Jammu Kashmir Real Estate Summit : ದೇಶವಾಸಿಯೋ, ಇನ್ನು ಜಮ್ಮು ಕಾಶ್ಮೀರದಲ್ಲೂ ಸೈಟು ಖರೀದಿಸಿ

ಬಾಹ್ಯಾಕಾಶದಲ್ಲಿ ಬೇಕಾದರೂ ಭೂಮಿ ಖರೀದಿಸಬಹುದಿತ್ತು, ಆದರೆ, ಕಾಶ್ಮೀರದಲ್ಲಿ ಅರ್ಧ ಅಡಿ ಜಾಗಕೊಳ್ಳುವಂತಿರಲಿಲ್ಲ. ಈಗ ಹಾಗಿಲ್ಲ, ದೇಶದ ಇತರೆ ಭಾಗದ ಜನಗಳು ಕೂಡ ಜಮ್ಮುಕಾಶ್ಮೀರಕ್ಕೆ (Jammu Kashmir) ಬಂದು, ಭೂಮಿ ಖರೀದಿಸಿ ನೆಲೆಸುವ ಅವಕಾಶವನ್ನುರಿಯಲ್ ಎಸ್ಟೇಟ್ ಶೃಂಗಸಭೆ ಬಹಿರಂಗಗೊಳಿಸಿದೆ ಜಮ್ಮುಕಾಶ್ಮೀರ- ರಾಜ್ಯಕ್ಕಿದ್ದ ವಿಶೇಷ ಪ್ರಾತಿನಿಧಿತ್ವವನ್ನು ಕೇಂದ್ರ ಸರ್ಕಾರ ತೆಗೆದುಹಾಕಿದ ನಂತರ ಮೊದಲಬಾರಿಗೆ ಜಮ್ಮು ಕಾಶ್ಮೀರದಲ್ಲಿ (Jammu Kashmir Real Estate) ರಿಯಲ್ ಎಸ್ಟೇಟ್ ಶೃಂಗಸಭೆ ನಡೆಯಿತು. ದೇಶದ ವಿವಿಧ ಭಾಗದಲ್ಲಿ ವಾಸಿಸುತ್ತಿರುವವರು ಕೂಡ ಇಲ್ಲಿ ಬಂದು ಕೃಷಿಯೇತರ ಭೂಮಿಯನ್ನು (Non Agriculture Land) ಕೊಳ್ಳಲು, ಭೂ ವಾಣಿಜ್ಯವ್ಯವಹಾರಗಳನ್ನು ನಡೆಸಲು ಅನುವಾಗುವಂತೆ ಕೇಂದ್ರ ಸರ್ಕಾರ ಹೊಸ ಕಾನೂನನ್ನು (Union Government Law) ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ಹಾಗೂ ಜಮ್ಮು ಕಾಶ್ಮೀರ ಆಡಳಿತವು ಜಂಟಿಯಾಗಿ ಸೋಮವಾರ ಜಮ್ಮು ಕಾಶ್ಮೀರ ರಿಯಲ್ ಎಸ್ಟೇಟ್ ಶೃಂಗ ಸಭೆಯನ್ನು (Jammu Kashmir Real Estate Summit) ಏರ್ಪಡಿಸಿತ್ತು.

ಸಭೆಯಲ್ಲಿ 39 ಒಪ್ಪಂದಗಳಾಗಿದ್ದು, ಸರ್ಕಾರ 19 ವಸತಿ ನಿರ್ಮಾಣಕ್ಕೆ ನಾನಾ ಕಂಪೆನಿಗಳಿಗೆ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿರೋಧಪಕ್ಷಗಳು ಶೃಂಗಸಭೆಗೆ ತೀವ್ರ ವಿರೋಧವ್ಯಕ್ತಪಡಿಸಿ, ಸರ್ಕಾರ ಜಮ್ಮು ಕಾಶ್ಮೀರವನ್ನು ಮಾರಾಟಕ್ಕೆ ಇಟ್ಟಿದೆ ಎಂದು ಟೀಕಿಸಿದೆ. ದೇಶದ ಇತರೆ ಭಾಗದ ಜನಗಳು ನಾವು ಅಲ್ಲಿನ ಶಾಶ್ವತ ನಿವಾಸಿಗಳು ಅಂತ ಜಾಹೀರಾತು ಕೊಟ್ಟಿಲ್ಲ. ಅವರೂ ಕೂಡ ಜಮ್ಮು ಕಾಶ್ಮೀರದಲ್ಲಿ ಬಂದು, ಭೂಮಿ ಖರೀದಿಸಿ ನೆಲೆಸುವ ಅವಕಾಶವನ್ನು ಸರ್ಕಾರ ಒದಗಿಸಿದೆ. ಈ ಹಿಂದೆ, ಜಮ್ಮು ಕಾಶ್ಮೀರದಲ್ಲಿ ಭೂಮಿ ಕೊಳ್ಳುವುದನ್ನು ಸಂಪೂರ್ಣ ನಿಷೇಧಿಸಿತ್ತು. ಹೀಗಾಗಿ, ಕೇಂದ್ರವು ಇದಕ್ಕೆ ಅವಕಾಶ ಕೊಟ್ಟಿದ್ದ ವಿಶೇಷ ಕಾಯ್ದೆ 370 ಅನ್ನು ಆಗಸ್ಟ್ 2019ರಂದು ರದ್ದು ಪಡಿಸಿತು ಎಂದು ಸಭೆಯಲ್ಲಿ ಘೋಷಿಸಲಾಯಿತು.

