆಸ್ಟ್, 120 ಏಕದಿನ ಪಂದ್ಯ ಹಾಗೂ 24 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಪಂದ್ಯದಲ್ಲಿ 100 ವಿಕೆಟ್ಗಳನ್ನು ಕಬಳಿಸಿರುವ ಇರ್ಫಾನ್ ಪಠಾಣ್ ಏಕದಿನ ಪಂದ್ಯಗಳಲ್ಲಿ 173 ವಿಕೆಟ್ಗಳನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ಟಿ 20 ಪಂದ್ಯಾವಳಿಗಳಲ್ಲಿ 28 ವಿಕೆಟ್ಗಳನ್ನು ಸಂಪಾದಿಸಿದ್ದಾರೆ.
ಇರ್ಫಾನ್ ಖಾನ್ 2016ರ ಫೆಬ್ರವರಿ 4ರಂದು ಮೆಕ್ಕಾದಲ್ಲಿ ಹೈದರಾಬಾದ್ ಮೂಲದ ಮಾಡೆಲ್ ಸಫಾ ಬೈಗ್ರನ್ನು ವರಿಸಿದ್ದರು. ಪಠಾಣ್ ದಂಪತಿಗೆ ಈಗಾಗಲೇ ಓರ್ವ ಪುತ್ರನಿದ್ದಾನೆ. ಇದೀಗ ಇವರ ಕುಟುಂಬಕ್ಕೆ ಮತ್ತೊಬ್ಬ ಸದಸ್ಯನ ಸೇರ್ಪಡೆಯಾಗಿದ್ದು ಎರಡನೆಯ ಪುತ್ರನಿಗೆ ಸುಲೈಮಾನ್ ಖಾನ್ ಎಂದು ಹೆಸರಿಟ್ಟಿದ್ದಾರೆ.
ಇರ್ಫಾನ್ ಪಠಾಣ್ 2003ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ವೇಳೆಯಲ್ಲಿ ಇವರನ್ನು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ರ ಮತ್ತೊಂದು ರೂಪವೆಂದೇ ಬಣ್ಣಿಸಲಾಗಿತ್ತು. ಆದರೆ ನಿರಂತರ ಗಾಯ ಹಾಗೂ ಫಾರ್ಮ್ ನಿಂದಾಗಿ ವೃತ್ತಿ ಜೀವನದ ಅತ್ಯಂತ ಶೀಘ್ರವಾಗಿ ವಿಫಲಗೊಂಡಿತ್ತು. 2012ರಲ್ಲಿ ಇರ್ಫಾನ್ ಪಠಾಣ್ ಟೀಂ ಇಂಡಿಯಾ ಪರವಾಗಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು.
ಒಂದು ಕಾಲದಲ್ಲಿ ವಿಶ್ವದ ಅತ್ಯುತ್ತಮ ಆಲ್ರೌಂಡ್ ಪ್ರತಿಭೆಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಪಠಾಣ್ ಬೌಲಿಂಗ್ ವಿಭಾಗದಲ್ಲಿ ಪರಾಕ್ರಮರಾಗಿದ್ದರೂ ಸಹ ಕೋಚ್ ಗ್ರೇಗ್ ಚಾಪೆಲ್ ಅವರ ಮಾರ್ಗದರ್ಶನದಲ್ಲಿ ಏಕದಿನ ಪಂದ್ಯಗಳಲ್ಲಿ ನಿಯಮಿತವಾಗಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 1105 ರನ್ಗಳನ್ನು ಪೇರಿಸಿದ್ದಾರೆ. ಏಕದಿನ ಪಂದ್ಯಾವಳಿಗಳಲ್ಲಿ ಈ ಎಡಗೈ ಆಟಗಾರ 1544 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ 172 ರನ್ಗಳನ್ನು ಸಂಪಾದಿಸಿದ್ದಾರೆ
Former Indian cricketer Irfan Pathan blessed with baby boy
ಇದನ್ನು ಓದಿ : Pro Kabaddi 8 Day 4 Highlights: ಚೊಚ್ಚಲ ಗೆಲುವು ಸಾಧಿಸಿದ ಯುಪಿ ಯೋಧಾಸ್; ಪಾಟ್ನಾ ಪೈರೇಟ್ಸ್ ಸೋಲಿಗೆ ಕಾರಣಗಳು ಇಲ್ಲಿವೆ
ಇದನ್ನೂ ಓದಿ : Ahmedabad IPL 2022 : ಗ್ಯಾರಿ ಕ್ರಿಸ್ಟನ್, ಆಶಿಶ್ ನೆಹ್ರಾ, ವಿಕ್ರಮ್ ಸೋಲಂಕಿ ಸೆಳೆಯಲು ಮುಂದಾದ ಅಹಮದಾಬಾದ್