ಜಮ್ಮು ಕಾಶ್ಮೀರ ಆಡಳಿತವು, ಡಿಸೆಂಬರ್ 27ರಂದು ನಡೆದ ರಿಯಲ್ ಎಸ್ಟೇಟ್ ಶೃಂಗಸಭೆಯನ್ನು ಐತಿಹಾಸಿಕ ಮನ್ವಂತರ ದಿಕ್ಸೂಚಿ ಎಂದು ಬಣ್ಣಿಸಿದೆ. ಇದೇ ಸಂದರ್ಭದಲ್ಲಿ, ಲೆಫ್ಟಿನೆಂಟ್ ಗೌರ್ನರ್ ಸಿನ್ಹಾ, ಇಂಥದೇ ಶೃಂಗಸಭೆ 2022ರ ಮೇ ತಿಂಗಳಲ್ಲಿ ಶ್ರೀನಗರದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ನಾವು ಈ ರಾಜ್ಯದ ಶಾಶ್ವತ ವಾಸಿಗರು, ಬೇರಾರಿಗೂ ಇಲ್ಲಿ ಸ್ಥಾನವಿಲ್ಲ ಎನ್ನುವ ಧೋರಣೆಯನ್ನು ಸರ್ಕಾರ ಹೊಸ ಜಮ್ಮ ಕಾಶ್ಮೀರ ಅಭಿವೃದ್ಧಿ ಕಾಯ್ದೆಯ ಮೂಲಕ ಹೊಸಕಿಹಾಕಿದೆ.
ಹೊರಗಿನವರು ಇಲ್ಲಿ ಬಂದು ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸುವ ಮೂಲಕ ಆರ್ಥಿಕ ಚೇತರಿಕೆ ನೀಡುವುದೇ ನಮ್ಮ ಅಜೆಂಡ ಎನ್ನುವುದನ್ನು ಸಭೆಯು ಸಾರಿತು.

ಕಳೆದ ವಾರ ಜಮ್ಮುಕಾಶ್ಮೀರದ ಆಡಳಿತವು, ಲೆಫ್ಟಿನೆಂಟ್ ಮನೋಜ್ ಸಿನ್ಹ ಅವರ ನೇತೃತ್ವದಲ್ಲಿ ಭೂಮಿ ಬಳಕೆಗೆ ಸಂಬಂಧಿಸಿದ ಕಾನೂನನ್ನು ಬದಲಿಸಿ, ಕೃಷಿ ಹಾಗೂ ಕೃಷಿಯೇತರ ಚಟುವಟಿಕೆ ಅಂತೆಲ್ಲ ವಿಭಾಗಿಸಿತ್ತು. ಇದರಿಂದ ಕುಪಿತಗೊಂಡ ವಿರೋಧ ಪಕ್ಷಗಳು ತೀವ್ರತರ ಆಕ್ಷೇಪ ವ್ಯಕ್ತಪಡಿಸಿದ್ದವು.

ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದ್ದರೆ, ನೀವು ಇಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದೀರ. ಮೊದಲು ಉದ್ಯೋಗ ಸೃಷ್ಟಿ ಕಡೆಗೆ ಗಮನಕೊಡಿ ಎಂದು ತರಾಟೆಗೆ ತೆಗೆದುಕೊಂಡಿತು. ಇತ್ತೀಚೆಗಷ್ಟೇ, ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಪ್ರಾತಿನಿಧ್ಯ ತೆಗೆದುಹಾಕಿದ ಮೇಲೆ ಅಲ್ಲಿ 7 ಸೈಟುಗಳಾಗುವಷ್ಟು ಭೂಮಿ ಮಾರಾಟವಾಗಿದೆ ಎಂದು ಕೇಂದ್ರಸರ್ಕಾರವು ಲೋಕಸಭೆಗೆ ಮಾಹಿತಿ ನೀಡಿತ್ತು. ಎಲ್ಲದರ ನಡುವೆ ಡಿಸೆಂಬರ್ 27ರಂದು ರಿಯಲ್ ಎಸ್ಟೇಟ್ ಶೃಂಗಸಭೆ ನಡೆದಿದೆ.

ವರದಿ: ಕಟ್ಟೆ ಗುರುರಾಜ್

ಇದನ್ನೂ ಓದಿ: Perfume City : ಒಂದಾನೊಂದು ಕಾಲದಲ್ಲಿ ಭಾರತದ ಈ ನಗರದ ಚರಂಡಿಯಲ್ಲೂ ಸುಗಂಧ ದ್ರವ್ಯ ಹರಿಯುತ್ತಿತ್ತಂತೆ!

(Jammu And Kashmir Opens Up For Real Estate Investors MoUs Worth Rs 18300 Crore Signed)

Comments are closed.